ಊಟಕ್ಕೆ ಬಂದವರಿಗೆ ಕಾಟ ಕೊಡುವ ಮಾರ್ಷಲ್‌ಗಳು: ಇಂದಿರಾ ಕ್ಯಾಂಟೀನ್ ನಲ್ಲಿ ನಿತ್ಯದ ಗೋಳು!
ಬೆಂಗಳೂರು, ಮೇ.7: ಓದುಗರೇ, ಒನ್ ಇಂಡಿಯಾ ಕನ್ನಡ ಟೀಮ್ ಇಂದಿರಾ ಕ್ಯಾಂಟೀನ್ ಬಗ್ಗೆ ರಿಯಾಲಿಟಿ ಚೆಕ್ ಮಾಡಿದೆ. ಜನಸಾಮಾನ್ಯರ ಹೊಟ್ಟೆ ತುಂಬಿಸುವ ಈ ಕ್ಯಾಂಟೀನ್‌ಗಳಲ್ಲಿ ಗೂಂಡಾಗಳಂತೆ ವರ್ತಿಸುವ ಮಾರ್ಷಲ್ ಗಳು, ಕ್ಯಾಂಟೀನ್‌ಗಳಲ್ಲಿ ಅವ್ಯವಸ್ಥೆ, ಲೆಕ್ಕದಲ್ಲಿ ಬರುವ ಊಟಗಳೆಷ್ಟು, ನಿತ್ಯ ಎಷ್ಟು ಜನ ಊಟ ಮಾಡುತ್ತಾರೆ ಎಂಬುದರ ಬಗ್ಗೆ ಗ್ರೌಂಡ್ ರಿಯಾಲಿಟಿ ವರದಿಯೊಂದನ್ನು ನಿಮ್ಮ ಮುಂದೆ ಇದೀಗ ಪ್ರಸ್ತುತಪಡಿಸುತ್ತಿದೆ.
ಬಡವರಿಗೆ ಹೊಟ್ಟೆ ತುಂಬಿಸುವ ಈ ಅನ್ನದಾಸೋಹ ಕೇಂದ್ರಕ್ಕೆ ಬರುವ ಬಹುತೇಕ ಜನರು ಕಟ್ಟಡ ಕಾರ್ಮಿಕರು, ಬೀದಿಬದಿ ವ್ಯಾಪಾರಿಗಳು, ಪೌರಕಾರ್ಮಿಕರು, ಆಟೋ ಡ್ರೈವರ್ ಗಳು. ಹೀಗೆ ಅನೇಕ ಜನರು ಕಡಿಮೆ ದರದಲ್ಲಿ ಊಟ ಸಿಗುತ್ತೆ ಅನ್ನೋ ಒಂದೇ ಕಾರಣಕ್ಕೆ ಬರುತ್ತಾರೆ. ಆದರೆ ಇಲ್ಲಿರುವ ಕೆಲ ಮಾರ್ಷಲ್‌ಗಳು ಜನರನ್ನ ಪ್ರಾಣಿಗಳಂತೆ ನೊಡುವ ದೃಶ್ಯಗಳ ನಮ್ಮ ಗ್ರೌಂಡ್ ರಿಯಾಲಿಟಿ ವರದಿ ವೇಲೆ ಕಂಡುಬಂತು. ನಗರದ ಹೃದಯಭಾಗ ಕೆಂಪೇಗೌಡ ಬಸ್ ನಿಲ್ದಾಣ (ಮೆಜೆಸ್ಟಿಕ್) ಮೆಟ್ರೋ ನಿಲ್ದಾಣ ಪಕ್ಕದಲ್ಲಿರುವ ಗಾಂಧಿನಗರ ವಾರ್ಡ್ ನಂ.94 ಇಂದಿರಾ ಕ್ಯಾಂಟೀನ್ ನಲ್ಲಿ ಕೆಲಸ ಮಾಡುವ ರಾಜು ವಿ. ಮಾರ್ಷಲ್ ದರ್ಪ ನೋಡಿದ್ರೆ ಎಂತವರಿಗೂ ಕೋಪ ತರಿಸುತ್ತೆ.

ಮಾರ್ಷಲ್ ರಾಜು ವಿ. ಬಗ್ಗೆ ಜನಸಾಮಾನ್ಯರ ಆಕ್ರೋಶ!
ಮೆಜೆಸ್ಟಿಕ್ ಮೆಟ್ರೋ ಸ್ಟೇಷನ್ ಪಕ್ಕದಲ್ಲಿದ್ದ ಇಂದಿರಾ ಕ್ಯಾಂಟೀನ್‌ನಲ್ಲಿ ರಾಜು ವಿ. ಎಂಬ ಆಸಾಮಿ ಮೇಲೆ ಸಾರ್ವಜನಿಕರು ಮಾಡಿದಂತಹ ಆರೋಪಗಳು ಕೇಳಿ ಬಂದಿದ್ದು, ಸತ್ಯಾಸತ್ಯತೆ ತಿಳಿಯುವ ಸಲುವಾಗಿ ನಾವು ಅಲ್ಲಿಗೆ ಹೋಗಿದ್ದೆವು. ಈ ರಾಜು ನಮ್ಮ ಕಣ್ಣೆದುರೇ ಇಬ್ಬರು ವ್ಯಕ್ತಿಗಳನ್ನು ತರಾಟೆ ತೆಗೆದುಕೊಂಡಿದ್ದ, ಕುತೂಹಲದಿಂದ ಅವರನ್ನು ವಿಚಾರಿಸದಾಗ 'ಸಾಬ್.. ಯಾವಾಗ ಬಂದ್ರೂ ಹಿಂಗೆ ಕೋಪ ಮಾಡ್ತಾನೆ. ಊಟಕ್ಕೆ ಟೋಕನ್ ತೆಗೆದುಕೊಳ್ಳುವುದಕ್ಕೆ ಸಾಲಿನಲ್ಲಿ ಬರುವವರನ್ನು ಏಕವಚನದಲ್ಲೇ ಮಾತಾಡಿಸ್ತಾನೆ. ನಾವು ಒಂದು ಮೊಸರು ಪ್ಯಾಕೇಟ್ ತಂದು ಇಲ್ಲಿ ಊಟ ಮಾಡಲು ಬಿಡ್ತಿಲ್ಲ," ಎಂದು ಅಲ್ಲಿ ಮಧ್ಯಾಹ್ನ ಊಟಕ್ಕೆ ಬಂದಿದ್ದ ಜನ ಹೇಳಿದರು.

ಊಟ ಮಾಡುತ್ತಿದ್ದವರ ಮೇಲೆ ಎರಗಿಬಿದ್ದಿದ್ದ ಮಾರ್ಷಲ್!
ಅಂದಹಾಗೆ ಹೊರಗಿನಿಂದ ಊಟ ತಂದು ಇಂದಿರಾ ಕ್ಯಾಂಟೀನ್‌ನಲ್ಲಿ ಊಟ ಮಾಡಬಾರದು ಸತ್ಯ. ಆದರೇ.. ಒಂದು ಮೊಸರು ಪ್ಯಾಕೇಟ್ ತಂದು ಇಂದಿರಾ ಕ್ಯಾಂಟೀನ್‌ನ ಊಟದ ಜೊತೆ ತಿನ್ನಬಾರದು ಎಂದು ಅದ್ಯಾವ ಅಧಿಕಾರಿ ಆದೇಶ ಮಾಡಿದ್ದಾನೋ ಗೊತ್ತಿಲ್ಲ. ಮಾರ್ಷಲ್‌ನ ಈ ವರ್ತನೆ ಕಂಡು ಅಲ್ಲಿ ಪ್ರತಿನಿತ್ಯ ಬರುವವರಿಗೆ ಕೋಪ ತರಿಸಿದೆ. ಕಾವೇರಿಪುರ, ವಸಂತನಗರ, ಮಲ್ಲೇಶ್ವರ ಹೀಗೆ ಅನೇಕ ಭಾಗಗಳಲ್ಲಿ ಭೆಟಿ ಮಾಡಿದಾಗ ಮಾರ್ಷಲ್‌ಗಳ ಮಾತಿನ ದಾಟಿ ಬಹುತೇಕ ಹೀಗೆಯೇ ಇತ್ತು.

ಜನಾಭಿಪ್ರಾಯ ಸಂಗ್ರಹ ವೇಳೆ ಗೇಟ್ ಲಾಕ್ ಮಾಡಿ ದರ್ಪ!
ಇನ್ನೂ ವಸಂತನಗರದಲ್ಲಿರುವ ವಾರ್ಡ್ ನಂ.93 ಇಂದಿರಾ ಕ್ಯಾಂಟೀನ್ ಬಗ್ಗೆ ಒನ್‌ಇಂಡಿಯಾ ಕನ್ನಡ ಟೀಮ್ ಜನಾಭಿಪ್ರಾಯ ಸಂಗ್ರಹಣೆ ಮುಂದಾದಾಗ ಅಲ್ಲೂ ಮಾರ್ಷಲ್‌ಗಳು ರೌಡಿಗಳಂತೆ ವರ್ತಿಸಿದ್ದು ಕಂಡುಬಂತು. ಸಾಮಾಜಿಕ ಕಳಕಳಿಯಿಂದ ಜನರ ಸಮಸ್ಯೆಗಳ ಬಗ್ಗೆ, ಇಂದಿರಾ ಕ್ಯಾಂಟೀನ್‌ಗಳ ಬಗ್ಗೆ ವರದಿ ಮಾಡಲು ತೆರಳಿದಾಗ ನಮ್ಮನ್ನೂ ಕೂಡಿಹಾಕಿ ಗೇಟ್ ಮುಚ್ಚಿದ ಪ್ರಸಂಗ ನಡೆಯಿತು. ಬಡ ಜನರ ಹೊಟ್ಟೆ ತುಂಬಿಸುವ ಇಂದಿರಾ ಕ್ಯಾಂಟೀನ್‌ಗಳಲ್ಲಿ ಮಾರ್ಷಲ್‌ಗಳ ದರ್ಪ ಹೆಚ್ಚಾಗಿದೆ ಎಂಬುದು ನಮ್ಮ ವರದಿ ಮೇಲೆ ಸಾರ್ವಜನಿಕರಿಂದ ಅಭಿಪ್ರಾಯ ಸಂಗ್ರಹ ಮಾಡಲಾಯಿತು.

ಜನ ತಿನ್ನೋ ಅನ್ನದಲ್ಲಿ ಸರ್ಕಾರಕ್ಕೆ ಸುಳ್ಳು ಲೆಕ್ಕ ಹೋಗ್ತಿದ್ಯಾ?
ಇದರ ಮದ್ಯೆಯೇ ಇನ್ನೊಂದು ವಿಚಾರ ಬಗ್ಗೆ ಸತ್ಯ ಹುಡಕುವ ಪ್ರಯತ್ನಕ್ಕೆ ಮುಂದಾಯಿತು. 400- 500 ಜನರಿಗೆ ಊಟ ತರುವ ಕೆಲ ಕ್ಯಾಂಟೀನ್‌ಗಳಲ್ಲಿ ಒಂದೆರಡು ಗಂಟೆಯಲ್ಲೇ ಊಟ ಖಾಲಿ ಅನ್ನುವ ಬಗ್ಗೆ ವಿವರ ಸಿಕ್ಕಿತು. ಅದ್ದೇಗೆ ಎರಡು ಗಂಟೆರಯಲ್ಲಿ ಊಟ ಖಾಲಿಯಾಗುತ್ತೆ..? ನಿಜವಾಗಿ ತರುವ ಊಟಗಳ ಲೆಕ್ಕ ಎಷ್ಟು ಎನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿ ನೀಡ್ತೀವಿ ಇನ್ನೊಂದು ಶೀರ್ಷಿಕೆಯಲ್ಲಿ.. ನಿರೀಕ್ಷಿಸಿ.
Recommended Video
-
Sleeper Vande Bharat; ಬೆಂಗಳೂರು-ಮುಂಬೈ ಸ್ಲೀಪರ್ ವಂದೇ ಭಾರತ್ಗೆ ಕೇಂದ್ರ ಅಸ್ತು, ಕರ್ನಾಟಕಕ್ಕೆ ಏನೆಲ್ಲ ಲಾಭ? -
ಮೈಸೂರು-ಬೆಂಗಳೂರು ರೈಲು ಪ್ರಯಾಣಿಕರಿಗೆ ಗುಡ್ನ್ಯೂಸ್ ಕೊಟ್ಟ ವಿ.ಸೋಮಣ್ಣ -
Ramya: ಬೀದಿ ನಾಯಿಗಳ ಮೇಲಿನ ಕ್ರೌರ್ಯಕ್ಕೆ ನಟಿ ರಮ್ಯಾ ಕಣ್ಣೀರು: ಬೆಂಗಳೂರಿನ ಫ್ರೀಡಂಪಾರ್ಕ್ ಪ್ರತಿಭಟನೆಯಲ್ಲಿ ಭಾಗಿ -
Ankita Jayaram: ನಟನೆಯ ನಡುವೆಯೂ ದ್ವಿತೀಯ ಪಿಯುಸಿಯಲ್ಲಿ ಕರ್ಣ ಧಾರಾವಾಹಿ ಖ್ಯಾತಿಯ ನಟಿ ಅಂಕಿತಾ ಜಯರಾಮ್ ಅಮೋಘ ಸಾಧನೆ -
Karnataka Weather: ಕರ್ನಾಟಕದ 4 ಜಿಲ್ಲೆಗಳಲ್ಲಿ ಮಳೆ - ವಿವಿಧ ಭಾಗಗಳಲ್ಲಿ ಭಾರೀ ಬಿಸಿಲು, ಕರ್ನಾಟಕದ ಹವಾಮಾನ ವರದಿ -
April 10 Horoscope: 12 ರಾಶಿಗಳಿಗೆ ಇಂದು ಆರೋಗ್ಯ, ಹಣಕಾಸು ಮತ್ತು ಪ್ರೇಮದಲ್ಲಿ ಮಿಶ್ರ ಫಲ -
ಬೆಂಗಳೂರು ನಾಯಂಡಳ್ಳಿಯಲ್ಲಿ ಮನೆಯ ಮೊದಲ ಮಹಡಿಯಿಂದ ಬಿದ್ದ ಒಂದೂವರೆ ವರ್ಷದ ಕಂದಮ್ಮ -
SSLC Hindi: ಅಂಕ ಬದಲು ಗ್ರೇಡಿಂಗ್ ವಿರೋಧಿಸಿ ಅರ್ಜಿ ಸಲ್ಲಿಸಿದ ಅರ್ಜಿದಾರರಿಗೆ 1 ಲಕ್ಷ ರೂ. ದಂಡ: ಕರವೇ ಹೇಳಿದ್ದೇನು -
Bengaluru: ಬೆಂಗಳೂರು ನಗರದಲ್ಲಿ ಸ್ವಿಗ್ಗಿ, ಜೊಮ್ಯಾಟೋ ಡೆಲಿವರಿ ಬಾಯ್ಸ್ಗೆ ಸಂಕಷ್ಟ, ಅಮಾನವೀಯ ಲಿಫ್ಟ್ ಸಂಸ್ಕೃತಿ -
ಚಿಕ್ಕಮಗಳೂರಲ್ಲಿ ನಾಪತ್ತೆಯಾಗಿದ್ದ ಕೇರಳದ ಬಾಲಕಿ ಶ್ರಿನಂದಾ ಸಾವು: 2 ಸಾವಿರ ಅಡಿ ಪ್ರಪಾತದಲ್ಲಿ ಶವ ಪತ್ತೆ -
Copra: ತಿಪಟೂರು ಎಪಿಎಂಸಿ ಮಾರುಕಟ್ಟೆಯಲ್ಲಿ ಮತ್ತೆ ದಾಖಲೆ ಬೆಲೆಗೆ ಮಾರಾಟವಾದ ಕೊಬ್ಬರಿ: ನಿರ್ಮಾಣವಾಯ್ತು ಹೊಸ ಇತಿಹಾಸ -
Mona Lisa: ಮಹಾಕುಂಭ ಮೇಳದ ಫೇಮಸ್ ಮೊನಾಲಿಸಾ ಪತಿಗೆ ಕಾನೂನು ಸಂಕಷ್ಟ: ಫರ್ಮಾನ್ ಖಾನ್ ಮೇಲೆ ಪೋಕ್ಸೋ ಪ್ರಕರಣ












Click it and Unblock the Notifications