BIEC: ಬೆಂಗಳೂರು ಟೆಕ್ ಸಮ್ಮಿಟ್ 2025 ರಾಜ್ಯ ಸರ್ಕಾರದಿಂದ ಬಿಗ್ ಅಪ್ಡೇಟ್ಸ್‌

BIEC 2025: ಕರ್ನಾಟಕದ ಬೆಂಗಳೂರು ಹಾಗೂ ಆಂಧ್ರಪ್ರದೇಶದ ವಿಶಾಖಪಟ್ಟಣಂ ನಗರಗಳ ನಡುವೆ ಇತ್ತೀಚಿನ ದಿನಗಳಲ್ಲಿ ಹೂಡಿಕೆ ಹಾಗೂ ಎಐ ತಂತ್ರಜ್ಞಾನಕ್ಕೆ ಸಂಬಂಧಿಸಿದಂತೆ ಭಾರೀ ಚರ್ಚೆಗಳು ನಡೆದಿವೆ. ಇದೀಗ ಆಂಧ್ರಪ್ರದೇಶದ ಎಐ ಹಬ್‌ಗೆ ಟಾಂಗ್ ಕೊಡುವಂತೆ ಕರ್ನಾಟಕ ಸರ್ಕಾರವು ಮಹತ್ವದ ಅಪ್ಡೇಟ್ಸ್‌ವೊಂದನ್ನು ಹಂಚಿಕೊಂಡಿದೆ.

ಕರ್ನಾಟಕದ ಐಟಿಬಿಟಿ ಇಲಾಖೆಯು 'ಡೀಪ್ ಟೆಕ್ ದಶಕ'ವನ್ನು ಪ್ರಕಟಿಸಿದೆ. ಇದರಲ್ಲಿ ₹600 ಕೋಟಿ ಹೂಡಿಕೆ ಮಾಡುತ್ತಿದ್ದು, ಇದನ್ನು ಪ್ರಮುಖ VC ಗಳೊಂದಿಗಿನ ಪಾಲುದಾರಿಕೆಯ ಮೂಲಕ ₹1,000 ಕೋಟಿಗೆ ವಿಸ್ತರಿಸುವ ಯೋಜನೆಯಿದೆ. ಇದು ಕೇವಲ ಹೂಡಿಕೆಗೆ ಸೀಮಿತವಲ್ಲ. ಬದಲಾಗಿ ಕರ್ನಾಟಕವನ್ನು ಭಾರತದ ಡೀಪ್‌ಟೆಕ್ ರಾಜಧಾನಿಯನ್ನಾಗಿ ಮಾಡುವ ನೀಲನಕ್ಷೆ ಕೂಡ. AI, ಕ್ವಾಂಟಮ್ ಕಂಪ್ಯೂಟಿಂಗ್, ಸುಧಾರಿತ ಉತ್ಪಾದನೆ, ರೊಬೊಟಿಕ್ಸ್ ಮತ್ತು ಸುಸ್ಥಿರತೆ ತಂತ್ರಜ್ಞಾನದೊಂದಿಗೆ ಭಾರತದ ನಾಳೆಯನ್ನು ನಿರ್ಮಿಸುವ ಉದ್ಯಮಿಗಳಿಗೆ ನಾವು ಬೆಂಬಲ ನೀಡುತ್ತಿದ್ದೇವೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

BIEC 2025 State Government Unveils Big Tech Plans at Bengaluru Summit

ಡೀಪ್‌ಟೆಕ್ ಎಲಿವೇಟ್ ನಿಧಿಗಾಗಿ ₹150 ಕೋಟಿ, ಬಿಯಾಂಡ್ ಬೆಂಗಳೂರು ಸ್ಟಾರ್ಟ್‌ಅಪ್‌ಗಳಿಗೆ ₹80 ಕೋಟಿ ಹಾಗೂ KITVIN ನಿಧಿ ಮೂಲಕ ₹75 ಕೋಟಿ ರೂಪಾಯಿ ಇರಲಿದೆ ಎಂದು ಅವರು ಹೇಳಿದ್ದಾರೆ. ಮುಂದುವರಿದು ಕಲಬುರಗಿಯ ಐಐಟಿ ಮತ್ತು ಐಐಐಟಿ ಧಾರವಾಡದಲ್ಲಿ ಹೊಸ ಇನ್‌ಕ್ಯೂಬೇಟರ್‌ಗಳು
ಕರ್ನಾಟಕದ ಸಂಸ್ಥೆಗಳಾದ್ಯಂತ 11 ಬಿಜಿನೆಸ್ ಇನ್‌ಕ್ಯೂಬೇಟರ್‌ಗಳು ಇರಲಿವೆ ಎಂದಿದ್ದಾರೆ.

ನವೆಂಬರ್ 20 ರಂದು, ನಾವು BTS 2025 ರಲ್ಲಿ ಫ್ಯೂಚರ್ ಮೇಕರ್ಸ್ ಕಾನ್‌ಕ್ಲೇವ್ ಅನ್ನು ಪ್ರಾರಂಭಿಸು ತ್ತಿದ್ದೇವೆ. ಇದು ಡೀಪ್‌ಟೆಕ್ ನಾವೀನ್ಯತೆಗಾಗಿ ಭಾರತದ ಅತಿದೊಡ್ಡ ವೇದಿಕೆಯಾಗಿದ್ದು, 10,000+ ಸಂಸ್ಥಾಪಕರು, ಹೂಡಿಕೆದಾರರು ಮತ್ತು ಇಕೋ ಸಿಸ್ಟಂ ನಿರ್ಮಾಣಕಾರರನ್ನು ಒಟ್ಟುಗೂಡಿಸುತ್ತದೆ. ಭಾರತದಲ್ಲಿ ಮೊದಲ ಬಾರಿಗೆ, BIEC ನಲ್ಲಿ ಒಂದೇ ಸೂರಿನಡಿ ಜಾಗತಿಕ ಸ್ಟಾರ್ಟ್‌ಅಪ್‌ಗಳು ಪ್ರದರ್ಶನಗೊಳ್ಳುತ್ತಿದ್ದು, ಭಾರತೀಯ ಸ್ಟಾರ್ಟ್‌ಅಪ್‌ಗಳು ಜಾಗತಿಕ ಮಾರುಕಟ್ಟೆಗಳಿಗೆ ಕಾಲಿರಿಸಲಿವೆ.

ಕರ್ನಾಟಕದ ಸಂದೇಶ ಸ್ಪಷ್ಟವಾಗಿದೆ: ನಾವು ಕೇವಲ ನಾವೀನ್ಯತೆಯನ್ನು ಬೆಂಬಲಿಸುವುದಷ್ಟೇ ಅಲ್ಲ, ನಾವು ಅದಕ್ಕೆ ವೇಗವನ್ನೂ ನೀಡಲಿದ್ದೇವೆ. ಫ್ಯೂಚರ್ ಮೇಕರ್ಸ್ ಕಾನ್‌ಕ್ಲೇವ್‌ನಲ್ಲಿ ಭೇಟಿಯಾಗೋಣ. 📅 ನವೆಂಬರ್ 20, 2025 & 📍 ಬೆಂಗಳೂರು ಟೆಕ್ ಸಮ್ಮಿಟ್ | BIEC ಎಂದು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ದೊಡ್ಡ ಪರಿಕಲ್ಪನೆಗಳು ದೊಡ್ಡ ನಗರಗಳಲ್ಲಷ್ಟೇ ಹುಟ್ಟುವುದಿಲ್ಲ

ನಿಮ್ಮ ನಾವೀನ್ಯತೆಯಿಂದ ಈ ಅಭಿಪ್ರಾಯವನ್ನು ತಪ್ಪು ಎಂದು ಸಾಬೀತುಪಡಿಸುವ ಸಮಯ ಬಂದಿದೆ. ನೈನ್ 2.0 (ನ್ಯೂ ಏಜ್ ಇನ್ನೋವೇಶನ್ ನೆಟ್‌ವರ್ಕ್), ಬೆಂಗಳೂರಿನ ಹೊರಗಿನ ಐಟಿ, ಎಲೆಕ್ಟ್ರಾನಿಕ್ಸ್ ಮತ್ತು ಬಯೋಟೆಕ್ನಾಲಜಿ ಕಾಲೇಜುಗಳಿಂದ, ತಮ್ಮ ಸೃಜನಶೀಲ ಆಲೋಚನೆಗಳೊಂದಿಗೆ ನೈಜ ಸ್ಥಳೀಯ ಸವಾಲುಗಳನ್ನು ಪರಿಹರಿಸಲು ಸಿದ್ಧರಿರುವ ಎಲ್ಲ ವಿದ್ಯಾರ್ಥಿಗಳನ್ನು ಕೈಬೀಸಿ ಕರೆಯುತ್ತಿದೆ.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 08.11.2025 ಕರ್ನಾಟಕ ಸರ್ಕಾರದ ಕೆ-ಟೆಕ್ ಮತ್ತು ಐಟಿ, ಬಿಟಿ ವಿಭಾಗದಿಂದ ಪ್ರಾಯೋಜಿತ ಅರ್ಜಿ ಸಲ್ಲಿಸಲು QR ಅನ್ನು ಸ್ಕ್ಯಾನ್ ಮಾಡಿ ಎಂದೂ ಅವರು ಮತ್ತೊಂದು ಪೋಸ್ಟ್‌ ಮೂಲಕ ಹಂಚಿಕೊಂಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+