Bengaluru Water Crisis: ಬೆಂಗಳೂರಿನಲ್ಲಿ ನೀರಿಲ್ವಾ? ಆನಂದ್ ಮಹೀಂದ್ರ ವಿಡಿಯೋ ನೋಡಿ
ಇತ್ತೀಚಿನ ದಿನಗಳಲ್ಲಿ ನೀರಿದೆ ಅನ್ನೋರಿಗಿಂತ ನೀರಿಲ್ಲ ಎನ್ನುತ್ತಾ ವಿಡಿಯೋ ಹಂಚಿಕೊಳ್ಳುವವರ ಸಂಖ್ಯೆ ಹೆಚ್ಚಾಗಿದೆ. ಆದರೆ ನೀರನ್ನು ಪಡೆಯುವುದು, ಬಳಸುವುದು ಹಾಗೂ ಅದರ ಬಗ್ಗೆ ಅರಿವು ಮೂಡಿಸುವುದು ಕಡಿಮೆಯಾಗಿದೆ. ಈ ವಿಚಾರದಲ್ಲಿ ಮಹೀಂದ್ರಾ ಗ್ರೂಪ್ ಅಧ್ಯಕ್ಷ ಆನಂದ್ ಮಹೀಂದ್ರಾ ಅವರ ವಿಡಿಯೋ ನೀರಿನ ಸಮಸ್ಯೆಗೆ ಕೊಂಚ ಪರಿಹಾರವನ್ನು ನೀಡಿದೆ.
ಬೆಂಗಳೂರು ನೀರಿನ ಬಿಕ್ಕಟ್ಟು ಪರಿಹಾರಕ್ಕೆ ಮಹೀಂದ್ರಾ ಗ್ರೂಪ್ ಅಧ್ಯಕ್ಷ ಆನಂದ್ ಮಹೀಂದ್ರಾ ವಿಶಿಷ್ಟವಾದ ಐಡಿಯಾವನ್ನು ನೀಡಿದ್ದಾರೆ. ಈ ಬಗ್ಗೆ ಅವರು ವಿಡಿಯೋವೊಂದನ್ನು ಹಂಚಿಕೊಂಡಿದ್ದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.

ಮಹೀಂದ್ರಾ ಗ್ರೂಪ್ ಅಧ್ಯಕ್ಷ ಆನಂದ್ ಮಹೀಂದ್ರಾ ಅವರು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳ ಅತ್ಯಾಸಕ್ತಿಯ ಬಳಕೆದಾರರಾಗಿದ್ದಾರೆ. ವಿವಿಧ ಅಭಿರುಚಿಗಳು ಮತ್ತು ಕೆಲ ವರ್ಗಕ್ಕೆ ಸಂಬಂಧಿಸಿದ ವಿಷಯಗಳು, ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವುದರಿಂದ ಇವರ ಫಾಲೋವರ್ಸ್ ಕೂಡ ಅಧಿಕ.
ಇದೀಗ ಬೆಂಗಳೂರು ತೀವ್ರ ನೀರಿನ ಬಿಕ್ಕಟ್ಟಿಗೆ ಸಿಲುಕಿರುವ ಕಾರಣ ನಗರದ ನೀರಿನ ಕೊರತೆಯ ಸಮಸ್ಯೆಯನ್ನು ಪರಿಹರಿಸಲು ಮಹೀಂದ್ರಾ ಒಂದು ವಿಶಿಷ್ಟ ಮಾರ್ಗವನ್ನು ಸೂಚಿಸಿದ್ದಾರೆ. ನೀರನ್ನು ಪಡೆಯಲು ಎಸಿಯನ್ನು ಹೇಗೆ ಬಳಸಬಹುದು ಎಂಬುದನ್ನು ತೋರಿಸುವ ವೀಡಿಯೊವನ್ನು ಅವರು X ನಲ್ಲಿ ಹಂಚಿಕೊಂಡಿದ್ದಾರೆ.
ಎಸಿ ತ್ಯಾಜ್ಯ ನೀರನ್ನು ಹೊರಹಾಕುತ್ತದೆ. ಅದನ್ನು ಹೇಗೆ ಬಳಕೆ ಮಾಡಬಹುದು ಜೊತೆಗೆ ಯಾವುದಕ್ಕೆ ಬಳಕೆ ಮಾಡಬಹುದು ಎನ್ನುವ ಬಗ್ಗೆ ವಿಡಿಯೋದಲ್ಲಿ ವಿವರಿಸಲಾಗಿದೆ. ಎಸಿಯಿಂದ ಬರುವ ನೀರನ್ನು ಹೇಗೆ ಪಡೆಯಬಹುದು ಎಂದು ವಿಡಿಯೋದಲ್ಲಿ ತೋರಿಸಲಾಗಿದೆ. ಜೊತೆಗೆ ಈ ನೀರನ್ನು ಕಾರನ್ನು ತೊಳೆಯಲು, ಗಿಡಗಳಿಗೆ ಹಾಕಲು, ಮನೆ ಸ್ವಚ್ಚಗೊಳಿಸಲು ಹಾಗೂ ಟಾಯ್ಲೆಟ್ ಫ್ಲೆಶ್‌ಗೂ ಬಳಸಬಹುದು.
This needs to become standard equipment throughout India wherever people use A/Cs
— anand mahindra (@anandmahindra) March 16, 2024
Water is Wealth.
It needs to be stored safely…
👏🏽👏🏽👏🏽
Spread the word. pic.twitter.com/vSK0bWy5jm
ವೀಡಿಯೋದಲ್ಲಿ ಏನಿದೆ?
ವೀಡಿಯೊದಲ್ಲಿ ವಿಂಡೋ ಎಸಿಯನ್ನು ನೋಡಬಹುದು. ಅದರ ಔಟ್ಲೆಟ್ಗೆ ಪೈಪ್ ಅನ್ನು ಸಂಪರ್ಕಿಸಲಾಗಿದೆ. ಈ ಪೈಪ್ ಸಿಲಿಂಡರಾಕಾರದ ಕಂಟೇನರ್ಗೆ ಸಂಪರ್ಕ ಹೊಂದಿದೆ. ಅಗತ್ಯವಿದ್ದಾಗ ಈ ಸಂಗ್ರಹವಾದ ನೀರನ್ನು ಮನೆ ಸ್ವಚ್ಛಗೊಳಿಸಲು, ತೋಟಗಾರಿಕೆ ಇತ್ಯಾದಿಗಳಿಗೆ ಬಳಸಬಹುದು.
2023ರಲ್ಲಿ ಮಳೆ ಅಭಾವ, ಹೆಚ್ಚಾದ ತಾಪಮಾನ, ಒಣಗಿದ ಕೆರೆ ಹಾಗೂ ಜಾಲಾಶಯಗಳಿಂದಾಗಿ ಜನ ಈ ಬಾರಿ ಹೆಚ್ಚು ನೀರಿನ ಬಿಕ್ಕಟ್ಟಿಗೆ ಸಿಲುಕಿದ್ದಾರೆ. ಟ್ಯಾಂಕರ್ ಮೂಲಕ ನೀರು ಪೂರೈಕೆ ಸಾಧ್ಯವಾಗುತ್ತಿಲ್ಲ. ಜನ ಗಂಟೆಗಟ್ಟಲೆ ನಿಂತರೂ ಒಂದು ಬಿಂದಿಗೆ ನೀರು ಸಿಗುವುದು ಕಷ್ಟವಾಗಿದೆ. ಹೀಗಾಗಿ ಕಸದಿಂದ ರಸ ಎಂಬಂತೆ ಆನಂದ್ ಮಹೀಂದ್ರಾ ಅವರು ಎಸಿ ತ್ಯಾಜ್ಯ ನೀರನ್ನು ಬಳಕೆಯ ಬಗ್ಗೆ ವಿಡಿಯೋ ಹಂಚಿಕೊಂಡಿದ್ದಾರೆ. ಈ ಪೋಸ್ಟ್‌ಗೆ ಹಲವು ಕಾಮೆಂಟ್‌ಗಳು ಬಂದಿವೆ. ಕೆಲವನ್ನು ಇಲ್ಲಿ ಹಂಚಿಕೊಳ್ಳಲಾಗಿದೆ.
ಕಾಮೆಂಟ್‌ಗಳಲ್ಲಿ ಏನಿದೆ?
* ನೀತು ಖಂಡೇಲ್ವಾಲ್ @T_Investor_: ಎಸಿಯಿಂದ ಬಿಡುಗಡೆಯಾದ ನೀರು ಕುಡಿಯಲು ಸುರಕ್ಷಿತವಲ್ಲ. ಆದರೆ ಅದನ್ನು ತೋಟಗಾರಿಕೆ ಮತ್ತು ಶುಚಿಗೊಳಿಸುವ ಉದ್ದೇಶಗಳಿಗಾಗಿ ಬಳಸಬಹುದು.
* ಗೌರವ್ ಮೆಹ್ತಾ @digitalgauravm: ಖಂಡಿತ ಸರ್ ನೀವು ಹೇಳಿರುವುದನ್ನು ನಾನು ಒಪ್ಪುತ್ತೇನೆ! ಎಲ್ಲೆಲ್ಲೂ ನೀರಿನ ಸಂರಕ್ಷಣೆ ಬಹುಮುಖ್ಯವಾಗಿದೆ. ಉತ್ತಮ ಭವಿಷ್ಯಕ್ಕಾಗಿ ಜಾಗೃತಿಯನ್ನು ಹರಡುತ್ತಲೇ ಇರೋಣ.
*ಅಪೂರ್ವ್ ಆನಂದ್ @apurv_anand: ವಾವ್.... ನೀರನ್ನು ಉಳಿಸಲು ಇದೊಂದು ಉತ್ತಮ ಮಾರ್ಗವಾಗಿದೆ.ವಿಶೇಷವಾಗಿ ಬೆಂಗಳೂರಿನಲ್ಲಿ
*CA ರಾಹುಲ್ ಮಲೋಡಿಯಾ @carahulmalodia: ಅದ್ಭುತ ಶೇರ್ ಸರ್❤
*ಬ್ರಾಹ್ಮಣ @panditskt: ಇದು ಡೆಂಗ್ಯೂ ಸೊಳ್ಳೆಗಳ ಸಂತಾನೋತ್ಪತ್ತಿ ಸ್ಥಳ.
*ರವಿ ಕುಮಾರ್ @iamtheravikumar: ನೀರನ್ನು ಉಳಿಸಿ












Click it and Unblock the Notifications