Water Shut down: ಜ.23 ರಂದು ಬೆಂಗಳೂರಿನ ವಿವಿಧೆಡೆ ನೀರು ಪೂರೈಕೆ ಆಗಲ್ಲ, ಎಲ್ಲೆಲ್ಲಿ?
ಬೆಂಗಳೂರು, ಜನವರಿ 22: ಬೆಂಗಳೂರಿಗೆ ನಿತ್ಯ 1450 ಎಂಎಲ್‌ಡಿ ಕಾವೇರಿ ನೀರು ಪೂರೈಕೆ ಮಾಡುವ 'ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ' (BWSSB) ವ್ಯಾಪ್ತಿಯಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಳಾಗುತ್ತಿದೆ. ಈ ಕಾರಣದಿಂದ ಬುಧವಾರ ಜನವರಿ 23ರಂದು ನಗರದ ವಿವಿಧ ಪ್ರದೇಶಗಳಲ್ಲಿ ಕಾವೇರಿ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಜಲಮಂಡಳಿ ತಿಳಿಸಿದೆ.
ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ'ಯ 4ನೇ ಹಂತ, 2ನೇ ಹೆಗ್ಗನಹಳ್ಳಿಯಿಂದ ಗಾಂಧಿ ಕೃಷಿ ವಿಜ್ಞಾನ ಕೇಂದ್ರದ (ಜಿಕೆವಿಕೆ) ಕಡೆಗೆ ಸಾಗುವ 1800 ಮಿಮೀ ವ್ಯಾಸದ ನೀರಿನ ಮುಖ್ಯ ಕೊಳವೆಯ ನೀರು ನಿಲುಗಡೆ ಮಾಡುವ ಕಾಮಗಾರಿ ನಡೆಸಲಾಗುವುದು. ಹೀಗಾಗಿ ಜನವರಿ 23ರ ಬೆಳಗ್ಗೆ 05 ಗಂಟೆಯಿಂದ ಮರುದಿನ ಜನವರಿ 24 ರ ಬೆಳಗ್ಗೆ 05ರವರೆಗೆ ಸುಮಾರು 24 ಗಂಟೆಗಳ ಕಾಲ ಈ ಕೆಳಕಂಡ ಪ್ರದೇಶಗಳಲ್ಲಿ ಕಾವೇರಿ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು BWSSB ಪ್ರಕಟಣೆ ಮಾಹಿತಿ ನೀಡಿದೆ.

ಎಲ್ಲೆಲ್ಲಿ ಕಾವೇರಿ ನೀರು ಪೂರೈಕೆಯಲ್ಲಿ ವ್ಯತ್ಯಯ ಆಗುತ್ತೆ?
ಮರಿಯಪ್ಪನ ಪಾಳ್ಯ, ನಾಗರಭಾವಿ, ಎಸ್.ಎಂ.ವಿ ಲೇಔಟ್ 1 ರಿಂದ 9 ನೇ ಬ್ಲಾಕ್, ಮಲ್ಲತಹಳ್ಳಿ, ಆರ್.ಆರ್. ನಗರ, ಐಡಿಯಲ್ ಹೋಮ್ಸ್, ಕೋಡಿಪಾಳ್ಯ, ಚನ್ನಸಂದ್ರ, ಕೆಂಗೇರಿ, ಕೆಂಗೇರಿ ಉಪನಗರ, ನಾಗದೇವನಹಳ್ಳಿ, ಕೊಟ್ಟಿಗೆಪಾಳ್ಯ, ಹೇರೋಹಳ್ಳಿ, ಹೆಗ್ಗನಹಳ್ಳಿ, ಕೆಂಚೇನಹಳ್ಳಿ, ಹಲಗೆ ವಡೇರನಹಳ್ಳಿ, ಸುಂಕದಕಟ್ಟೆ, ರಾಜಗೋಪಾಲನಗರ, ಲಕ್ಷ್ಮಿ ದೇವಿನಗರ, , ಪೀಣ್ಯ, ಟಿ.ದಾಸರಹಳ್ಳಿ, ನೆಲಗದರನಹಳ್ಳಿ, ಲಗ್ಗೆರೆ, ಪೀಣ್ಯ ಕೈಗಾರಿಕಾ ಪ್ರದೇಶ.
ಜಕ್ಕೂರು, ಕಾಫಿ ಬೋರ್ಡ್ ಲೇಔಟ್, HMT ಲೇಔಟ್, ಬಗಲಗುಂಟೆ, ಎಂ.ಇ.ಐ ಲೇಔಟ್, ಅಬ್ಬಿಗೆರೆ, ಬ್ಯಾಟರಾಯನಪುರ, ಅಮೃತಹಳ್ಳಿ, ಕೆಂಪಾಪುರ, ಯಲಹಂಕ ಓಲ್ಡ್ ಆಂಡ್ ನ್ಯೂ ಟೌನ್, ಜಾಲಹಳ್ಳಿ, ಬಿ.ಇ.ಎಲ್ ರಸ್ತೆ, ಮುತ್ಯಾಲನಗರ, ಜೆ.,ಪಿ ಪಾರ್ಕ್, ದಾಸರಹಳ್ಳಿ, ರಾಚೇನಹಳ್ಳಿ, ಮಹಾಲಕ್ಷ್ಮಿ ಬಡಾವಣೆ, ಸುಬ್ರಮಣ್ಯನಗರ, ಗಾಯತ್ರಿನಗರ, ಜಿ.ಸಿ.ನಗರ, ಕುರುಬರಹಳ್ಳಿ, ನಂದಿನಿ ಬಡಾವಣೆ, ಪ್ರಕಾಶನಗರ, ಗೊರುಗುಂಟೆಪಾಳ್ಯ, ಶಿವನಹಳ್ಳಿ, ಕೋಗಿಲು, ವಿದ್ಯಾರಣ್ಯಪುರ, ಸಿಂಗಾಪುರ, ಕಾಮಾಕ್ಷಿಪಾಳ್ಯ, ಬಸವೇಶ್ವನಗರ ವ್ಯಾಪ್ತಿಯಲ್ಲಿ ನೀರು ಸರಬರಾಜಿನಲ್ಲಿ ಒಂದು ದಿನ ಅಡಚಣೆ ಉಂಟಾಗಲಿದೆ.
ಮಂಜುನಾಥನಗರ, ಶಂಕರಮಠ, ಮಹಾಲಕ್ಷ್ಮಿಪುರಂ ಲೇಔಟ್, ಶಂಕರನಗರ, ಕಮಲಾನಗರ, ಶಕ್ತಿಗಣಪತಿನಗರ, ವಿಜಯನಗರ, ಆರ್.ಪಿ.ಸಿ ಲೇಔಟ್, ಚೋಳರಪಾಳ್ಯ, ಹಂಪಿನಗರ, ಸಣ್ಣಕ್ಕಿಬಯಲು, ಅಗ್ರಹಾರ ದಾಸರಹಳ್ಳಿ, ರಾಜಾಜಿನಗರ 6ನೇ ಬ್ಲಾಕ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನೀರು ಪೂರೈಕೆಯು ಆಗುವುದಿಲ್ಲ. ಈ ಅಡಚಣೆಗೆ ಜಲಮಂಡಳಿ ವಿಷಾಧಿಸುತ್ತದೆ. ದಯಮಾಡಿ ಸಾರ್ವಜನಿಕರು ಸಹಕರಿಸುವಂತೆ ಜಲಮಂಡಳಿ ಅಧ್ಯಕ್ಷ ಡಾ.ವಿ.ರಾಮ್ ಪ್ರಸಾತ್ ಮನೋಹರ್ ಕೋರಿದ್ದಾರೆ.












Click it and Unblock the Notifications