ವಾಹನ ಸವಾರರೇ ಗಮನಿಸಿ: ಬೆಂಗಳೂರಲ್ಲಿ ಸಂಚಾರ ಮಾರ್ಗದಲ್ಲಿ ಬದಲಾವಣೆ
ಬೆಂಗಳೂರು, ಡಿಸೆಂಬರ್ 8: ಮಂಗಳವಾರದ ಭಾರತ್ ಬಂದ್ ಹಿನ್ನೆಲೆಯಲ್ಲಿ ಬೆಂಗಳೂರು ನಗರದ ಕೆಲವು ರಸ್ತೆ ಸಂಚಾರಗಳಲ್ಲಿ ತಾತ್ಕಾಲಿಕ ಬದಲಾವಣೆಗಳನ್ನು ಮಾಡಲಾಗಿದೆ. ರಾಜಧಾನಿಯಲ್ಲಿ ಕೆಲವು ಸಂಚಾರ ಮಾರ್ಗಗಳ ಬದಲಾವಣೆಯನ್ನು ಮಾಡಿ ಪೊಲೀಸ್ ಆಯುಕ್ತ ಕಮಲ್ ಪಂತ್ ಆದೇಶಿಸಿದ್ದಾರೆ.
Recommended Video
ಕೃಷಿ ಕಾಯ್ದೆಗಳನ್ನು ರದ್ದುಗೊಳಿಸುವಂತೆ ಆಗ್ರಹಿಸಿ ನಗರದಲ್ಲಿ ರೈತರ ಪ್ರತಿಭಟನಾ ಮೆರವಣಿಗೆಗಳು ನಡೆಯಲಿವೆ. ಹೀಗಾಗಿ ಸಂಚಾರ ಮಾರ್ಗಗಳಲ್ಲಿ ಕೆಲವು ಬದಲಾವಣೆಗಳನ್ನು ಮಾಡಲಾಗಿದ್ದು, ಮಂಗಳವಾರ ಬೆಳಿಗ್ಗೆ 6 ರಿಂದ ಬುಧವಾರ ಬೆಳಿಗ್ಗೆ 6 ಗಂಟೆಯವರೆಗೂ ಇದು ಜಾರಿಯಲ್ಲಿರಲಿದೆ.
ಡಿ. 8ರಂದು ಬೆಳಿಗ್ಗೆ ರೈತರು ಪುರಭವನದಿಂದ ಜಾಥಾ ಮತ್ತು ಎತ್ತಿನ ಬಂಡಿಗಳಲ್ಲಿ ಎನ್‌ಆರ್ ಸ್ಕ್ವೇರ್, ಕೆಜಿ ರಸ್ತೆ, ಮೈಸೂರು ಬ್ಯಾಂಕ್ ವೃತ್ತದ ಮೂಲಕ ಸ್ವಾತಂತ್ರ್ಯ ಉದ್ಯಾನದವರೆಗೆ ಮೆರವಣಿಗೆ ತೆರಳಲಿದ್ದಾರೆ. ಹೀಗಾಗಿ ವಾಹನಗಳ ಸುಗಮ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಲು ಕೆ.ಜಿ. ರಸ್ತೆಯಲ್ಲಿ ಸಾಗುವ ವಾಹನಗಳು ಪೊಲೀಸ್ ಕಾರ್ನರ್ ಬಳಿ ಕೆ,ಜಿ ರಸ್ತೆಗೆ ಎಡ ತಿರುವು ಪಡೆದುಕೊಂಡು ಸಾಗುವುದಕ್ಕೆ ನಿರ್ಬಂಧಿಸಲಾಗಿದೆ.

ಹಲಸೂರು ಗೇಟ್ ಪೊಲೀಸ್ ಠಾಣೆಯ ಕಡೆಯಿಂದ ಬಂದು ಪೊಲೀಸ್ ಕಾರ್ನರ್ ಬಳಿ ಎಡ ತಿರುವು ಪಡೆದು ಕೆಜಿ ರಸ್ತೆಯ ಕಡೆಗೆ ಸಾಗುವ ವಾಹನಗಳು ಪೊಲೀಸ್ ಕಾರ್ನರ್‌ನಿಂದ ನೇರವಾಗಿ ನೃಪತುಂಗ ರಸ್ತೆಯ ಮೂಲಕ ಕೆಆರ್ ವೃತ್ತ ತಲುಪಬಹುದಾಗಿ.
ನೃಪತುಂಗ ರಸ್ತೆಯಲ್ಲಿ ಇರುವ ಏಕಮುಖ ಸಂಚಾರವನ್ನು ನಾಳಿನ ಮಟ್ಟಿಗೆ ದ್ವಿಮುಖ ಸಂಚಾರ ವ್ಯವಸ್ಥೆಯನ್ನಾಗಿ ಪರಿವರ್ತಿಸಲಾಗಿದೆ. ಕೆಆರ್ ವೃತ್ತದಿಂದ ಪೊಲೀಸ್ ಕಾರ್ನರ್‌ವರೆಗೆ ಮತ್ತು ಪೊಲೀಸ್ ಕಾರ್ನರ್‌ನಿಂದ ಕೆಆರ್ ವೃತ್ತದವರೆಗೆ ರಸ್ತೆಯ ಎರಡೂ ದಿಕ್ಕಿನಲ್ಲಿ ವಾಹನಗಳು ಸಂಚಾರ ನಡೆಸಬಹುದಾಗಿದೆ ಎಂದು ಕಮಲ್ ಪಂತ್ ಆದೇಶಿಸಿದ್ದಾರೆ.












Click it and Unblock the Notifications