Bengaluru Accident: ಬೆಂಗಳೂರಿನಲ್ಲಿ ಇಷ್ಟೊಂದು ಅಪಘಾತಗಳು; ಬೆಚ್ಚಿಬೀಳಿಸುತ್ತದೆ ಅಂಕಿ ಅಂಶಗಳು!

ಬೆಂಗಳೂರು, ಜೂನ್. 12: ಉದ್ಯಾನನಗರಿ ಬೆಂಗಳೂರು ಉದ್ಯೋಗ ನಗರಿ ಕೂಡ ಹೌದು.. ಕೋಟ್ಯಾಂತರ ಜನ ತಮ್ಮ ಬದುಕು ಕಟ್ಟಿಕೊಳ್ಳಲು ತಮ್ಮ ತಮ್ಮ ಊರಿಗಳನ್ನು ಬಿಟ್ಟು ಬೆಂಗಳೂರಿಗೆ ಕಾಲಿಡುತ್ತಾರೆ. ದಿನ ಕಳೆದಂತೆ ಬೆಂಗಳೂರಿನಲ್ಲಿ ಜನಸಂಖ್ಯೆ ಹೆಚ್ಚುತ್ತಲೆ ಇದೆ. ಜನ ಜಾಸ್ತಯಾದ ಹಾಗೆಯೇ ವಾಹನಗಳ ಸಂಝ್ಯೆ ಕೂಡ ಅಧಿಕವಾಗುತ್ತಿದೆ. ಇದರ ಜೊತೆಗೆ ಅಪಘಾತ ಪ್ರಕರಣಗಳು ದಿನ ದಿನಕ್ಕೆ ಹೆಚ್ಚಾಗುತ್ತಲೆ ಇದೆ.

ಹೌದು... ರಾಜ್ಯ ರಾಜಧಾನಿಯಲ್ಲಿ ಪ್ರತಿ ದಿನ ಅಪಘಾತಗಳ ಸಂಖ್ಯೆ ಏರಿಕೆಯಾಗುತ್ತಿದೆ. ಬೆಂಗಳೂರು ಟ್ರಾಫಿಕ್ ಪೋಲೀಸರ ಇತ್ತೀಚಿನ ಅಂಕಿಅಂಶಗಳ ಪ್ರಕಾರ, ಕೇವಲ ಐದು ತಿಂಗಳಲ್ಲಿ ಅಂದರೆ ಮೇ ವೇಳೆಗೆ ಬೆಂಗಳೂರಿನಲ್ಲಿ 2,000 ಕ್ಕೂ ಹೆಚ್ಚು ರಸ್ತೆ ಅಪಘಾತಗಳು ವರದಿಯಾಗಿವೆ ಎಂದು ಬೆಂಗಳೂರು ಮಿರರ್ ವರದಿ ಮಾಡಿದೆ.

Bengaluru witnessed over 2 000 road accidents till May

ಈ ಅಪಘಾತಗಳಲ್ಲಿ 368 ಮಾರಣಾಂತಿಕ ಮತ್ತು 1,672 ಮಾರಣಾಂತಿಕವಲ್ಲದ ಘಟನೆಗಳು ಎಂದು ದಾಖಲಾಗಿದೆ. 2,000 ಕ್ಕೂ ಹೆಚ್ಚು ರಸ್ತೆ ಅಪಘಾತಗಳ ಪರಿಣಾಮವಾಗಿ 376 ಮಂದಿ ಮೃತಪಟ್ಟಿದ್ದಾರೆ. 1,736 ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸ್ ದಾಖಲೆಗಳ ವರದಿ ತಿಳಿಸಿದೆ.

ಬೆಂಗಳೂರು ಟ್ರಾಫಿಕ್ ಪೋಲೀಸರ 2024 ರ ಉಲ್ಲಂಘನೆಗಳ ದತ್ತಾಂಶವು 39,10,980 ಟ್ರಾಫಿ ನಿಯಮಗಳ ಉಲ್ಲಂಘನೆಗಳನ್ನು ಬಹಿರಂಗಪಡಿಸುತ್ತದೆ. ಅಜಾಗರೂಕ ಚಾಲನೆ ಮತ್ತು ಅತಿ ವೇಗವು ಪ್ರಮುಖ ಕಾಳಜಿಗಳಾಗಿವೆ. ಡ್ರಿಂಕ್ ಅಂಡ್ ಡ್ರೈವ್ ಪ್ರಕರಣಗಳು 5,433 ರಷ್ಟಿದ್ದು, ಕಟ್ಟುನಿಟ್ಟಾದ ಜಾರಿ ಮತ್ತು ಜಾಗೃತಿ ಅಭಿಯಾನಗಳ ತುರ್ತು ಅಗತ್ಯವನ್ನು ಒತ್ತಿಹೇಳುತ್ತದೆ.

ಇತರ ಗಮನಾರ್ಹ ಉಲ್ಲಂಘನೆಗಳಲ್ಲಿ ಪರವಾನಗಿ ಇಲ್ಲದೆ ಚಾಲನೆ ಮಾಡಿರುವ 2,710 ಪ್ರಕರಣಗಳು, ದೋಷಯುಕ್ತ ನೋಂದಣಿ ಫಲಕಗಳನ್ನು ಹೊಂದಿರುವ 87,277 ಪ್ರಕರಣಗಳು, ಮತ್ತು ಟ್ರಾಫಿಕ್ ಸಿಗ್ನಲ್‌ಗಳ ಜಂಪಿಂಗ್ ಮಾಡಿರುವ 2,46,284 ಪ್ರಕರಣಗಳು ಸೇರಿವೆ ಎಂದು ಪ್ರಕಟಣೆ ಸೇರಿಸಲಾಗಿದೆ.

Bengaluru witnessed over 2 000 road accidents till May

ಎಷ್ಟೇ ಜಾಗೃತಿ ಮೂಡಿಸಿದರೂ ಕೂಡ ಹೆಲ್ಮೆಟ್ ಉಲ್ಲಂಘನೆಯು ಗಮನಾರ್ಹ ಸಮಸ್ಯೆಯಾಗಿಯೇ ಉಳಿದಿದೆ, 16 ಲಕ್ಷಕ್ಕೂ ಹೆಚ್ಚು ಸವಾರರು ಮತ್ತು 10 ಲಕ್ಷ ಹಿಂಬದಿ ಸವಾರರು ಹೆಲ್ಮೆಟ್ ಇಲ್ಲದೆ ಸಿಕ್ಕಿಬಿದ್ದಿದ್ದಾರೆ. ಸುರಕ್ಷತಾ ಬೆಲ್ಟ್‌ಗಳಿಲ್ಲದೆ 1,83,321 ಪ್ರಕರಣಗಳು ಮತ್ತು ಚಾಲನೆ ಮಾಡುವಾಗ ಮೊಬೈಲ್ ಫೋನ್ ಬಳಸಿದ 48,947 ಪ್ರಕರಣಗಳನ್ನು ಡೇಟಾವು ಹೈಲೈಟ್ ಮಾಡುತ್ತದೆ.

ದ್ವಿಚಕ್ರ ವಾಹನಗಳು ಸಂಚಾರ ನಿಯಮ ಉಲ್ಲಂಘನೆಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದು, 33 ಲಕ್ಷಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದೆ. ಟೆಂಪೋಗಳು, ಲಘು ಮೋಟಾರು ವಾಹನಗಳು, ಆಟೋರಿಕ್ಷಾಗಳು, ಸರಕು ವಾಹನಗಳು ಮತ್ತು ಬಸ್‌ಗಳು ನಂತರದ ಸ್ಥಾನದಲ್ಲಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+