Vinay Kulkarni: ಕೊಲೆ ಆರೋಪಿಗಳಿಗೆ ರೆಡ್‌ ಕಾರ್ಪೆಟ್‌ ‘ಕೈ’ ಸಂಸ್ಕೃತಿ: ಬಿಜೆಪಿ

ಬೆಂಗಳೂರು: ಅತ್ತ ಬಿಜೆಪಿ ವಿರುದ್ಧ ಕಾಂಗ್ರೆಸ್ ಟ್ವೀಟ್ ಮೂಲಕ ಲಿಂಗಾಯತ ಅಸ್ತ್ರ ಪ್ರಯೋಗಿಸುತ್ತಿದೆ, ಇನ್ನೊಂದು ಕಡೆ ಕಾಂಗ್ರೆಸ್ ನಾಯಕರ ವಿರುದ್ಧ ಬಿಜೆಪಿ ಕೂಡ ಹಲವು ಅಸ್ತ್ರಗಳನ್ನ ಪ್ರಯೋಗಿಸಲು ಮುಂದಾಗಿದೆ. ಇದೀಗ ಕಾಂಗ್ರೆಸ್ ಪಕ್ಷದ ಮಾಜಿ ಸಚಿವ ಹಾಗೂ ಹಾಲಿ ಅಭ್ಯರ್ಥಿ ವಿನಯ್ ಕುಲಕರ್ಣಿ ವಿರುದ್ಧ ಬಿಜೆಪಿ ಟ್ವೀಟ್ ವಾರ್ ಶುರುಮಾಡಿದೆ.

'ಕೊಲೆ ಆರೋಪಿಗಳಿಗೆ ರೆಡ್‌ ಕಾರ್ಪೆಟ್‌ ಹಾಕಿ ಟಿಕೆಟ್‌ ಕೊಟ್ಟು ಆದರಿಸುವುದು @INCKarnatakaದ ಸಂಸ್ಕೃತಿ. ಆದರೆ ನ್ಯಾಯಾಂಗ ವ್ಯವಸ್ಥೆ ಸಮಾಜಘಾತುಕ ವ್ಯಕ್ತಿಗಳನ್ನು ಸುಮ್ಮನೆ ಬಿಡುವುದಿಲ್ಲ ಎನ್ನುವುದಕ್ಕೆ ಧಾರವಾಡದಿಂದ ಗಡಿಪಾರಾಗಿರುವ A1 ಕೊಲೆ ಆರೋಪಿ @vinaykulkarniJH ಅವರೇ ಪ್ರತ್ಯಕ್ಷ ಸಾಕ್ಷಿ #CriminalCongress' ಎಂದು ಟ್ವೀಟ್ ಮಾಡಿದೆ ಬಿಜೆಪಿ. ಇಷ್ಟಕ್ಕೇ ತನ್ನ ಟ್ವೀಟ್ ವಾರ್ ಮಗಿಸದೆ, ವಿನಯ್ ಕುಲಕರ್ಣಿಗೆ ಸಂಬಂಧಿಸಿದ ಹಳೆಯ ವಿಡಿಯೋ ಕೂಡ ಪೋಸ್ಟ್ ಮಾಡಲಾಗಿದೆ.

BJP alleged that Congress is supporting to criminals

'ಬೇಲ್ ಮೇಲೆ ಹೊರಗಿರುವ..'

'ಬಿಜೆಪಿ ಕಾರ್ಯಕರ್ತನ ಕೊಲೆಯ ಕೇಸಿನಲ್ಲಿ ಹಿಂಡಲಗಾ ಜೈಲು ಸೇರಿ ಬೇಲ್ ಮೇಲೆ ಹೊರಗಿರುವ
@vinaykulkarniJHಗೆ ಧಾರವಾಡ ಜಿಲ್ಲೆಗೆ ನ್ಯಾಯಾಲಯ ಪ್ರವೇಶವನ್ನು ನಿರಾಕರಿಸಿದೆ. ಈತನ ವಿರುದ್ಧ 90 ಸಾಕ್ಷಿಗಳಿದ್ದು, ಚುನಾವಣೆ ಸಮಯದಲ್ಲಿ ಸಾಕ್ಷಿನಾಶ ಮಾಡುವುದಕ್ಕೆ ನಿಂತಿದ್ದ ಗೂಂಡಾಗಳಿಗೆ ಇದರಿಂದ ಹಿನ್ನಡೆಯಾಗಿದೆ. #CriminalCongress' ಎಂಬ ಗಂಭೀರ ಆರೋಪವನ್ನ ಕರ್ನಾಟಕ ಕಾಂಗ್ರೆಸ್ ವಿರುದ್ಧ ಟ್ವೀಟ್ ಮೂಲಕ ಮಾಡಿದೆ ಕರ್ನಾಟಕ ಬಿಜೆಪಿ ಘಟಕ.

'ಎಂತೆಂಥ ಮುತ್ತುಗಳನ್ನು ಕಣಕ್ಕಿಳಿಸಿದೆ'

'#ReverseGearCongress ಎಂತೆಂಥ ಮುತ್ತುಗಳನ್ನು ಕಣಕ್ಕಿಳಿಸಿದೆ ಎನ್ನುವುದರ ತಾಜಾ ಮತ್ತು ಅತ್ಯುತ್ತಮ ಉದಾಹರಣೆಯೇ ಈ ವಿನಯ್ ಕುಲಕರ್ಣಿ. ಕರ್ತವ್ಯನಿರತ ಸರ್ಕಾರಿ ವೈದ್ಯರ ಮೇಲೆ ಖುದ್ದು ಹಲ್ಲೆ ಮಾಡಿದ್ದ ಈತನಿಂದ ಸಾಮಾನ್ಯ ಜನ ಯಾವ ಸುರಕ್ಷತೆ ಬಯಸಿಯಾರು? #CriminalCongress' ಎಂದು ಹಳೆಯ ವಿಡಿಯೋ ಒಂದನ್ನ ತನ್ನ ಟ್ವೀಟ್‌ನಲ್ಲಿ ಪೋಸ್ಟ್ ಮಾಡಿದೆ ಕರ್ನಾಟಕ ಬಿಜೆಪಿ ಘಟಕ. ಇನ್ನು ಈ ಟ್ವೀಟ್ ಕುರಿತು ಈಗಾಗಲೇ ಸಾಕಷ್ಟು ಚರ್ಚೆಗಳು ಶುರುವಾಗಿವೆ.

ಮಾಜಿ ಸಿಎಂಗೆ ಬಿಜೆಪಿ ತಿರುಗೇಟು!

'ಅಂದು ಧರ್ಮವನ್ನು ಒಡೆಯಲು ಯತ್ನಿಸಿದ ಬಾದಾಮಿ ಶಾಸಕ @siddaramaiahನವರ ಬೆನ್ನಿಗೆ ನಿಂತಿದ್ದು ಇದೇ @vinaykulkarniJH. ಇಂದು ಕಂಠಮಟ್ಟ ಕುಡಿದ ಅಮಲಿನಲ್ಲಿ ಸ್ವಾಮೀಜಿಗಳಿಗೆ ಕರೆ ಮಾಡಿ ಧಮಕಿ ಹಾಕಿ ತಮ್ಮ ಉತ್ತರ ಕುಮಾರನ ಪೌರುಷ ತೋರಿಸಿದ ಈತನ ಬೆನ್ನಿಗಿರುವ #CriminalCongress ಅನ್ನು ರಾಜ್ಯದ ಲಿಂಗಾಯತ ಸಮುದಾಯ ಕ್ಷಮಿಸುವುದಿಲ್ಲ.' ಎಂದು ಪೋಸ್ಟ್ ಹಾಕುವ ಮೂಲಕ ಹೊಸ ಅಸ್ತ್ರ ಪ್ರಯೋಗ ಮಾಡಿದೆ ಬಿಜೆಪಿ.

ಕಾಂಗ್ರೆಸ್ ಕೂಡ ಬೆಳಗ್ಗೆ ಬಿಜೆಪಿ ವಿರುದ್ಧ ಟ್ವೀಟ್ ಒಂದನ್ನ ಮಾಡಿ, ಉತ್ತರ ಪ್ರದೇಶ ಮಾದರಿ ಎಂಬ ಕೇಸರಿ ಕಲಿಗಳ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿತ್ತು. ಈಗ ಬಿಜೆಪಿಯ ಟ್ವೀಟ್ ಅದೇ ಟ್ವೀಟ್‌ಗೆ ಕೌಂಟರ್ ಕೊಟ್ಟಂತೆ ಕಾಣುತ್ತಿದೆ. 'ಅತ್ಯಾಚಾರ, ಅನಾಚಾರಗಳ ರಾಜಧಾನಿ ಎಂದೇ ಖ್ಯಾತಿ ಪಡೆದ ಉತ್ತರ ಪ್ರದೇಶವು @BJP4Karnatakaಗೆ ಮಾದರಿಯಂತೆ.' ಎಂದು ಕಾಂಗ್ರೆಸ್ ಬಿಜೆಪಿ ನಾಯಕನ್ನು ಕೆಣಕಿತ್ತು.

ಒಟ್ಟಾರೆ ಮತದಾನಕ್ಕೆ ಕೌಂಟ್‌ಡೌನ್ ಶುರುವಾಗಿರುವ ಬೆನ್ನಲ್ಲೇ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಟ್ವೀಟ್ ವಾರ್ ಬಲು ಜೋರಾಗಿದೆ. ಈ ನಡುವೆ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಪಕ್ಷ ಬಿಟ್ಟಿರುವುದು ಬಿಜೆಪಿ ನಾಯಕರನ್ನು ಕೆರಳಿಸಿದೆ. ಇದರ ಜೊತೆಗೆ ಲಕ್ಷ್ಮಣ ಸವದಿ ವಿಚಾರ ಇಟ್ಟುಕೊಂಡು ಬಿಜೆಪಿಗೆ ತಿರುಗೇಟು ನೀಡುತ್ತಿದ್ದ ಕಾಂಗ್ರೆಸ್ ವಿರುದ್ಧ ಇದೀಗ ಬಿಜೆಪಿ ಬೇರೆಯದ್ದೇ ಅಸ್ತ್ರ ಪ್ರಯೋಗಿಸಿದೆ. ಇಷ್ಟೆಲ್ಲದರ ನಡುವೆ ರಾಜ್ಯದಲ್ಲಿ ಮೇ 10ರಂದು ಚುನಾವಣೆ ನಡೆಯಲಿದ್ದು, ಮೇ 13ರಂದು ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ. ಬಿಜೆಪಿ ಟ್ವೀಟ್‌ಗೆ ಕಾಂಗ್ರೆಸ್ ಉತ್ತರ ಹೇಗಿರುತ್ತೆ ಎಂಬುದನ್ನ ಕಾದು ನೋಡಬೇಕು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+