ಕರ್ನಾಟಕ ಚುನಾವಣೆ 2023: ಬಿಬಿಎಂಪಿಯ ಕಸ ಸಂಗ್ರಹಿಸುವ ಸಾವಿರಾರು ಆಟೋ, ಟಿಪ್ಪರ್‌ಗಳಿಂದಲೂ ಮತದಾನ ಜಾಗೃತಿ

ಬೆಂಗಳೂರು, ಏಪ್ರಿಲ್ 10: ಬೆಂಗಳೂರಿನಲ್ಲಿ ಈ ಬಾರಿ ಮತದಾನ ಪ್ರಮಾಣವನ್ನು ಶೇಕಡಾ 75ರಷ್ಟು ತಲುಪಿಸುವ ಉದ್ದೇಶದಿಂದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP)ಯ ಹೊಸ ವಿಧಾನವೊಂದನ್ನು ಅನುಸರಿಸಿದೆ.

ಹೌದು, ಬಿಬಿಎಂಪಿ ಮುಖ್ಯ ಆಯುಕ್ತರು ಆಗಿರುವ ತುಷಾರ್ ಗಿರಿನಾಥ್ ಬೆಂಗಳೂರು ನಗರ ಜಿಲ್ಲ ಚುನಾವಣಾಧಿಕಾರಿಗಳು ಆಗಿದ್ದಾರೆ. ಅವರು ನಗರದ ಎಂಟು ವಲಯದಲ್ಲಿ ಮತದಾನ ಜಾಗೃತಿ, ಸ್ಥಳಿಯ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದ್ದಾರೆ. ಮತದಾನ ಹೆಚ್ಚಳಕ್ಕೆ ಕೈ ಜೋಡಿಸುವಂತೆ ಮನವಿ ಮಾಡಿದ್ದಲ್ಲದೇ, ಕಲಾವಿದರಿಂದ ನಾಟಕ ಪ್ರದರ್ಶನ್ಕೂ ಸಹ ವ್ಯವಸ್ಥೆ ಮಾಡಿದ್ದಾರೆ.

Bengaluru: Voting awareness using Loudspeaker in thousands of auto-tippers collecting garbage-BBMP

ಇದರೊಂದಿಗೆ ಇದೀಗ ನಗರದಲ್ಲಿ ಮತದಾನದ ಕುರಿತು ಜಾಗೃತಿ ಮೂಡಿಸಲು ಬಿಬಿಎಂಪಿಯು ಸಾವಿರಕ್ಕೂ ಹೆಚ್ಚು ಆಟೋರಿಕ್ಷಾ ಟಿಪ್ಪರ್‌ಗಳನ್ನು ಮೈಕ್ರೊಫೋನ್ ವ್ಯವಸ್ಥೆಯನ್ನು ಬಳಸಿಕೊಂಡು ಮನೆ-ಮನೆಗೆ ಕಸ ಸಂಗ್ರಹಿಸಲು ಬಳಸುತ್ತಿದೆ. ಈ ಮೂಲಕ ಕಸದ ಆಟೋಗಳು ಮತದಾನ ಜಾಗೃತಿ ಮೂಡಿಸುವ ಘೋಷಣೆಗಳನ್ನು ಮೊಳಗಿಸುತ್ತಿವೆ.

ಬಿಬಿಎಂಪಿ ಮತ್ತು ಬೆಂಗಳೂರು ನಗರ ಜಿಲ್ಲೆಯ ಅಧಿಕಾರಿಗಳು ನಗರದ ಒಟ್ಟು 28 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಈ ಹಿಂದಿನ ವಿಧಾನಸಭಾ ಚುನಾವಣೆಗೆ ಹೋಲಿಸಿದರೆ ಕನಿಷ್ಠ ಶೇಕಡಾ 20ರಷ್ಟು ಹೆಚ್ಚು ಮತದಾನದ ಪ್ರಮಾಣ ಏರಿಕೆ ಮಾಡುವ ಗುರಿ ಹೊಂದಿದ್ದಾರೆ. 2018 ರಲ್ಲಿ ಮತದಾನದ ಪ್ರಮಾಣವು ಕೇವಲ ಶೇಕಡಾ 55ರಷ್ಟು ಆಗಿತ್ತು. ಮೂಲಗಳ ಪ್ರಕಾರ ಬೆಂಗಳೂರಿನಲ್ಲಿ 95ಲಕ್ಷಕ್ಕೂ ಅಧಿಕ ಮತದಾರರು ಇದ್ದಾರೆ.

ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್ ಈ ಬಾರಿ ನಗರದ ಮತದಾನ ಪ್ರಮಾಣ 75ರಷ್ಟು ಆಗುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಈ ಕುರಿತು ಮಾತನಾಡಿದ ಅವರು, ನಗರದ ವಿವಿಧ ಸ್ಥಳಿಯ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘ (RWA) ಜೊತೆಗೆ ನಿರಂತರ ಸಭೆ ನಡೆಸಿದ್ದಾರೆ. ಇದರೊಂದಿಗೆ ಆಸ್ಪತ್ರೆ ನಿರ್ವಹಣೆ, ಹೋಟೆಲ್ ಉದ್ಯಮಿಗಳ ಸಂಘ ಮತ್ತು ಕೈಗಾರಿಕಾ ಸಂಘಗಳು ತಮ್ಮ ಉದ್ಯೋಗಿಗಳಿಗೆ ಮತದಾನ ಮಾಡಲು ಅವಕಾಶ ನೀಡುವುದನ್ನು ಚುನಾವಣಾ ಆಯೋಗ ಖಚಿತಪಡಿಸಿಕೊಳ್ಳುತ್ತಿದೆ ಎಂದು ಅವರು ತಿಳಿಸಿದರು.

ಬಿಬಿಎಂಪಿಯಿಂದ ವಿವಿಧ ವಲಯವಾರು ಮತದಾನ ಜಾಗೃತಿ

ಬೆಂಗಳೂರಿನಲ್ಲಿ ದಕ್ಷಿಣ, ಪಶ್ಚಿಮ, ಬೊಮ್ಮನಹಳ್ಳಿ ಸೇರಿದಂತೆ ವಿವಿಧ ವಲಯಗಳ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಜೊತೆಗೆ ಬೆಂಗಳೂರು ನಗರ ಜಿಲ್ಲಾ ಚುನಾವಣಾಧಿಕಾರಿಗಳು ಮತದಾನ ಜಾಗೃತಿ ಮೂಡಿಸಿದ್ದಾರೆ. ಅದಕ್ಕಾಗಿ ಇತ್ತೀಚೆಗಷ್ಟೇ ಸಭೆ ನಡೆಸಿದ್ದಾರೆ. ಈ ವೇಳೆ ಧ್ವನಿವರ್ಧಕಗಳ ಮೂಲಕ‌ ಜಾಗೃತಿ ಮೂಡಿಸುವ ಕುರಿತು ಅವರು ತಿಳಿಸಿದ್ದರು.

Bengaluru: Voting awareness using Loudspeaker in thousands of auto-tippers collecting garbage-BBMP

ಮತದಾನ‌ ಮಾಡುವ ಬಗ್ಗೆ ನಾಗರಿಕರಲ್ಲಿ ಹೆಚ್ಚು ಅರಿವು ಮೂಡಿಸುವ ಸಲುವಾಗಿ ಪಾಲಿಕೆ ಘನತ್ಯಾಜ್ಯ ವಿಭಾಗದ ಆಟೋ ಟಿಪ್ಪರ್ ಗಳಲ್ಲಿ ಧ್ವನಿ ವರ್ಧಕಗಳ ಮೂಲಕ ಮತದಾನದ ಪ್ರಾಮುಖ್ಯತೆಗ ಬಗ್ಗೆ ನಾಗರಿಕರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಲಾಗುತ್ತಿದೆ ಎಂದರು.

ನಿಯಂತ್ರಣಾ ಕೊಠಡಿ ಸ್ಥಾಪನೆಳ: ಬಿಬಿಎಂಪಿ

ನಗರದಲ್ಲಿ 80 ವರ್ಷ ಮೇಲ್ಪಟ್ಟವರಿಗಾಗಿ ಪೋಸ್ಟಲ್ ಬ್ಯಾಲೆಟ್ ವ್ಯವಸ್ಥೆ ಮಾಡಲಾಗಿದೆ. ಅದರ ಸದುಪಯೋಗವನ್ನು ಎಲ್ಲಾ ಹಿರಿಯ ನಾಗರಿಕರು ಪಡೆದುಕೊಂಡು ಮತ ಚಲಾಯಿಸಬೇಕು. ಯುವ ಮತದಾರರಲ್ಲಿ ಮತದಾನದ ಪ್ರಾಮುಖ್ಯತೆ ಬಗ್ಗೆ ಅರಿವು ಮೂಡಿಸುವ ಕೆಲಸ ಮಾಡಬೇಕು ಎಂದು ಅವರು ತಿಳಿಸಿದರು.

ಕೆ.ಆರ್.ಪುರ ವಿಧಾನ ಸಭಾ ಕ್ಷೇತ್ರ, ಜಯನಗರ ವಿಧಾನಸಭಾ ಕ್ಷೇತ್ರದ, ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರ, ರಾಜರಾಜೇಶ್ವರಿ ನಗರ, ಬೊಮ್ಮನಹಳ್ಳಿ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಕಂಟ್ರೋಲ್ ರೂಂ ಸ್ಥಾಪನೆ ಮಾಡಿದೆ. ಜೊತೆಗೆ ಸಹಾಯವಾಣಿಯನ್ನೂ ಸ್ಥಾಪಿಸಿದೆ. ಈ ಮೂಲಕ ನಗರದಲ್ಲಿ ಪಾರದರ್ಶಕ ಮತದಾನ ನಡೆಯುವಂತೆ ಬಿಬಿಎಂಪಿ ಶ್ರಮಿಸುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+