ವಿದ್ವತ್ ಆರೋಗ್ಯದಲ್ಲಿ ಚೇತರಿಕೆ: ವಾರ್ಡ್ ಗೆ ಸ್ಥಳಾಂತರ
ಬೆಂಗಳೂರು, ಫೆಬ್ರವರಿ 26: ಯು.ಬಿ.ಸಿಟಿಯ ಘರ್ಜಿ ಕೆಫೆಯಲ್ಲಿ ಶಾಂತಿನಗರ ಶಾಸಕ ಹ್ಯಾರಿಸ್ ಮಗ ಮೊಹಮ್ಮದ್ ನಲಪಾಡ್ ನಿಂದ ಹಲ್ಲೆಗೊಳಗಾದ ವಿದ್ವತ್ ರನ್ನು ಭಾನುವಾರ(ಫೆ.25) ಐಸಿಯುನಿಂದ ವಾರ್ಡ್ ಗೆ ಸ್ಥಳಾಂತರಿಸಲಾಗಿದೆ.
ಫೆ.17 ರ ರಾತ್ರಿ ನಲಪಾಡ್ ಮತ್ತವರ ಸಹಚರರಿಂದ ತೀವ್ರ ಹಲ್ಲೆಗೊಳಗಾಗಿ, ಗಂಭಿರ ಸ್ಥಿತಿಯಲ್ಲಿ ಬೆಂಗಳೂರಿನ ಮಲ್ಯ ಆಸ್ಪತ್ರೆಗೆ ದಾಖಲಾಗಿದ್ದ ವಿದ್ವತ್ ಏಳು ದಿನಗಳ ಚಿಕಿತ್ಸೆಯ ನಂತರ ವಾರ್ಡ್ ಗೆ ಸ್ಥಳಾಂತರಗೊಂಡಿದ್ದಾರೆ. ಅವರ ಆರೋಗ್ಯದಲ್ಲಿ ಕೊಂಚ ಸುಧಾರಣೆ ಕಂಡುಬಂದಿದ್ದು, ಮುಖದ ಬಾವು ಶೇ.90 ರಶಶ್ಟು ಕಡಿಮೆಯಾಗಿದೆ ಎಂದು ಮಲ್ಯ ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ.

ಜಾಮೀನು ಅರ್ಜಿ ವಿಚಾರಣೆ
ವಿದ್ವತ್ ರನ್ನು ಥಳಿಸಿ ಜೈಲುಪಾಲಾಗಿರುವ ನಲಪಾಡ್ ಮತ್ತವರ ಸಹಚರರ ಜಾಮೀನು ಅರ್ಜಿಯನ್ನು 63 ನೇ ಸೆಷನ್ಸ್ ನ್ಯಾಯಾಲಯ ಇಂದು(ಫೆ.26) ಕೈಗೆತ್ತಿಕೊಳ್ಳಲಿದೆ.












Click it and Unblock the Notifications