ಬೆಂಗಳೂರು ಗಲಭೆ; ಇಬ್ಬರು ಕಾರ್ಪೊರೇಟರ್‌ಗಳಿಗೆ ಸಿಸಿಬಿ ನೋಟಿಸ್

ಬೆಂಗಳೂರು, ಆಗಸ್ಟ್ 18 : ಬೆಂಗಳೂರಿನ ಕಾವಲ್ ಭೈರಸಂದ್ರ, ಡಿ. ಜೆ. ಹಳ್ಳಿ, ಕೆ. ಜಿ. ಹಳ್ಳಿ ಪ್ರದೇಶಗಳಲ್ಲಿ ನಡೆದ ಗಲಭೆಯ ಬಗ್ಗೆ ಸಿಸಿಬಿ ತನಿಖೆ ಮುಂದುವರೆದಿದೆ. ವಿಚಾರಣೆಗೆ ಬರುವಂತೆ ಇಬ್ಬರು ಬಿಬಿಎಂಪಿ ಕಾರ್ಪೊರೇಟರ್‌ಗಳಿಗೆ ಸಿಸಿಬಿ ನೋಟಿಸ್ ಜಾರಿಗೊಳಿಸಿದೆ.

Recommended Video

      ಗಣಪತಿ ಹಬ್ಬ ಮಾಡೋರು ಈ ನಿಯಮ ಪಾಲಿಸಲೇ ಬೇಕು | Oneindia Kannada

      ಮಾಜಿ ಮೇಯರ್ ಸಂಪತ್ ರಾಜ್ ಮತ್ತು ಪುಲಿಕೇಶಿ ನಗರ ಕಾರ್ಪೊರೇಟರ್ ಅಬ್ದುಲ್ ರಕೀಬ್ ಝಾಕೀರ್‌ಗೆ ವಿಚಾರಣೆಗೆ ಬರುವಂತೆ ನೋಟಿಸ್ ನೀಡಲಾಗಿದೆ. ಈ ಇಬ್ಬರು ನಾಯಕರು ಸಹ ಕಾಂಗ್ರೆಸ್ ಕಾರ್ಪೊರೇಟರ್‌ಗಳು.

      ಕಾವಲ್ ಭೈರಸಂದ್ರದಲ್ಲಿ ನಡೆದ ಗಲಭೆ ಮತ್ತು ಶಾಸಕ ಅಖಂಡ ಶ್ರೀನಿವಾಸಮೂರ್ತಿ ನಿವಾಸದ ಮೇಲೆ ನಡೆದ ದಾಳಿಗೆ ರಾಜಕೀಯ ಕಾರಣವಿರಬಹುದು ಎಂದು ಸಿಸಿಬಿ ತನಿಖೆ ನಡೆಸುತ್ತಿದೆ. ಆದ್ದರಿಂದ, ಕಾರ್ಪೊರೇಟರ್‌ಗಳನ್ನು ವಿಚಾರಣೆಗೆ ಕರೆಯಲಾಗಿದೆ.

      Bengaluru Violence CCB Notice To Two BBMP Corporators

      ಮಾಜಿ ಮೇಯರ್ ಸಂಪತ್ ರಾಜ್ ಆಪ್ತ ಅರುಣ್‌ರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದರು. ಈ ಬಂಧನದ ಬಳಿಕ ವಿಚಾರಣೆಗೆ ಬರುವಂತೆ ಸಂಪತ್‌ ರಾಜ್‌ಗೆ ಸಿಸಿಬಿ ನೋಟಿಸ್ ನೀಡಿದೆ. ಮಂಗಳವಾರ ಇಬ್ಬರು ಕಾರ್ಪೊರೇಟರ್‌ಗಳ ವಿಚಾರಣೆ ನಡೆಯಲಿದೆ.

      ಬೆಂಗಳೂರು ನಗರದಲ್ಲಿ ನಡೆದ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸೋಮವಾರ ರಾತ್ರಿ ಮತ್ತೆ 30 ಜನರನ್ನು ಬಂಧಿಸಲಾಗಿದೆ. ಇದುವರೆಗೂ ಬಂಧಿತರಾದವರ ಸಂಖ್ಯೆ 380ಕ್ಕೆ ಏರಿಕೆಯಾಗಿದೆ.

      ಗಲಭೆಯ ತನಿಖೆಗೆ ಪೊಲೀಸರು ಸೈಬರ್ ಕ್ರೈಂ ಮತ್ತು ವಿಧಿ ವಿಜ್ಞಾನ ಪ್ರಯೋಗಾಲಯದ ತಂಡದ ಸಹಾಯ ಪಡೆಯುತ್ತಿದ್ದಾರೆ. ಮೊಬೈಲ್ ಕರೆಗಳ ಮಾಹಿತಿ, ವಾಟ್ಸಪ್ ಗ್ರೂಪ್ ಚಾಟ್, ಸಿಸಿಟಿವಿ ದೃಶ್ಯಾವಳಿಗಳನ್ನು ಈ ತಂಡಗಳು ಪರಿಶೀಲನೆ ನಡೆಸುತ್ತಿವೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+