ವಾಹನ ಸವಾರರೇ ಗಮನಿಸಿ: ಬೆಂಗಳೂರಿನಲ್ಲಿ ಈ ಮಾರ್ಗದ ರಸ್ತೆ ಫೆಬ್ರವರಿ ಪೂರ್ತಿ ಕ್ಲೋಸ್
ಬೆಂಗಳೂರು, ಫೆಬ್ರವರಿ, 05: ನಗರದಲ್ಲಿ ವಿಶೇಷ ಕಾರ್ಯಕ್ರಮಗಳು, ದುರಸ್ತಿ ಕಾರ್ಯ ನಡೆಯುವ ಮಾರ್ಗದ ರಸ್ತೆಗಳನ್ನು ಬಂದ್ ಮಾಡಲಾಗಿರುತ್ತದೆ. ಯಾವುದೇ ಅನಾಹುತಗಳು ಆಗಬಾರದು ಎನ್ನುವ ದೃಷ್ಟಿಯಿಂದ ಈ ಕ್ರಮವನ್ನು ತೆಗೆದುಕೊಳ್ಳಲಾಗುತ್ತದೆ. ಇದೀಗ ಈ ಮಾರ್ಗದ ರಸ್ತೆಗಳನ್ನು ಫೆಬ್ರವರಿ ತಿಂಗಳು ಪೂರ್ತಿ ಮುಚ್ಚಲಾಗುತ್ತದೆ. ಹಾಗಾದರೆ ಪರ್ಯಾಯ ಮಾರ್ಗಗಳ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಬಹುತೇಕ ರಸ್ತೆಗಳು ಗುಂಡಿಗಳಿಂದಲೇ ಕೂಡಿದ್ದು, ಇವುಗಳಿಂದ ವಾಹನ ಸವಾರರು ಬೇಸತ್ತಿದ್ದಾರೆ. ಇದೀಗ ಬಿಬಿಎಂಪಿ ವೈಟ್ ಟಾಪಿಂಗ್ ಕಾಮಗಾರಿಗೆ ಮುಂದಾಗಿರುವ ಹಿನ್ನೆಲೆ ಬೆಂಗಳೂರು ಸಂಚಾರ ಪೊಲೀಸರು ಫೆಬ್ರವರಿ 2ರಿಂದ ಕಬ್ಬನ್ ರಸ್ತೆಯಲ್ಲಿ (ಮೇನ್ ಗಾರ್ಡ್ ಕ್ರಾಸ್‌ನಿಂದ ಡಿಸ್ಪೆನ್ಸರಿ ರಸ್ತೆ) 1 ತಿಂಗಳ ಕಾಲ ವಾಹನ ಸಂಚಾರವನ್ನು ನಿರ್ಬಂಧಿಸಲಾಗಿದೆ. ಒಂದು ತಿಂಗಳು ಈ ಮಾರ್ಗದಲ್ಲಿ ಸಂಚರಿಸುತ್ತಿದ್ದ ವಾಹನ ಸವಾರರಿಗೆ ಸಂಕಷ್ಟವಾಗಲಿದೆ.

ಈ ಬಗ್ಗೆ ಬೆಂಗಳೂರು ಸಂಚಾರ ಪೊಲೀಸರು ಅಧಿಕೃತ ಪತ್ರಿಕಾ ಪ್ರಕಟಣೆ ಹೊರಡಿಸಿದ್ದು, ಶಿವಾಜಿನಗರ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಬ್ಬನ್ ಪಾರ್ಕ್ ರಸ್ತೆ ಮುಖ್ಯ ಗಾರ್ಡ್ ಕ್ರಾಸ್ ರಸ್ತೆಯಿಂದ ಡಿಸ್ಪೆನ್ಸರಿ ರಸ್ತೆಯವರೆಗೆ ಬಿಬಿಎಂಪಿಯಿಂದ ವೈಟ್ ಟಾಪಿಂಗ್ ಕೆಸಲ ಮಾಡಲಾಗುತ್ತಿದೆ. ಈ ಹಿನ್ನೆಲೆ ಫೆಬ್ರವರಿ 2ರಿಂದ 30ದಿನಗಳವರೆಗೆ ಎಲ್ಲಾ ರೀತಿಯ ವಾಹನ ಸಂಚಾರವನ್ನು ಈ ಮಾರ್ಗದಲ್ಲಿ ನಿರ್ಬಂಧಿಸಲಾಗಿದೆ.
ಪರ್ಯಾಯ ಮಾರ್ಗಗಳು: ಕಬ್ಬನ್ ರಸ್ತೆ ಮುಖ್ಯ ಗಾರ್ಡ್ ಕ್ರಾಸ್ ರಸ್ತೆಯಿಂದ ಡಿಸ್ಪೆನ್ಸರಿ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಅವಕಾಶ ಇಲ್ಲ ಎಂದು ಬೆಂಗಳೂರು ಸಂಚಾರ ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಫೆಬ್ರವರಿ 2ರ ಭಾನುವಾರದಿಂದ ನಿರ್ಬಂಧಗಳನ್ನು ಜಾರಿಗೆ ತರಲಾಗಿದೆ. ವಾಹನ ಸವಾರರು ಪರ್ಯಾಯ ರಸ್ತೆಯಲ್ಲಿ ಸಂಚಾರ ಮಾಡುವಂತೆ ಸಂಚಾರಿ ಪೊಲೀಸರ ಮನವಿ ಮಾಡಿದ್ದಾರೆ.
ಇತ್ತೀಚೆಗೆ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿರುವ ಸಂಚಾರ ಸಂಕೇತ (Trafic Signals) ಫಲಕವು ಬೆಂಗಳೂರು (Veng ಮತ್ತು ಬೆಂಗಳೂರಿಗೆ ಎಂದು ಎರಡು ವಿಭಿನ್ನ ದಿಕ್ಕುಗಳನ್ನು ತೋರಿಸುತ್ತದೆ. ಬೆಂಗಳೂರಿನ ಸಂಚಾರಿ ಚಿಹ್ನೆಯೊಂದು ಹಾಸ್ಯಾಸ್ಪದ (Funny) ಕಾರಣಗಳಿಗಾಗಿ ಟ್ರೆಂಡಿಂಗ್‌ನಲ್ಲಿದೆ.
ಬೆಂಗಳೂರಿನಲ್ಲಿ ಪ್ರಯಾಣಿಕರನ್ನು ಗೊಂದಲಕ್ಕೀಡು ಮಾಡಿರುವ "ಬೆಂಗಳೂರು" ಎಂಬ ರಸ್ತೆ ಸಂಚಾರ ಫಲಕ!
ಸೋಷಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್ X (ಹಿಂದೆ ಟ್ವಿಟರ್) ನಲ್ಲಿ ಹಂಚಿಕೊಂಡ ಪೋಸ್ಟ್ ಪ್ರಕಾರ, ಈ ಸೈನ್‌ಬೋರ್ಡ್ ನಗರಕ್ಕೆ ಹೋಗುವ ವಿಮಾನ ನಿಲ್ದಾಣದ ರಸ್ತೆಯಲ್ಲಿದೆ. ಈ ಸೈನ್‌ಬೋರ್ಡ್‌ನಲ್ಲಿ ಒಂದು ಸ್ಪಷ್ಟವಾದ ಮುದ್ರಣದೋಷವಿದ್ದು, ಪ್ರಯಾಣಿಕರನ್ನು ಗೊಂದಲಕ್ಕೀಡು ಮಾಡಿದೆ.
ಅದರಲ್ಲಿ ಕೆಆರ್ ಪುರಂ, ತುಮಕೂರು, "ಬೆಂಗಳೂರು" ಮತ್ತು "ಬೆಂಗಳೂರು" ಗಾಗಿ ಎಂಬ ವಿಭಿನ್ನ ದಿಕ್ಕುಗಳಲ್ಲಿ ಮುದ್ರಿಸಲಾಗಿದೆ. ಆ ಎರಡೂ ಒಂದೇ ಸ್ಥಳವಲ್ಲವೇ? ಆದರೆ ಪ್ರತ್ಯೇಕ ಮಾರ್ಗಗಳೆಂದು ಮುದ್ರಣ ದೋಷ ಆಗಿದೆ.
ಇದನ್ನು ಗಮನಿಸಿದ ಹಲವರು ಒಂದು ಫ್ಲೈಓವರ್ ಮೇಲೆ ಹೋದಾಗ, ಇನ್ನೊಂದು ನೇರವಾಗಿ ಮುಂದೆ ಹೋದಂತೆ ಕಂಡುಬಂದಿತು ಎಂದು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಬರೆದುಕೊಂಡುದ್ದಾರೆ.












Click it and Unblock the Notifications