Bengaluru Rains: 27 ವಾರ್ಡ್‌ಗಳಲ್ಲಿ ಮಳೆ ಅಬ್ಬರ, ಮುಂದಿನ 48 ಗಂಟೆ ವ್ಯಾಪಕ ಮಳೆ: ಹವಾಮಾನ ಮುನ್ಸೂಚನೆ
ಬೆಂಗಳೂರು, ಏಪ್ರಿಲ್ 12: ಉದ್ಯಾನ ನಗರಿ ಬೆಂಗಳೂರಿನಲ್ಲಿ ಪೂರ್ವ ಮುಂಗಾರು ಮಳೆ ಸದ್ದು ಜೋರಾಗಿದೆ. ಮೂರು ದಿನಗಳಿಂದ ನಗರ ವಿವಿಧೆಡೆ ಜೋರು ಮಳೆ ಆಗುತ್ತಿದೆ. ಏಪ್ರಿಲ್ 13ರವರೆಗೆ ನಗರಾದ್ಯಂತ ಮಳೆ ಅಬ್ಬರ ಕಂಡು ಬರಲಿದೆ. ಕೆಲವೆಡೆ ಹುಗುರ ಮಳೆ ಸುರಿದರೆ, ಇನ್ನೂ ಕೆಲವು ಬಡಾವಣೆಗಳಲ್ಲಿ ಗುಡುಗು ಮಿಂಚು ಸಹಿತ ವ್ಯಾಪಕ ಮಳೆ ನಿರೀಕ್ಷೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ನಗರದಲ್ಲಿ ಶುಕ್ರವಾರ 27 ವಾರ್ಡ್‌ಗಳಲ್ಲಿ ಜೋರು ಮಳೆ ಆಗಿದೆ. ಮಲ್ಲಸಂದ್ರ, ಪೀಣ್ಯ ಇಂಡಸ್ಟ್ರಿಯಲ್ ಏರಿಯಾ, ರಾಜಗೋಪಾಲ ನಗರ, ಹಂಪಿನಗರ, ಕೋಣನಕುಂಟೆ, ಜ್ಞಾನಭಾರತಿ, ರಾಜರಾಜೇಶ್ವರಿ ನಗರ, ಕೆಂಗೇರಿ, ದೊಡ್ಡನಾಕ್ಕುಂದಿ, ಬೆಳ್ಳಂದೂರು, ಎಲೆಕ್ಟ್ರಿಕ್ ಸಿಟಿ, ಉಳ್ಳಾಲು, ಬಾಗಲಗುಂಟೆ, ಜಕ್ಕೂರು, ಕುವೆಂಪು ನಗರ, ಶೆಟ್ಟಿಹಳ್ಳಿ, ಹನುಮಂತನಗರ, ಕೊಟ್ಟಿಗೆಪಾಳ್ಯ, ಚೊಕ್ಕಸಂದ್ರ ಸೇರಿದಂತೆ ಅನೇಕ ಕಡೆಗಳಲ್ಲಿ ಗುಡುಗು ಸಹಿತ ಜೋರು ಮಳೆ ಆಗಿದೆ.

ಬೆಂಗಳೂರಿನಲ್ಲಿ ನಿರಂತರವಾಗಿ ಬಿಸಿಲು ಇದೆ. ಈ ನಡುವೆ ಅಧಿಕ ತಾಪಮಾನ ಮಧ್ಯೆ ಗುಡುಗು ಸಹಿತ ಮಳೆ ಆಗುತ್ತಿದೆ. ಏಪ್ರಿಲ್ 13ರವರೆಗೆ ನಗರಾದ್ಯಂತ ಅಲ್ಲಲ್ಲಿ ಮಳೆ ಅಬ್ಬರಿಸಲಿದೆ. ಈ ವೇಳೆ ನಗರದಲ್ಲಿ ಸೆಕೆ ಜೊತೆಗೆ ಸಂಜೆ ಬೆಳಗ್ಗೆ ತಂಪು ಗಾಳಿ, ಮಬ್ಬು ವಾತಾವರಣ ಕಂಡು ಬರಲಿದೆ. ತಾಪಮಾನದಲ್ಲಿ ಇಳಿಕೆ ಆಗಲಿದೆ ಎಂದು ಹವಾಮಾನ ಮುನ್ಸೂಚನೆ ತಿಳಿಸಿದೆ.
ಬೆಂಗಳೂರಿನಲ್ಲಿ ಮುಂದಿನ ಒಂದು ವಾರಗಳ ಕಾಲ ಗರಿಷ್ಠ ತಾಪಮಾನ 33 ಕನಿಷ್ಠ ಹಾಗೂ ಕನಿಷ್ಠ 21 ಡಿಗ್ರಿ ಸೆಲ್ಸಿಯಸ್ ಇರಲಿದೆ ಎಂದು ಅವರು ತಿಳಿಸಿದರು. ಬೆಂಗಳೂರಿನಲ್ಲಿ ಮಳೆ ಬರಲು ತಮಿಳುನಾಡು ಭಾಗದಲ್ಲಿ ಕರಾವಳಿಯ ಬಂಗಾಳಕೊಲ್ಲಿ ಭಾಗದಲ್ಲಿ ಚಂಡಮಾರುತ ಪರಿಚಲನೆ ಉಂಟಾಗಿದೆ. ತಮಿಳುನಾಡು ಭಾಗದಲ್ಲಿ ಗಾಳಿಯ ವೇಗವು ಹೆಚ್ಚಾಗಿದೆ. ಇದರಿಂದ ತಮಿಳುನಾಡು, ಕರ್ನಾಟಕ ಭಾಗದಲ್ಲಿ ಹೆಚ್ಚಿನ ಮಳೆ ಮುನ್ಸೂಚನೆ ಮಾಡಿಕೊಂಡಿದೆ.
ಬೆಂಗಳೂರಿನಲ್ಲಿ ಮುಂದಿನ ಎರಡು ದಿನ ಮಳೆ ಬರಲಿದ್ದು, ಇದರ ಜೊತೆಗೆ ದಕ್ಷಿಣ ಒಳನಾಡಿನ ವಿವಿಧ ಜಿಲ್ಲೆಗಳು, ಉತ್ತರ ಕರ್ನಾಟಕ ಹಾಗೂ ಕರಾವಳಿ ಜಿಲ್ಲೆಗಳಲ್ಲಿ ಗುಡುಗು ಸಹಿತ ಭಾರೀ ಮಳೆ ಆಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಬೆಂಗಳೂರಿನಲ್ಲಿ ಶುಕ್ರವಾರ ಬಂದ ಗಾಳಿ ಸಹಿತ ಮಳೆಗೆ ಕೆಲವೆಡೆ ಮರಗಳ ಕೊಂಬೆಗಳು ಧರೆ ಉರುಳಿವೆ. ಕೆಲವೆಡೆ ಸಂಚಾರ ಅಸ್ತವ್ಯಸ್ತವಾಗಿದೆ. ಐಐಎಸ್ಸಿ ಮುಖ್ಯ ಗೇಟ್‌ನಲ್ಲಿ ಮರಬಿದ್ದಿರುವುದರಿಂದ ಮಾರಮ್ಮ ವೃತ್ತದ ಕಡೆಗೆ ನಿಧಾನಗತಿಯ ಸಂಚಾರವಿರುತ್ತದೆ, ಸರ್ವೀಸ್ ರಸ್ತೆಯನ್ನು ಮುಚ್ಚಲಾಗಿದೆ.ಸಾರ್ವಜನಿಕರು ಯಶವಂತಪುರ ವೃತ್ತದಿಂದ ಸಿ ವಿ ರಾಮನ್ ರಸ್ತೆ ಮೂಲಕ ಪರ್ಯಾಯ ಮಾರ್ಗವನ್ನು ಬಳಸುವಂತೆ ಬೆಂಗಳೂರು ನಗರ ಸಂಚಾರಿ ಪೊಲೀಸರು ಮನವಿ ಮಾಡಿಕೊಂಡಿದ್ದಾರೆ.












Click it and Unblock the Notifications