ಲೋಕಸಭಾ ಚುನಾವಣೆ: ಬೆಂಗಳೂರಲ್ಲಿ 1.6 ಲಕ್ಷ ಹೆಚ್ಚುವರಿ ಮತದಾರರು
ಬೆಂಗಳೂರು, ಜನವರಿ 15: ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿದೆ, 1.6 ಲಕ್ಷಕ್ಕಿಂತಲೂ ಹೆಚ್ಚು ಮಂದಿ ಮತದಾನಕ್ಕೆ ಅರ್ಹರಾಗಿದ್ದಾರೆ, ಅದರಲ್ಲಿ 17 ಸಾವಿರ ಹೊಸ ಮತದಾರರು ಸೇರ್ಪಡೆಯಾಗಿದ್ದಾರೆ.
ಚುನಾವಣಾ ಅಧಿಕಾರಿಗಳು ಇದೀಗ ಹೊಸ ಮತದಾರರ ಹೆಸರುಗಳನ್ನು ಪಟ್ಟಿ ಮಾಡಿದ್ದು, ಏನಾದರೂ ತಪ್ಪುಗಳಿದ್ದಲ್ಲಿ ಬುಧವಾರದ ಬಳಿಕ ಸರಿಪಡಿಸಿಕೊಳ್ಳಲು ಅವಕಾಶ ನೀಡಲಾಗುತ್ತಿದೆ.
ಬೆಂಗಳೂರಿನ ಒಟ್ಟು 28 ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು 89,57,750 ಮತದಾರರಿದ್ದಾರೆ, ಅದರಲ್ಲಿ 46,76,994 ಪುರುಷರು ಹಾಗೂ 42,72,205 ಮಹಿಳಾ ಮತದಾರರಿದ್ದಾರೆ. 2018ರ ವಿಧಾನಸಭಾ ಚುನಾವಣೆ ವೇಳೆ 87,98,335 ಮತದಾರರಿದ್ದರು.

ಬೆಂಗಳೂರು ದಕ್ಷಿಣದಲ್ಲಿ 5.9 ಲಕ್ಷ ಮತದಾರರಿದ್ದಾರೆ, ಶಿವಾಜಿನಗರದ ಅತಿ ಕಡಿಮೆ ಅಂದರೆ 1.9 ಲಕ್ಷ ಮತದಾರರಿದ್ದಾರೆ. ಬೆಂಗಳೂರು ಮತದಾರರ ಪಟ್ಟಿಯಿಂದ 1.77 ಲಕ್ಷ ಹೆಸರನ್ನು ಕೈಬಿಡಲಾಗಿದೆ. 19 ವರ್ಷ ಒಳಗಿನವರು 73,149 ಮಂದಿ ಮತದಾರರಿದ್ದಾರೆ.












Click it and Unblock the Notifications