ಬೆಂಗಳೂರು: ಬಿದ್ದ ಮರಗಳು ಹೇಳುತ್ತಿವೆ ಮನುಷ್ಯನ ಭವಿಷ್ಯ
ಬೆಂಗಳೂರು, ಮೇ 27: ನಗರದಲ್ಲಿ ಉರುಳಿ ಬಿದ್ದ ಮರಗಳು ಮನುಷ್ಯನ ಭವಿಷ್ಯದ ಬಗ್ಗೆ ಸಂದೇಶಗಳನ್ನು ಹೇಳುತ್ತಿವೆ.
ವಿಜಯನಗರದಲ್ಲಿ ಉರುಳಿಬಿದ್ದ ಮರವೊಂದು 'ನಾನು ಕೆಳಗೆ ಬಿದ್ದೆನೆಂದು ವಿಡಿಯೋ ಮಾಡುತ್ತಿದ್ದೀರಾ? ನೋದಿ ನಗುತ್ತಿದ್ದೀರಾ? ಇದು ಮನುಕುಲದ ಅವನತಿಗೆ ಕಾರಣ... ಎಚ್ಚರಿಕೆ ಹಸಿರನ್ನು ಉಳಿಸಿ, ಪರಿಸರ ಬೆಳೆಸಿ. ನಮಸ್ಕಾರ' ಎಂದು ಕೆಳಗೆ ಬಿದ್ದ ಮರ ಹೇಳುತ್ತಿದೆ.
ವಿಜಯನಗರದಲ್ಲಿ ಬಿದ್ದ ಮರವೊಂದರ ಮೇಲೆ ಯಾರೋ ಅನಾಮಧೇಯ ಪರಿಸರ ಪ್ರೇಮಿಗಳು ಮೇಲಿನಂತೆ ಬರೆದು ಭಿತ್ತಪತ್ರವೊಂದನ್ನು ಅಂಟಿಸಿದ್ದಾರೆ. ಈ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಇತ್ತೀಚೆಗೆ ಮರಗಳ ಹನನ ಮತ್ತು ಮರಗಳು ಬೀಳುತ್ತಿರುವುದು ಬೆಂಗಳೂರಲ್ಲಿ ಹೆಚ್ಚಾಗಿದೆ. ಇದರ ತಡೆಗೆಂದು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಹೀಗೊಂದು ಭಾವನಾತ್ಮಕ ರೀತಿಯ ಪ್ರಯತ್ನವನ್ನು ಪರಿಸರ ಪ್ರೇಮಿಗಳು ಮಾಡಿದ್ದಾರೆ.
ಬೆಂಗಳೂರಿನ ಹಸಿರು ದಿನೇ-ದಿನೇ ಕಡಿಮೆ ಆಗುತ್ತಿದೆ ಎಂಬ ಆತಂಕ ಹಲವು ವರ್ಷಗಳಿಂಲೂ ಕಾಡುತ್ತಲೇ ಇದೆ. ಅತಿಯಾದ ಅಭಿವೃದ್ಧಿಯೇ ಬೆಂಗಳೂರಿಗೆ ಮಾರಕ ವಾಗುತ್ತಿದೆ ಎಂಬ ಮಾತುಗಳು ಕೇಳಿಬರುತ್ತಿದೆ. ಇದರ ಮಧ್ಯೆ ಬೆಂಗಳೂರಿನ ಹಸಿರು ಉಳಿಸುವವರ ಸಂಖ್ಯೆಯೂ ಹೆಚ್ಚಾಗುತ್ತಿರುವುದು ಸಂತೋಶದಾಯಕ.











Click it and Unblock the Notifications