ಡಿ.ಕೆ.ಶಿವಕುಮಾರ್ ಎದುರೇ ಲಾಯರ್ ಜಗದೀಶ್ ಕಿರಿಕ್, ಯಾವ ಕಾರಣಕ್ಕೆ?
ರಾಜಕಾರಣಿಗಳು, ಸೆಲೆಬ್ರಿಟಿಗಳ ಬಗ್ಗೆ ವಿವಾದಾತ್ಮಕ ಹೇಳಿಕೆಗಳನ್ನು ನೀಡುತ್ತಾ ಸೋಷಿಯಲ್ ಸ್ಟಾರ್ ಆಗಿರುವ ಬಿಗ್‌ಬಾಸ್ ಖ್ಯಾತಿಯ ಲಾಯರ್ ಜಗದೀಶ್ ಇತ್ತೀಚೆಗಷ್ಟೇ ಕೇಸ್‌ವೊಂದರಲ್ಲಿ ಜಾಮೀನಿನ ಮೇಲೆ ಹೊರಬಂದಿದ್ದರು. ಜಗದೀಶ್ ಅವರು ಇದ್ದ ಕಡೆ ಒಂದಿಲ್ಲೊಂದು ವಿಚಾರಕ್ಕೆ ಕೂಗಾಟ, ಜಗಳ ಕಾಮನ್. ಈಗಲೂ ಜಗದೀಶ್ ಅವರು ಕಿರಿಕ್ ಮಾಡಿಕೊಂಡಿದ್ದಾರೆ. ಸೋಷಿಯಲ್ ಮೀಡಿಯಾಗಳಲ್ಲಿ ತಮ್ಮದೇ ಸ್ಟೈಲಲ್ಲಿ ಜೋರು ಮಾಡುತ್ತಿದ್ದ ಅವರು ಇದೀಗ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಎದುರೇ ಕಿರಿಕ್ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಯಾವ ಕಾರಣಕ್ಕೆ ಲಾಯರ್ ಜಗದೀಶ್ ಅವರು ಡಿಸಿಎಂ ಎದುರು ಕೂಗಾಡಿದ್ದಾರೆ? ಆಮೇಲೇನಾಯ್ತು? ಎಂಬ ವಿವರ ಇಲ್ಲಿದೆ.
ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ ಲಾಯರ್ ಜಗದೀಶ್ ಅವರು ಡಿಸಿಎಂ ಡಿಕೆ ಶಿವಕುಮಾರ್ ಅವರ ಬಗ್ಗೆಯೂ ಗಂಭೀರ ಆರೋಪ ಮಾಡಿದ್ದರು. ಇಂದು ಕೂಡ ಅವರು ಡಿಕೆಶಿ ಎದುರಲ್ಲೇ ವಿಧಾನಸೌಧದಲ್ಲಿ ಕೂಗಾಡಿದ್ದಾರೆ ಎಂದು ತಿಳಿದುಬಂದಿದೆ. ಇಂದು ನಾಡಪ್ರಭು ಕೆಂಪೇಗೌಡರ 516ನೇ ಜಯಂತಿಯನ್ನು ಅದ್ದೂರಿಯಾಗಿ ಆಚರಿಸುವ ಸಂಬಂಧ ವಿಧಾನಸೌಧದಲ್ಲಿ ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳು ಹಾಗೂ ಅಧಿಕಾರಿಗಳೊಂದಿಗೆ ಡಿಸಿಎಂ ಡಿಕೆ ಶಿವಕುಮಾರ್ ಅವರು ಪೂರ್ವಭಾವಿ ಸಭೆ ನಡೆಸಿದ್ದರು. ಈ ವಿಚಾರವಾಗಿ ಜಗದೀಶ್ ಗಲಾಟೆ ಮಾಡಿದ್ದಾರೆ ಎನ್ನಲಾಗಿದೆ.

ಜೂ.27ರಂದು ಬೆಂಗಳೂರು ನಿರ್ಮಾತೃ, ನಾಡಪ್ರಭು ಕೆಂಪೇಗೌಡರ 516ನೇ ಜಯಂತಿಯನ್ನು ಅದ್ದೂರಿಯಾಗಿ ಆಚರಿಸುವ ಸಂಬಂಧ ಕರೆಯಲಾಗಿದ್ದ ಸಭೆಗೆ ಒಕ್ಕಲಿಗ ಸಮುದಾಯದವರೇ ಆದ ಲಾಯರ್ ಜಗದೀಶ್ ಕೂಡ ಬಂದಿದ್ದರು. ಆದರೆ ಸಭೆಗೆ ಆಹ್ವಾನಿತರ ಲಿಸ್ಟ್ನಲ್ಲಿ ಜಗದೀಶ್ ಅವರ ಹೆಸರಿಲ್ಲ, ಹಾಗಾಗಿ ಒಳಗೆ ಬಿಡಲ್ಲ ಎಂದು ಪೊಲೀಸರು ತಡೆದಿದ್ದರು. ಇದರಿಂದ ರೊಚ್ಚಿಗೆದ್ದು ಜಗದೀಶ್ ಅವರು ಪೊಲೀಸರ ಮೇಲೆ ಜೋರಾಗಿ ಕೂಗಾಡಿದ್ದಾರೆ.
ಜಗದೀಶ್ ಅವರು ಗಲಾಟೆ ಶುರು ಮಾಡಿದಾಗ ಆಗಲೇ ಡಿಸಿಎಂ ಸಭೆ ಶುರು ಮಾಡಿದ್ದರು. ಸ್ವಲ್ಪ ತಡವಾಗಿ ಬಂದ ಕಾರಣ ಜಗದೀಶ್ ಅವರನ್ನು ಒಳಗೆ ಬಿಡಲು ಒಪ್ಪಲಿಲ್ಲ. ಕೊನೆಗೆ ತಮ್ಮದೇ ಸ್ಟೈಲಲ್ಲಿ ಜಗದೀಶ್ ಪೊಲೀಸರ ಬೆವರಿಳಿಸಿದ್ದಾರೆ. ಬೇಕಾದವರನ್ನು ಒಳಗೆ ಬಿಟ್ಕೊಂಡು ಸಭೆ ಮಾಡ್ತಿದ್ದೀರಾ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ. ಈ ಕೂಗಾಟ ಕೇಳಿ ಕೊನೆಗೆ ಡಿಕೆ ಶಿವಕುಮಾರ್ ಅವರ ಸಿಬ್ಬಂದಿ ಮಧ್ಯಪ್ರವೇಶಿಸಿ ಜಗದೀಶ್ ಅವರನ್ನು ಸಭೆಗೆ ಕರೆದುಕೊಂಡು ಹೋಗಿರುವ ವಿಡಿಯೋ ವೈರಲ್ ಆಗಿದೆ.
ಪಠ್ಯದಲ್ಲಿ ಕೆಂಪೇಗೌಡರ ಪಾಠ ಸೇರ್ಪಡೆ!
ಇಂದು ಕೆಂಪೇಗೌಡ ಜಯಂತಿ ಬಗ್ಗೆ ವಿಶೇಷ ಸಭೆ ನಡೆಸಿದ ಡಿಕೆ ಶಿವಕುಮಾರ್ ಅವರು ಹಲವು ಮಹತ್ವದ ಯೋಜನೆಗಳನ್ನು ಘೋಷಿಸಿದ್ದಾರೆ. ಕೆಂಪೇಗೌಡರ ಬಗ್ಗೆ ಮುಂದಿನ ಪೀಳಿಗೆಗೆ ತಿಳಿಸುವ ಅವಶ್ಯಕತೆ ಇರುವುದರಿಂದ ಪ್ರಾಥಮಿಕ ಶಾಲೆಯ ಪಠ್ಯದಲ್ಲಿ ಕೆಂಪೇಗೌಡರ ಕುರಿತು ಒಂದು ಪಾಠ ಸೇರಿಸಲು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರಿಗೆ ಸಲಹೆ ನೀಡಲಾಗುವುದು ಎಂದಿದ್ದಾರೆ. ಜೂನ್ 27ರಂದು ಕೆಂಪೇಗೌಡರ ಜನ್ಮದಿನವನ್ನು ಅದ್ಧೂರಿಯಾಗಿ ಆಚರಿಸಲಾಗುತ್ತದೆ. ಬಾಬು ಜಗಜೀವನ್ ರಾಮ್ ಭವನದಲ್ಲಿ ಈ ಕಾರ್ಯಕ್ರಮ ನಡೆಯಲಿದ್ದು, ಕೆಂಪೇಗೌಡ ಪ್ರಾಧಿಕಾರ ನಿರ್ಮಾಣಕ್ಕೆ ಸುಮನಹಳ್ಳಿಯಲ್ಲಿ ಐದು ಎಕರೆ ಜಮೀನು ಖರೀದಿಸಿದ್ದೇವೆ. ಕೆಂಪೇಗೌಡರ ಜಯಂತಿಯಂದೇ ಇದಕ್ಕೆ ಭೂಮಿ ಪೂಜೆಯೂ ನೆರವೇರಿಸಲಾಗುವುದು ಎಂದಿದ್ದಾರೆ.












Click it and Unblock the Notifications