'ಬ್ರ್ಯಾಂಡ್ ಬೆಂಗಳೂರು' ಉಪಕ್ರಮದಲ್ಲಿ 'ಅಗ್ನಿ ಸುರಕ್ಷತಾ ಕ್ರಮ' ಸೇರಿಸಲು ಶಿಫಾರಸು
ಬೆಂಗಳೂರು, ಅಕ್ಟೋಬರ್ 19: ಬೆಂಗಳೂರಿನ ಎಸ್‌ಜಿ ಪಾಳ್ಯದ ಮಡ್‌ಪೈಪ್ ಕೆಫೆಯಲ್ಲಿ ಬುಧವಾರವಷ್ಟೇ ಭಾರೀ ಅಗ್ನಿ ದುರಂತ ಸಂಭವಿಸಿತ್ತು. ಇದಕ್ಕೂ ಮೊದಲು ನಗರದ ವಿವಿಧೆಡೆ ಅಗ್ನಿ ಅವಘಡಗಳು ನಡೆದಿವೆ. ಈ ಸಂಬಂಧ ಸರ್ಕಾರೇತರ ಸಂಸ್ಥೆಯಾಗಿರುವ 'ಬಿಯಾಂಡ್ ಕಾರ್ಲ್‌ಟನ್ (ಬಿಸಿ)' ಅಗ್ನಿ ಸುರಕ್ಷತಾ ಕ್ರಮಗಳನ್ನು ಬ್ರ್ಯಾಂಡ್ ಬೆಂಗಳೂರು ಉಪಕ್ರಮದಲ್ಲಿ ಅಳವಡಿಸುವಂತೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರಿಗೆ ಶಿಫಾರಸು ಮಾಡಿತ್ತು.
ಕಾರ್ಲ್ಟನ್ ಟವರ್ಸ್‌ನಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ ಒಟ್ಟು 09 ಮಂದಿ ಸಾವನ್ನಪ್ಪಿದ ನಂತರ ಬಿಸಿ ಮ್ಯಾನೇಜಿಂಗ್ ಟ್ರಸ್ಟಿ ಉದಯ್ ವಿಜಯನ್ ಅವರು ಎಲ್ಲಾ ಎತ್ತರದ ಕಟ್ಟಡಗಳನ್ನು ನಿಯಮಿತವಾಗಿ ಪರಿಶೀಲಿಸಬೇಕು ಎಂದು ಹೇಳಿದರು. ಅಗ್ನಿ ಅವಘಡದ ನಂತರ 2011 ರಲ್ಲಿ ಈ ಕಾನೂನು ಜಾರಿಗೆ ಬಂತು.

ಅದಷ್ಟೇ ಅಲ್ಲದೇ ಎತ್ತರದ ಕಟ್ಟಡಗಳು ಅಗ್ನಿ ಸುರಕ್ಷತೆಯ ಎಲ್ಲ ಅಂಶಗಳನ್ನು ಹೊಂದಿರಬೇಕು. ಅಂದರೆ ಅಗ್ನಿ ಅವಘಡ ಸಂಭವಿಸಿದ ವೇಳೆ ಅಗ್ನಿಶಾಮಕ ಟೆಂಡರ್‌ಗಳು ತುರ್ತು ಸಂದರ್ಭಗಳಲ್ಲಿ ಚಲಿಸಲು ಅನುವಾಗುವಂತೆ ವ್ಯವಸ್ಥೆ ಹೊಂದಿರಬೇಕು ಎಂದು ಹೇಳಲಾಗಿದೆ.
ದೊಡ್ಡ ಕಟ್ಟಡಗಳಲ್ಲಿ ಆಗಾಗ ಪರಿಶೀಲನೆ ಅಗತ್ಯ
ಇನ್ನೂ ಪಬ್‌ನಲ್ಲಿ ನಡೆದ ಬೆಂಕಿ ಅವಘಡಕ್ಕೆ ಏನು ಕಾರಣವೆಂದು ತನಿಖೆ ಬಳಿಕ ಗೊತ್ತಾಗಲಿದೆ. ಇಂತಹ ಬೃಹತ್ ಅಗ್ನಿ ದುರಂತ ನಡೆಯದಂತೆ ಸಂಬಂಧಿತ ಏಜೆನ್ಸಿಗಳು ಆಗಾಗ ತಪಾಸಣೆ ಕೈಗೊಳ್ಳಬೇಕು. ಸುರಕ್ಷತೆಯನ್ನು ಆಗಾಗ ಖಚಿತಪಡಿಸಿಕೊಳ್ಳಬೇಕು. ಇಂತಹ ಕ್ರಮಗಳನ್ನು ಬ್ರ್ಯಾಂಡ್ ಬೆಂಗಳೂರಿಗೆ ಸೇರಿಸಿಕೊಳ್ಳಬೇಕು ಎಂದು ನಾವು ರಾಜ್ಯ ಸರ್ಕಾರಕ್ಕೆ ಹೇಳಿದ್ದೇವೆ ಎಂದು ವಿಜಯನ್ ತಿಳಿಸಿದ್ದಾರೆ.
ಹೋಟೆಲ್, ರೆಸ್ಟೋರೆಂಟ್ ಮತ್ತಿತರ ದೊಡ್ಡ ದೊಡ್ಡ ಕಟ್ಟಡಗಳಲ್ಲಿ ಈ ರೀತಿ ಅತ್ಯಧಿಕ ಪ್ರಮಾಣದಲ್ಲಿ ಅನಿಲ ಮತ್ತು ಇತರ ರಾಸಾಯನಿಕಗಳಂತಹ ವಸ್ತುಗಳನ್ನು ಸಂಗ್ರಹಿಸುವ ಕುರಿತು ಲೆಕ್ಕಪರಿಶೋಧನೆ ನಡೆಸುವ ಕುರಿತು ಅವರು ಪ್ರಶ್ನಿಸಿದ್ದಾರೆ. ಸಂಬಂಧಿಸಿದ ಅಧಿಕಾರಿಗಳು ಯಾವ ಕ್ರಮ ಕೈಗೊಂಡಿದ್ದಾರೆ ಎಂಬುದನ್ನು ಪರಿಶೀಲನೆ ಆಗಬೇಕು. ಜೊತೆಗೆ ನಮ್ಮ ಬಿಸಿಯ ಸಲಹೆಗಳನ್ನು ಗಂಭೀರವಾಗಿ ಪರಿಗಣಿಸುವಂತೆ ಅವರು ಒತ್ತಾಯಿಸಿದರು.












Click it and Unblock the Notifications