ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಬಸ್‌ ಮೇಲೆ ಕಲ್ಲು ತೂರಾಟ, ಸಂಚಾರ ಸ್ಥಗಿತ

|
Google Oneindia Kannada News

ಬೆಂಗಳೂರು, ಜನವರಿ 9: ಮೊದಲ ದಿನದ ಬಂದ್ ಅಷ್ಟೊಂದು ಪರಿಣಾಮಕಾರಿಯಾದ ಹಿನ್ನೆಲೆಯಲ್ಲಿ ಬಿಎಂಟಿಸಿ ಸಂಚಾರವನ್ನು ಬುಧವಾರ ಬೆಳಗ್ಗೆ ಅಲ್ಲಲ್ಲಿ ಆರಂಭಿಸಲಾಗಿತ್ತು.

ಭಾರತ್ ಬಂದ್ LIVE: ಬಿಎಂಟಿಸಿ ಬಸ್ ಸಂಪೂರ್ಣ ಸ್ಥಗಿತ ಭಾರತ್ ಬಂದ್ LIVE: ಬಿಎಂಟಿಸಿ ಬಸ್ ಸಂಪೂರ್ಣ ಸ್ಥಗಿತ

ಹಾಗೆಯೇ ನಿನ್ನೆಯಂತೆ ಇಂದೂ ಕೂಡ ಕೆಂಪೇಗೌಡ ಏರ್‌ಪೋರ್ಟ್‌ಗೆ ವಾಯುವಜ್ರ ಬಸ್‌ ಸೇವೆಗಳನ್ನು ಆರಂಭಿಸಲಾಗಿತ್ತು. ಆದರೆ ಚಿಕ್ಕಜಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕೆಲ ಕಿಡಿಗೇಡಿಗಳು ಬಸ್‌ಗಳ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಈ ಹಿನ್ನೆಲೆಯಲ್ಲಿ ಮತ್ತೆ ಬಿಎಂಟಿಸಿ ಸೇವೆಯನ್ನು ರದ್ದುಪಡಿಸಲಾಗಿದೆ. ಇದರಿಂದ ಪ್ರಯಾಣಿಕರು ಕಂಗಾಲಾಗಿದ್ದಾರೆ.

ಜನವರಿ 9ರಂದು ಯಾವ ಜಿಲ್ಲೆಯಲ್ಲಿ ಶಾಲಾ-ಕಾಲೇಜುಗಳಿಗೆ ರಜೆಜನವರಿ 9ರಂದು ಯಾವ ಜಿಲ್ಲೆಯಲ್ಲಿ ಶಾಲಾ-ಕಾಲೇಜುಗಳಿಗೆ ರಜೆ

ಮಂಗಳವಾರ ರಾತ್ರಿ ಕೆಎಸ್‌ಆರ್‌ಟಿಸಿ ಸೇವೆಯನ್ನು ಆರಂಭಿಸಲಾಗಿತ್ತು. ಹೀಗಾಗಿ ರಾಜ್ಯದ ಬೇರೆ ಬೇರೆ ಭಾಗಗಳಿಂದ ಮೆಜೆಸ್ಟಿಕ್‌ಗೆ ಸಾವಿರಾಋಉ ಸಂಖ್ಯೆಯಲ್ಲಿ ಪ್ರಯಾಣಿಕರು ಬಂದಿದ್ದಾರೆ. ಆದರೆ ಮೆಜೆಸ್ಟಿಕ್ ನಿಂದ ನಗರದ ವಿವಿಧ ಭಾಗಗಳಿಗೆ ತೆರಳುವ ಬಸ್‌ಗಳು ಸಿಗುತ್ತಿಲ್ಲ.

Bharath bandh:stone pelting on BMTC, KSRtC bus

ಇದರಿಂದ ಪ್ರಯಾಣಿಕರು ಬಿಎಂಟಿಸಿ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಚಿಕ್ಕಜಾಲದಲ್ಲಿ ಕೆಎಸ್‌ಆರ್‌ಟಿಸಿ ಹಾಗೂ ಬಿಎಂಟಿಸಿ ಸೇರಿ ಒಟ್ಟು 6 ಬಸ್‌ಗಳ ಮೇಲೆ ಕಲ್ಲು ತೂರಾಟ ನಡೆದು ಬಸ್ ಜಖಂ ಆಗಿದೆ.

English summary
Due to Bharath bandh some miscreants stone pelted on BMTC and KSRTC bus near Chikkajala of Bengaluru
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X