Bengaluru: ಟೈಂ ಓವರ್! ಕಾಯಲು ಹೇಳಿದ ಪ್ಯಾಸೆಂಜರ್ ಬಿಟ್ಟು ಹೊರಟ ಆಟೋ ಚಾಲಕ: ಚಾಟ್ ವೈರಲ್
ಬೆಂಗಳೂರು ಟ್ರಾಫಿಕ್ ಸಾಕಷ್ಟು ಕುಖ್ಯಾತಿ ಪಡೆದುಕೊಂಡಿದೆ. ಪೀಕ್ ಅವರ್ ನಲ್ಲಿ ಕ್ಯಾಬ್, ಆಟೋಗಳು ದೊರೆಯುವುದು ದುಸ್ತರವಾಗಿದೆ. ಆಗಾಗ್ಗೆ ಓಲಾ, ಉಬರ್ ನಲ್ಲಿ ಆಟೋ, ಕ್ಯಾಬ್ ಬುಕ್ ಮಾಡಿದಾಗ ಕಾಯುವ ಸಮಯ ಗಂಟೆಗಳು ಎಂದು ಸಂದೇಶ ಬರುವುದನ್ನು ನೆಟ್ಟಿಗರು ಹಂಚಿಕೊಂಡಿದ್ದಾರೆ.
ಬೆಂಗಳೂರು ಎನ್ನುವ ಮಹಾನಗರದಲ್ಲಿ ಸಮಯ ಎಂದರೆ ಹಣ, ಹಣ ಎಂದರೆ ಸಮಯ ಎನ್ನುವಂತಾಗಿದೆ. ಸಮಯಕ್ಕೆ ಸರಿಯಾಗಿ ಬಾರದ ಪ್ರಯಾಣಿಕರೊಬ್ಬರನ್ನು ಆಟೋ ಚಾಲಕ ಇದೇ ಕಾರಣಕ್ಕೆ ಬಿಟ್ಟು ಹೋಗಿದ್ದು, ಇದೀಗ ಪ್ರಯಾಣಿಕ - ಆಟೋ ಚಾಲಕರ ನಡುವಿನ ಮೆಸೇಜ್ ವೈರಲ್ ಆಗಿದೆ.

ಬೆಂಗಳೂರು ನಿವಾಸಿ ಐಶ್ವರ್ಯಾ ಎಂಬ ಮಹಿಳೆ ತನಗಾದ ಅನುಭವವನ್ನು ಹಂಚಿಕೊಂಡಿದ್ದಾರೆ. ಸ್ಥಳೀಯ ಆಟೋ ಚಾಲಕ ಮತ್ತು ಆಕೆಯ ನಡುವಿನ ತಮಾಷೆಯ ಘಟನೆ ಅಂತರ್ಜಾಲದಲ್ಲಿ ವೈರಲ್ ಆಗುತ್ತಿದೆ. ಮಹಿಳೆಯು ಆಟೋರಿಕ್ಷಾ ಚಾಲಕನೊಂದಿಗೆ ನಡೆದ ಘಟನೆಯನ್ನು ವಿವರಿಸಿದ್ದಾರೆ, ಆಟೋ ಚಾಲಕ ಕಾಯುವಿಕೆ ಬಗ್ಗೆ ತನಗೆ ಗಡುವು ನೀಡಿದ್ದರು ಎಂದು ಹೇಳಿದ್ದಾರೆ.
Booked an auto today. The driver gave me an ultimatum 🥲🫠 @peakbengaluru pic.twitter.com/cq3QPc1vG7
— Aishwarya (@SerialEscapist) August 8, 2023
ಟ್ವಿಟರ್ ನಲ್ಲಿ ಅವರು ಈ ಸಂಭಾಷಣೆಯ ಸ್ಕ್ರೀನ್‌ಶಾಟ್ ಅನ್ನು ಹಂಚಿಕೊಂಡಿದ್ದಾರೆ. "ಇವತ್ತು ಆಟೋ ಬುಕ್ ಮಾಡಿದೆ. ಡ್ರೈವರ್ ನನಗೆ ಸಮಯದ ಗಡುವು ಕೊಟ್ಟಿದ್ದಾರೆ" ಎಂದು ಬರೆದಿದ್ದಾರೆ. ಐಶ್ವರ್ಯಾ ಉಬರ್ ಮೂಲಕ ರೈಡ್ ಬುಕ್ ಮಾಡಿದ್ದಾರೆ. ಆದರೆ ಸಮಯಕ್ಕೆ ಸರಿಯಾಗಿ ಪಿಕ್-ಅಪ್ ಜಾಗ ತಲುಪಲು ವಿಫಲವಾಗಿದ್ದಾರೆ.
ಆಟೋ ಚಾಲಕ ಅಪ್ಲಿಕೇಶನ್‌ನ ಸಂದೇಶ ಸೇವೆಯ ಮೂಲಕ ಅವರನ್ನು ಸಂಪರ್ಕಿಸಿದ್ದಾರೆ. "ನಾನು ಬಂದಿದ್ದೇನೆ" ಎಂದು ಆಟೋ ಚಾಲಕ ಮೆಸೇಜ್ ಮಾಡಿದ್ದಾರೆ. "ನಾನು ಬಂದೆ" ಎಂದು ಮತ್ತೆ ಸಂದೇಶ ತಲುಪಿಸಿದ್ದಾರೆ. ಆದರೆ ಅದಕ್ಕೆ ಐಶ್ವರ್ಯಾ ಸಮಯಕ್ಕೆ ಸರಿಯಾಗಿ ತಲುಪುವಲ್ಲಿ ವಿಫಲವಾಗಿದ್ದಾರೆ, ನಂತರ ಚಾಲಕ ಸಮಯ ಮುಗಿದಿದೆ ಎಂದು ಸಂದೇಶ ಕಳುಹಿಸಿದ್ದಾರೆ.
ವಿವಿಧ ರೀತಿಯ ಪ್ರತಿಕ್ರಿಯೆಗಳು
ಟ್ವಿಟರ್ ನಲ್ಲಿ ಈ ಪೋಸ್ಟ್ ನೋಡಿದ ನಂತರ ಬಳಕೆದಾರರು ಕೂಡ ಅನೇಕ ರೀತಿಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ಅನೇಕ ಬಳಕೆದಾರರು, "ಐರ್ಶರ್ಯಾ ಪಾಠ ಕಲಿತಿದ್ದಾರೆ ಎಂದು ಭಾವಿಸುತ್ತೇನೆ. ಸಮಯ ಎಲ್ಲರಿಗೂ ಒಂದೆ ಯಾರನ್ನೂ ಕಾಯಿಸಬಾರದು" ಎಂದು ಬುದ್ದಿವಾದ ಹೇಳಿದ್ದಾರೆ.
ಮತ್ತೊಬ್ಬ ಬಳಕೆದಾರರು ಆಟೋ ಚಾಲಕನ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. "ಆತ ಸಮಯವನ್ನು ಪರಿಪಾಲಿಸುವ ವ್ಯಕ್ತಿ, ಕಾಯುವುದು ಅವರ ಶೈಲಿಯಲ್ಲ" ಎಂದು ಹೇಳಿದ್ದಾರೆ.
"ಈ ಬೆಂಗಳೂರು ಆಟೋ ಚಾಲಕರ ವರ್ತನೆ ನೆಕ್ಸ್ಟ್ ಲೆವೆಲ್, ನಾನು ಅದನ್ನು ಅನುಭವಿಸಿದ್ದೇನೆ" ಎಂದು ಮತ್ತೊಬ್ಬ ಬಳಕೆದಾರರು ಪ್ರತಿಕ್ರಿಯಿಸಿದ್ದಾರೆ. "ಇಂದಿನ ದಿನಗಳಲ್ಲಿ ಆಟೋ ಚಾಲಕರು, ಓಲಾ, ಉಬರ್ ರೈಡ್‌ಗಳನ್ನು ಸ್ವೀಕರಿಸುವುದಿಲ್ಲ" ಎಂದು ನಾಲ್ಕನೇ ಬಳಕೆದಾರರು ಬರೆದಿದ್ದಾರೆ.












Click it and Unblock the Notifications