Bengaluru weather update: ಜನವರಿ 14ರವರೆಗೆ ವಿಪರೀತ ಚಳಿ, ದಟ್ಟ ಮಂಜು: ಹವಾಮಾನ ಮುನ್ಸೂಚನೆ

ಬೆಂಗಳೂರು, ಜನವರಿ 09: ಕರ್ನಾಟಕ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಮಂಗಳವಾರ ಸಹ ಅಲ್ಲಲ್ಲಿ ಮಳೆ ಬರಲಿದೆ. ಇತ್ತೀಚೆಗೆ ಚಳಿ ಹೆಚ್ಚಾಗುತ್ತಿದೆ. ಜನವರಿ 14ರವರೆಗೆ ನಗರವು ಅತ್ಯಧಿಕ ಚಳಿಗೆ ಸಾಕ್ಷಿಯಾಗಲಿದೆ. ಹಾಗಾದರೆ ಚಳಿ, ತಾಪಮಾನ ಪ್ರಮಾಣ, ವಾತಾವರಣ ಹೇಗಿರಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ನೀಡಿದ ಮುನ್ಸೂಚನೆಯ ವಿವರ ಇಲ್ಲಿದೆ.

ವಾತಾವರದಲ್ಲಿನ ತೀವ್ರ ಸ್ವರೂಪದ ಬದಲಾವಣೆಗಳು, ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತವು ಬೆಂಗಳೂರು ಸೇರಿ ಕರ್ನಾಟಕದಾದ್ಯಂತ ಚಳಿಗಾಲದ ಕೊನೆಯಲ್ಲಿ ಮಳೆಗಾಲದ ವಾತಾವರಣ ಸೃಷ್ಟಿಯಾಗುವಂತೆ ಮಾಡಿದೆ.

Bengaluru Weather: City Will Witness Light Rain-Heavy Fog and Cold till January 14th: Day Forecast

ಬಿರು ಬಿಸಿಲು ಕಂಡು ಬಂದಿದ್ದ ಉದ್ಯಾನನಗರಿ ಬೆಂಗಳೂರಿನಲ್ಲಿ ಎರಡು ದಿನದಿಂದ ತಂಪು ವಾತಾವರಣ, ಅತ್ಯಧಿಕ ಚಳಿ ಸೃಷ್ಟಿಯಾಗಿದೆ. ಅಲ್ಲದೇ ಎರಡು ದಿನದಿಂದ ನಗರದ ವಿವಿಧೆಡೆ ಸೋನೆ ಮಳೆ ಬೀಳುತ್ತಿದೆ. ಭಾನುವಾರ ಸಂಜೆಯಿಂದ ಸುರಿದ ತುಂತುರು ಮಳೆ ಇದೀಗ ಮಂಗಳವಾರವು ಮುಂದುವರಿಯಲಿದೆ. ಒಂದೆರಡು ಕಡೆಗಳಲ್ಲಿ ಜೋರು ಮಳೆಯಾಗುವ ಸಾಧ್ಯತೆಗಳು ಇವೆ ಎಂದು ಐಎಂಡಿ ತಿಳಿಸಿದೆ.

ನಾಳೆಯಿಂದ ಚಳಿ ಹೆಚ್ಚಳ: ದಟ್ಟ ಮಂಜು

ಇಂದು ಬೆಳಗ್ಗೆಯಿಂದಲೇ ಮೋಡ ಕವಿದ ವಾತಾವರಣ ಇದೆ. ಈಗಲೇ ಆಗಲೇ ಮಳೆ ಬರುವಂತೆ ಭಾಸವಾಗುತ್ತಿದೆ. ಬಿಸಿಲಿನ ದರ್ಶನ ಇವತ್ತು ಅಪರೂಪ ಎನ್ನಬಹುದು. ಅದೇ ರೀತಿ ಬುಧವಾರದಿಂದ ಬೆಂಗಳೂರಿನಲ್ಲಿ ಹಂತ ಹಂತವಾಗಿ ಚಳಿ ಹೆಚ್ಚಾಗಲಿದೆ. ಈ ವೇಳೆ ತಾಪಮಾನ ಇಳಿಕೆ ಆಗಲಿದೆ. ಬೆಳಗ್ಗೆ ದಟ್ಟ ಮಂಜು ಕವಿಯುವ ಲಕ್ಷಣಗಳು ಇವೆ. ಅತ್ಯಧಿಕ ತಂಪು ಗಾಳಿ ಬೀಸಲಿದ್ದು, ಚಳಿ ಏರಿಕೆ ಆಗಲಿದೆ.

Bengaluru Weather: City Will Witness Light Rain-Heavy Fog and Cold till January 14th: Day Forecast

ನಗರದಲ್ಲಿ ತಾಪಮಾನ-ಚಳಿ ಮುನ್ಸೂಚನೆ ಹೀಗಿದೆ

ಜನವರಿ 9 ರಿಂದ 14ರವರೆಗೆ ಮಬ್ಬು ವಾತಾವರಣ ಜೊತೆಗೆ ತೇವಾಂಶ ಭರಿತ ಗಾಳಿ ಬೀಸಲಿದೆ. ಇದರಿಂದ ವಾತಾವರಣ ಇನ್ನಷ್ಟು ಶೀತಮಯವಾಗಲಿದೆ. ಈಗಿರುವ ಕನಿಷ್ಠ ತಾಪಮಾನ 20-18 ಡಿಗ್ರಿ ಸೆಲ್ಸಿಯಸ್ ಮುಂದಿನ ದಿನಗಳಲ್ಲಿ 17 ಡಿಗ್ರಿ ಸೆಲ್ಸಿಯಸ್‌ಗೆ ಇಳಿಕೆ ಆಗಲಿದೆ.

ಇನ್ನೂ ನಗರದ ಗರಿಷ್ಠ ತಾಪಮಾನ ಎರಡು ದಿನದಿಂದ 23 ಡಿಗ್ರಿ ಆಸುಪಾಸಲ್ಲಿದೆ. ಇದು ಜನವರಿ 14ರ ಹೊತ್ತಿಗೆ ಕ್ರಮೇಣ 28 ಡಿಗ್ರಿ ಸೆಲ್ಸಿಯಸ್‌ವರೆಗೆ ಏರಿಕೆ ಆಗಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ಬೆಂಗಳೂರಿನಲ್ಲಿ ಎರಡು ವಾರ್ಡ್‌ಗಳಲ್ಲಿ ಸೋಮವಾರ ತುಸು ಬಿರುಸು ಮಳೆ ಆಗಿದೆ. ಉಳಿದಂತೆ ಸೋನೆ ಮಳೆ ಆಗಾಗ ಕಂಡು ಬಂದಿದೆ. ಇದೇ ವೇಳೆ ರಾಜ್ಯದ ಮಂಗಳೂರು, ಪಣಂಬೂರು, ತಾಳಗುಪ್ಪ, ಅಂಕೋಲಾ, ಕೊಪ್ಪಾದಲ್ಲಿ ಅತ್ಯಧಿಕ ಮಳೆ ಆಗಲಿದೆ..

ಅದೇ ರೀತಿ ಬೆಂಗಳೂರಿನ ಒಂದೆರಡು ಕಡೆಗಳಲ್ಲಿ ಸೋಮವಾರ ವಿವಿಧ ಬಡಾವಣೆಗಳಲ್ಲಿ ತುಂತರು-ಸೋನೆ ಮಳೆ ದಾಖಲಾಯಿತು ಎಂದು ಐಎಂಡಿ ವರದಿ ತಿಳಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+