• search
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬೆಂಗಳೂರಿನಲ್ಲಿ ದುಬೈನ ಪ್ರಜ್ಞಾ ಅನಂತ್ ಭರತನಾಟ್ಯ ರಂಗಪ್ರವೇಶ

By ಆರತಿ ಅಡಿಗ, ದುಬೈ
|

ಕಂಠದಿಂದ ಹಾಡನ್ನು ಹಾಡಿ, ಕೈಯಲ್ಲಿ ಅರ್ಥವ ತೋರಿ, ದೃಷ್ಟಿಯಲ್ಲಿ ಭಾವವ ತುಂಬಿ, ಪಾದದಲ್ಲಿ ತಾಳವ ಸಂರಕ್ಷಿಸಿ ನೃತ್ಯಲೋಕದಲ್ಲಿ ಮೈಮರೆಸುವ ಭರತನಾಟ್ಯವೆಂಬ ಮೇರು ಕಲೆಯ ರಂಗಪ್ರವೇಶವನ್ನು ಆಗಸ್ಟ್ 4ರ ಸಂಜೆ ಗಾಯನಸಮಾಜ ಸಭಾಂಗಣ ಬೆಂಗಳೂರಿನಲ್ಲಿ ಕು. ಪ್ರಜ್ಞಾ ಅನಂತ್ ರವರು ಯಶಸ್ವಿಯಾಗಿ ನೆರವೇರಿಸಿದರು.

ನಾಟ್ಯದೇವ ನಟರಾಜನಿಗೆ, ಗುರುಗಳಿಗೆ, ಮಹಾ ಗುರುಗಳಿಗೆ ಮಾತಾಪಿತೃಗಳಿಗೆ ವಂದಿಸಿ ಗುರು ವಿದುಷಿ ಸಪ್ನಾಕಿರಣ್ ಅವರಿಂದ ಗೆಜ್ಜೆ ಹಾಗು ಆಶೀರ್ವಾದವನ್ನು ಪಡೆದು ಗಣೇಶವಂದನೆ ಹಾಗು ಪುಷ್ಪಾಜಲಿಯೊಂದಿಗೆ ಪ್ರಜ್ಞಾರವರು ಬಹಳ ಆತ್ಮವಿಶ್ವಾಸದಿಂದ ರಂಗ ಪ್ರವೇಶಿಸಿದರು.

ಬೆಂಗಳೂರಿನಲ್ಲಿ ದುಬೈನ ಪ್ರಜ್ಞಾ ಅನಂತ್ ಭರತನಾಟ್ಯ ರಂಗಪ್ರವೇಶ

ಹಾಡಿನಿಂದ ಹಾಡಿಗೆ ತನ್ಮಯತೆ ಹಾಗು ಆತ್ಮವಿಶ್ವಾಸವನ್ನು ಬೆಳೆಸುತ್ತಾ ನೆರೆದವರ ಪ್ರಶಂಸೆಗೆ ಪಾತ್ರರಾದರು. ಗುರುವಿನ ಕಣ್ಣಲ್ಲಿ ಆನಂದಭಾಷ್ಪ ತರಿಸಿದರು. ಇದು ಶಿಷ್ಯೆಯ ಶ್ರದ್ಧೆ ಮತ್ತು ಸಮರ್ಪಣೆಗೆ ಹಿಡಿದ ಕನ್ನಡಿಯಾಗಿತ್ತು.

Bharatanatya rangapravesha by Prajna Ananth in Bengaluru

ಭರತನಾಟ್ಯ 'ಮಾರ್ಗ'ವನ್ನು ಅನುಸರಿಸಿ, ಶಾಸ್ತ್ರಬದ್ಧವಾಗಿ ಅಲರಿಪು, ಜತಿಸ್ವರ, ಶಬ್ಧಮ್, ವರ್ಣ ನಂತರ ಕನಕದಾಸರ ಕೀರ್ತನೆ, ಹರಿಹರನ 'ಗುಂಡಯ್ಯನ ರಗಳೆ', ತಿಲ್ಲಾನ ಮಂಗಳವನ್ನು ಪ್ರಸ್ತುತ ಪಡಿಸಿದರು.

ದುಬೈ ನಿವಾಸಿ ಬೆಂಗಳೂರು ಮೂಲದ ಶ್ರೀಲೇಖಾ ಅನಂತ್ ಮತ್ತು ಅನಂತ್ ರಘುನಾಥ್ ರ ಪುತ್ರಿ ಪ್ರಜ್ಞಾ ದುಬೈಯ ಸಂಕೀರ್ಣ ನೃತ್ಯಶಾಲೆಯ ವಿದ್ಯಾರ್ಥಿನಿ ಹಾಗು ಬಹುಮುಖ ಪ್ರತಿಭೆಯ ನಾಟ್ಯಗುರು ವಿದುಷಿ ಸಪ್ನಾಕಿರಣ್ ರವರ ಶಿಷ್ಯೆ.

Bharatanatya rangapravesha by Prajna Ananth in Bengaluru

ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಭಾಗವಹಿಸಿರುವ ಚಿತ್ರನಟ ಪ್ರಣಯರಾಜ ಶ್ರೀನಾಥ್ ಮಾತನಾಡುತ್ತ, ಅತಿಕಿರಿಯ ವಯಸ್ಸಿನಲ್ಲಿ ಪ್ರಜ್ಞಾ ತೋರಿದ ಕಲಾಪ್ರೌಢಿಮೆಯನ್ನು ಮುಕ್ತ ಕಂಠದಿಂದ ಶ್ಲಾಘಿಸಿದರು ಹಾಗು ಸವಿತಾ ಅರುಣರವರ ಶಿಷ್ಯ ಪರಂಪರೆ ಮತ್ತು ನಾಟ್ಯ ಕ್ಷೇತ್ರದ ಅವರ ಕೊಡುಗೆಗೆ ಮೆಚ್ಚುಗೆ ವ್ಯಕ್ತ ಪಡಿಸಿದರು.

ದುಬೈನಲ್ಲಿ ವಿಜೃಂಭಣೆಯ ನೃತ್ಯ ಶಾಲೆ ವಾರ್ಷಿಕೋತ್ಸವ

ವೇದಿಕೆಯಲ್ಲಿ ಗಾಯನ ಸಮಾಜದ ಅಧ್ಯಕ್ಷರಾದ ಡಾ. ಎಂ. ಆರ್.ವಿ. ಪ್ರಸಾದ್, ಮಹಾ ಗುರು ಸವಿತಾ ಅರುಣ್ ಪ್ರಜ್ಞಾಳ ಪಿತಾಮಹರುಗಳಾದ ಪಿ . ರಘುನಾಥ್, ಹನುಮಂತಾಚಾರ್ ಮತ್ತು ಗುರು ಸಪ್ನಾ ಕಿರಣ್ ಉಪಸ್ಥಿತರಿದ್ದರು.

Bharatanatya rangapravesha by Prajna Ananth in Bengaluru

ಪರಿಪೂರ್ಣ ಸಮಾಗಮದ ಈ ಕಾರ್ಯಕ್ರಮದಲ್ಲಿ ನಟುವಾಂಗದಲ್ಲಿ ಸಾಥ್ ನೀಡಿದವರು ಗುರು ವಿದುಷಿ ಸಪ್ನಾ ಕಿರಣ್ ಮತ್ತು ವಿದ್ವಾನ್ ಅರ್ಜುನ್ ಯು.ಎ, ಹಾಡುಗಾರಿಕೆಯಲ್ಲಿ ದಿವ್ಯಾ ಅರ್ಜುನ್, ಮೃದಂಗಂನಲ್ಲಿ ವಿದ್ವಾನ್ ಪುರುಷೋತ್ತಮ್, ಕೊಳಲು ವಿದ್ವಾನ್ ರಾಕೇಶ್ ದತ್ತ್, ವಯಲಿನ್ ವಿದ್ವಾನ್ ದಯಾಕರ್ ರವರು.

ನಾಟ್ಯಶಾಸ್ತ್ರ, ಮಾರ್ಗದ, ಹಾಡು, ಕೀರ್ತನೆ, ತಾಳ, ಲಯಗಳ ಸಂಪೂರ್ಣ ಮಾಹಿತಿಗಳೊಂದಿಗೆ ಡಾ.ಸುಗ್ಗನಹಳ್ಳಿ ಷಡಕ್ಷರಿಯವರು ಅತ್ಯುತ್ತಮವಾಗಿ ಕಾರ್ಯಕ್ರಮ ನಿರೂಪಿಸಿದರು.

Bharatanatya rangapravesha by Prajna Ananth in Bengaluru

ಕಾರ್ಯಕ್ರಮದ ಕೊನೆಯಲ್ಲಿ ಅನಂತ್ ದಂಪತಿಗಳು ವಂದನಾರ್ಪಣೆ ಸಲ್ಲಿಸುತ್ತಾ ಅಚ್ಚುಕಟ್ಟಾದ ಕಾರ್ಯಕ್ರಮದ ಯಶಸ್ವಿಗೆ ಶ್ರಮಿಸಿದ ಎಲ್ಲರಿಗೂ ನೆನಪಿನ ಕಾಣಿಕೆಯನ್ನಿಟ್ಟು ಗೌರವಿಸಿದರು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ಇನ್ನಷ್ಟು ಬೆಂಗಳೂರು ಸುದ್ದಿಗಳುView All

English summary
Bharatanatya rangapravesha by Prajna Ananth in Bengaluru. Prajna is learning bharatanatyam dance with Sapna Kiran in Dubai.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more