ಸಿದ್ದಗಂಗಾ ಶ್ರೀಗಳಿಗೆ ಶಸ್ತ್ರಚಿಕಿತ್ಸೆ ಯಶಸ್ವಿ, ಆರೋಗ್ಯ ಸ್ಥಿರ
ಬೆಂಗಳೂರು, ಜನವರಿ 26: ಆರೋಗ್ಯ ಸಮಸ್ಯೆಯಿಂದ ಇಂದು ಬೆಳಿಗ್ಗೆ ಬಿಜಿಎಸ್ ಆಸ್ಪತ್ರೆಗೆ ದಾಖಲಾಗಿದ್ದ ಶಿವಕುಮಾರ ಸ್ವಾಮೀಜಿ ಅವರಿಗೆ ಶಸ್ತ್ರ ಚಿಕಿತ್ಸೆ ಮಾಡಲಾಗಿದ್ದು, ಈಗ ಅವರ ಆರೋಗ್ಯ ಸ್ಥಿರವಾಗಿದೆ ಎಂದು ವೈದ್ಯರು ಹೇಳಿದ್ದಾರೆ.
ಬಿಜಿಎಸ್ ಆಸ್ಪತ್ರೆಯ ಡಾ.ರವೀಂದ್ರ ಅವರ ನೇತೃತ್ವದಲ್ಲಿ ಶಸ್ತ್ರ ಚಿಕಿತ್ಸೆ ಮಾಡಲಾಗಿದ್ದು, ಇಂದು ಮೂರು ಸ್ಟಂಟ್‌ಗಳನ್ನು ಶ್ರೀಗಳ ದೇಹದೊಳಕ್ಕೆ ಅಳವಡಿಸಲಾಗಿದೆ.
ವಯಸ್ಸಿನ ಕಾರಣದಿಂದ ಶಸ್ತ್ರ ಚಿಕಿತ್ಸೆ ಸವಾಲಾಗಿತ್ತು ಎಂದು ಹೇಳಿದ ವೈದ್ಯ ರವೀಂದ್ರ ಅವರು ಶ್ರೀಗಳಿಗೆ ಅನಸ್ತೇಷಿಯಾ (ಅರಿವಳಿಕೆ) ನೀಡುವುದು ಶಸ್ತ್ರ ಚಿಕಿತ್ಸೆಗಿಂತಲೂ ಸವಾಲಿನ ಕೆಲಸವಾಗಿತ್ತು ಎಂದು ಅವರು ಹೇಳಿದರು.

ಶ್ರೀಗಳು ಆಸ್ಪತ್ರೆ ಸೇರಿದಾಗ ಆಮ್ಲಜನಕ ಕೊರತೆ, ಮೂತ್ರ ಪಿಂಡ ಸಮಸ್ಯೆ, ಬಿಪಿ ಕಡಿಮೆ ಇತ್ತು ಎಂದು ಹೇಳಲಾಗಿತ್ತು. ಶಸ್ತ್ರ ಚಿಕಿತ್ಸೆಯ ನಂತರ ಶ್ರೀಗಳ ಆರೋಗ್ಯದಲ್ಲಿ ಸ್ಥಿರತೆ ಕಂಡುಬಂದಿದೆ ಎಂದು ಅವರು ಹೇಳಿದ್ದಾರೆ.
ಆಸ್ಪತ್ರೆಗೆ ಬಿ.ಎಸ್.ಯಡಿಯೂರಪ್ಪ ಅವರು ಭೇಟಿ ನೀಡಿ ಶ್ರೀಗಳ ಆರೋಗ್ಯ ವಿಚಾರಿಸಿದರು.












Click it and Unblock the Notifications