ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸರ್ಕಾರಿ ಭೂಮಿ ಒತ್ತುವರಿ ವಿರುದ್ಧ ಝಳಪಿಸಿದ ಜೆಸಿಬಿ ಕಾರ್ಯಾಚರಣೆ

By Nayana
|
Google Oneindia Kannada News

ಬೆಂಗಳೂರು, ಆಗಸ್ಟ್ 25: ಬೆಂಗಳೂರಲ್ಲಿ ಬೆಳ್ಳಂಬೆಳಗ್ಗೆ ಒತ್ತುವರಿ ಕಾರ್ಯಾಚರಣೆ ನಡೆಸಿ ಸುಮಾರು 15ಕೋಟಿ ರೂ. ಮೌಲ್ಯದ ಜಾಗವನ್ನು ಜಿಲ್ಲಾಡಳಿತ ವಶಕ್ಕೆ ಪಡೆದಿದೆ. ಬೆಂಗಳೂರು ನಗರ ಜಿಲ್ಲಾ ಪೂರ್ವ ಭಾಗದ ಕೆಆರ್ ಪುರ ಹೋಬಳಿಯ ಬಾಣಸವಾಡಿ ಸರ್ವೇ ನಂಬರ್ 07ರಲ್ಲಿ 0.27ಗುಂಟೆ ಜಮೀನು ಒತ್ತುವರಿ ತೆರವುಗೊಳಿಸಲಾಯಿತು.

ಗ್ರಾನೈಟ್‌ ಅಂಗಡಿ ಮಾಡಿಕೊಂಡಿದ್ದ ಜಮೀನನ್ನು ಜಿಲ್ಲಾಡಳಿತ ವಶಕ್ಕೆ ಪಡೆದಿದೆ. ಡಿ.ಸಿ. ವಿಜಯ್‌ ಶಂಕರ್ ಅವರ ನೇತೃತ್ವದಲ್ಲಿ ಒತ್ತುವರಿ ತೆರವು ಕಾರ್ಯ ಕೈಗೊಳ್ಳಲಾಗಿತ್ತು. ನಗರದ ಒಟ್ಟು ನಾಲ್ಕು ಸ್ಥಳಗಳಲ್ಲಿ ಕಾರ್ಯಾಚರಣೆ ನಡೆಯುತ್ತಿದ್ದು, ಒಟ್ಟು 6.10 ಎಕರೆ ಜಮೀನು ವಶಪಡಿಸಿಕೊಳ್ಳಲಾಗಿದ್ದು 37ಕೋಟಿ ಮೌಲ್ಯದ ಸರ್ಕಾರಿ ಜಮೀನು ಇದಾಗಿದೆ.

ಬಿಬಿಎಂಪಿಯಿಂದ ಮತ್ತೆ ರಾಜಾಕಾಲುವೆ ಒತ್ತುವರಿ ತೆರವುಬಿಬಿಎಂಪಿಯಿಂದ ಮತ್ತೆ ರಾಜಾಕಾಲುವೆ ಒತ್ತುವರಿ ತೆರವು

ಕೆಲವು ದಿನಗಳ ಹಿಂದಷ್ಟೇ ಬಿಬಿಎಂಪಿಯು ಬೆಂಗಳೂರಿನ ಬೆಳ್ಳಂದೂರು ಬಫರ್‌ ವಲಯದಲ್ಲಿದ್ದ 400 ಶೆಡ್ ಗಳನ್ನು ಕೆಡವಿದ್ದು ಸುಮಾರು 1500ಕ್ಕೂ ಹೆಚ್ಚು ಮಂದಿ ನಿರಾಶ್ರಿತರಾಗಿದ್ದಾರೆ. ಆದರೆ ಯಾವುದೇ ಸೂಚನೆ ಇಲ್ಲದೆ ಏಕಾಏಕಿ ಬಂದು ಶೆಡ್‌ಗಳನ್ನು ಕಿತ್ತುಹಾಕಿರುವುದರಿಂದ ನಿರಾಶ್ರಿತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಕೆಲ ನಿವಾಸಿಗಳು ಶೆಡ್‌ಗಳನ್ನು ಕೆವಲು ಬಿಡುವುದಿಲ್ಲ ಎಂದು ಧರಣಿ ಕೂತರೂ ಬಿಡದೆ ಅಧಿಖಾರಿಗಳು ಶೆಡ್‌ಗಳನ್ನು ಕೆವಿದರು, ಜೆಸಿಬಿಯಿಂದ ಶೆಡ್‌ಗಳ ತೆರವು ಕಾರ್ಯಾರಚಣೆ ನಡೆಯುವಾಗ ನಿವಾಸಿಗಳು ಪ್ರತಿಭಟನೆ ನಡೆಸಿದ್ದರು.

Bengaluru urban DC acquires six acres of land encroached

ದಿಢೀರ್ ಎಚ್ಚೆತ್ತ ಪಾಲಿಕೆಯಿಂದ 400 ಶೆಡ್ ತೆರವು, 1500 ಜನ ಬೀದಿಗೆದಿಢೀರ್ ಎಚ್ಚೆತ್ತ ಪಾಲಿಕೆಯಿಂದ 400 ಶೆಡ್ ತೆರವು, 1500 ಜನ ಬೀದಿಗೆ

ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆಯನ್ನು ಬಿಬಿಎಂಪಿ ಶೀಘ್ರದಲ್ಲೇ ಆರಂಭಿಸಲಿದೆ, ಕರ್ನಾಟಕದಲ್ಲಿ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ಡಾ.ಜಿ.ಪರಮೇಶ್ವರ ಅವರು ರಾಜಾಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆಯನ್ನು ಪುನಃ ಆರಂಭಿಸ ಸುಳಿವು ನೀಡಿದ್ದರು. ಬಿಬಿಎಂಪಿ ಈ ಕುರಿತು ಸಮೀಕ್ಷೆ ಮಾಡಿಸಿದ್ದು, ವರದಿ ಶೀಘ್ರ ಸಲ್ಲಿಕೆಯಾಗುವ ಸಾಧ್ಯತೆ ಇದೆ.

English summary
Bengaluru urban deputy commissioner Vijay Shankar has taken an operation against environment on Saturday and recorded Rs.37 crores valued 6.10 acres of land.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X