Namma Metro: ಮೆಟ್ರೋದಲ್ಲಿ ಒಂದೇ ದಿನ ಏಳು ಲಕ್ಷ ಜನ ಪ್ರಯಾಣ

ನಮ್ಮ ಮೆಟ್ರೋ ಸಂಪೂರ್ಣ ನೇರಳೆ ಮಾರ್ಗದಲ್ಲಿ ರೈಲು ಸಂಚಾರ ಆರಂಭವಾದ ನಂತರ ಪ್ರಯಾಣಿಕರ ಸಂಖ್ಯೆಯಲ್ಲಿ ಭಾರಿ ಏರಿಕೆಯಾಗಿದೆ. ಬುಧವಾರ ಒಂದೇ ದಿನ ನಮ್ಮ ಮೆಟ್ರೋದಲ್ಲಿ ಪ್ರಯಾಣಿಕರ ಸಂಖ್ಯೆ 7 ಲಕ್ಷ ದಾಟಿದೆ.

ಸೋಮವಾರ ಆರಂಭವಾದ ನೇರಳೆ ಮಾರ್ಗದ ಸಂಪೂರ್ಣ ಕಾರ್ಯಾಚರಣೆಯು ಮೆಟ್ರೋ ಪ್ರಯಾಣಿಕರ ಸಂಖ್ಯೆಯನ್ನು ಗಣನೀಯವಾಗಿ ಹೆಚ್ಚಿಸಿದೆ. ಬೆಂಗಳೂರು ಕೇಂದ್ರ ಸಂಸದ ಪಿಸಿ ಮೋಹನ್ ಎಕ್ಸ್‌ನಲ್ಲಿ ಈ ಬಗ್ಗೆ ಮಾಹಿತಿ ನೀಡಿದ್ದು, "ಬೆಂಗಳೂರು, ಬುಧವಾರ ನಮ್ಮ ಮೆಟ್ರೋದ 7,01,455 ಪ್ರಯಾಣಿಕರಿಗೆ ಅಭಿನಂದನೆಗಳು, ಸುಸ್ಥಿರ ನಗರ ಚಲನಶೀಲತೆಯ ಕಡೆಗೆ ಶ್ಲಾಘನೀಯ ಬದ್ಧತೆಯನ್ನು ಪ್ರದರ್ಶಿಸುತ್ತದೆ." ಎಂದು ಹೇಳಿದ್ದಾರೆ.

 Bengalurus Namma Metro Hits Seven-Lakh Ridership High

ನೇರಳೆ ಮಾರ್ಗದಲ್ಲಿ ಸಂಪೂರ್ಣವಾಗಿ ಮೆಟ್ರೋ ಸಂಚಾರ ಆರಂಭವಾದ ನಂತರ ಪ್ರಯಾಣಿಕರ ಸಂಖ್ಯೆಯಲ್ಲಿ ಭಾರಿ ಹೆಚ್ಚಳವಾಗಲಿದೆ ಎಂದು ಮೊದಲೇ ಅಂದಾಜು ಮಾಡಲಾಗಿತ್ತು. ಆದರೆ, ಈ ಜನದಟ್ಟಣೆಯನ್ನು ನಿಭಾಯಿಸುವಲ್ಲಿ ಬಿಎಂಆರ್ ಸಿಎಲ್ ಎಡವುತ್ತಿದೆ ಎನ್ನುವ ದೂರುಗಳು ಕೂಡ ಕೇಳಿಬಂದಿವೆ.

ಹೆಚ್ಚಿನ ಜನದಟ್ಟಣೆಯಿಂದ ಪ್ರಯಾಣಿಕರು ಹೈರಾಣು

ಪೀಕ್ ಅವರ್‌ಗಳಲ್ಲಿ ಮೆಟ್ರೋ ರೈಲುಗಳಲ್ಲಿ ಪ್ರಯಾಣಿಕರ ಸಂಖ್ಯೆ ಭಾರಿ ಹೆಚ್ಚಾಗುತ್ತಿದೆ, ಈ ಜನಸಂದಣಿಗೆ ಅನುಗುಣವಾಗಿ ರೈಲುಗಳ ಓಡಾಟವನ್ನು ಹೆಚ್ಚಿಸುವಂತೆ ಪ್ರಯಾಣಿಕರು ಒತ್ತಾಯ ಮಾಡುತ್ತಿದ್ದಾರೆ. ನೇರಳೆ ಮಾರ್ಗವು ಪೂರ್ವ ಬೆಂಗಳೂರನ್ನು ನಗರದ ಇತರ ಭಾಗಗಳಿಗೆ ಸಂಪರ್ಕಿಸುವುದರಿಂದ, ಅನೇಕ ಐಟಿ ಉದ್ಯೋಗಿಗಳು ದೈನಂದಿನ ಪ್ರಯಾಣಕ್ಕಾಗಿ ಮೆಟ್ರೋವನ್ನು ಬಳಸಲು ಪ್ರಾರಂಭಿಸಿದರು.

ಕರ್ನಾಟಕ ಸಾರಿಗೆ ಇಲಾಖೆಯು ಕೆಆರ್ ಪುರ ಮೆಟ್ರೋ ನಿಲ್ದಾಣದಿಂದ 37 ಫೀಡರ್ ಬಸ್ ಸೇವೆಗಳನ್ನು ಪ್ರಾರಂಭಿಸಿದೆ. ಈ ಫೀಡರ್ ಬಸ್‌ಗಳು ಕೆಆರ್ ಪುರ ಮೆಟ್ರೊ ನಿಲ್ದಾಣದಿಂದ ಹೊರ ವರ್ತುಲ ರಸ್ತೆಯ ಕಡೆಗೆ ಅನೇಕ ಐಟಿ ಪಾರ್ಕ್‌ಗಳನ್ನು ಹೊಂದಿರುವ ಸಿಲ್ಕ್ ಬೋರ್ಡ್‌ವರೆಗೆ ಕಾರ್ಯನಿರ್ವಹಿಸುತ್ತವೆ. ಆಗಾಗ ತೀವ್ರ ಟ್ರಾಫಿಕ್ ಅವ್ಯವಸ್ಥೆ ಕಾಡುತ್ತಿದೆ. ಈ ಫೀಡರ್ ಬಸ್‌ಗಳ ಸೇವೆಯನ್ನು ಬೆಳಿಗ್ಗೆ ಮತ್ತು ಸಂಜೆಯ ಪೀಕ್ ಅವರ್‌ಗೆ ಅನುಗುಣವಾಗಿ ಹೊಂದಿಸಲಾಗಿದೆ. ಪೀಕ್ ಅವರ್‌ಗಳಲ್ಲಿ, ಫೀಡರ್ ಬಸ್‌ಗಳು ಪ್ರತಿ ಐದು ನಿಮಿಷಗಳಿಗೊಮ್ಮೆ ಮತ್ತು ಜನದಟ್ಟಣೆ ಇಲ್ಲದ ಸಮಯದಲ್ಲಿ, ಪ್ರತಿ ಎಂಟು ನಿಮಿಷಗಳಿಗೆ ಬಸ್‌ಗಳು ಲಭ್ಯವಿರುತ್ತವೆ.

ಟ್ರಾಫಿಕ್ ಕಡಿಮೆ ಮಾಡಲು ಕ್ರಮ

ಬೆಂಗಳೂರಿನ ಹೊರ ವರ್ತುಲ ರಸ್ತೆ ಪ್ರದೇಶದಲ್ಲಿ ಜನದಟ್ಟಣೆ ಕಡಿಮೆ ಮಾಡುವುದು ಸರ್ಕಾರದ ಉದ್ದೇಶವಾಗಿದೆ ಎಂದು ಕರ್ನಾಟಕ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಹೇಳಿದ್ದಾರೆ. "ಮುಂದಿನ ಆರು ತಿಂಗಳಲ್ಲಿ, ಬಿಎಂಟಿಸಿಗಾಗಿ ಅನೇಕ ನಿರ್ಣಾಯಕ ಮತ್ತು ಅಭೂತಪೂರ್ವ ಬದಲಾವಣೆಗಳನ್ನು ಯೋಜಿಸಲಾಗಿದೆ. ಬೆಂಗಳೂರಿನಲ್ಲಿ ಸಾರ್ವಜನಿಕ ಸಾರಿಗೆಯನ್ನು ಹೆಚ್ಚಿಸಲು ಹೆಚ್ಚುವರಿ 2,000 ಬಸ್‌ಗಳನ್ನು ಖರೀದಿಸಲು ಸರ್ಕಾರ ಯೋಜಿಸುತ್ತಿದೆ. ಪೂರ್ವ ಬೆಂಗಳೂರಿನಲ್ಲಿ ಕೆಲಸ ಮಾಡುವ ಜನರು ಕೆಲಸಕ್ಕೆ ಪ್ರಯಾಣಿಸಲು ಸಾರ್ವಜನಿಕ ಸಾರಿಗೆಯನ್ನು ಬಳಸಲು ಆದ್ಯತೆ ನೀಡುವಂತೆ ವಿನಂತಿ ಮಾಡಲಾಗಿದೆ" ಎಂದು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+