ಪರಪ್ಪನ ಅಗ್ರಹಾರ ಮುಖ್ಯದ್ವಾರದಿಂದಲೇ ಖೈದಿ ಎಸ್ಕೇಪ್!
ಪರಪ್ಪನ ಅಗ್ರಹಾರ ಕಾರಾಗೃಹದ ಮುಖ್ಯಬಾಗಿಲಿನಿಂದಲೇ ಖೈದಿಯೊಬ್ಬ ರಾಜಾರೋಷವಾಗಿ ಎಸ್ಕೇಪ್ ಆಗಿದ್ದಾನೆ. ಜೈಲು ಅಧಿಕಾರಿಗಳು ಸಣ್ಣ ಎಡವಟ್ಟನ್ನೇ ಉಪಯೋಗಿಸಿಕೊಂಡು ವಿಚಾರಣಾಧೀನ ಚಾಲಾಕಿ ಖೈದಿ ಹೇಮಂತ್ ತಪ್ಪಿಸಿಕೊಂಡಿದ್ದಾನೆ.
ಬೆಂಗಳೂರು, ಫೆಬ್ರವರಿ 21: ಪರಪ್ಪನ ಅಗ್ರಹಾರ ಕಾರಾಗೃಹದ ಮುಖ್ಯಬಾಗಿಲಿನಿಂದಲೇ ಖೈದಿಯೊಬ್ಬ ರಾಜಾರೋಷವಾಗಿ ಎಸ್ಕೇಪ್ ಆಗಿದ್ದಾನೆ. ಜೈಲು ಅಧಿಕಾರಿಗಳು ಸಣ್ಣ ಎಡವಟ್ಟನ್ನೇ ಉಪಯೋಗಿಸಿಕೊಂಡು ವಿಚಾರಣಾಧೀನ ಚಾಲಾಕಿ ಖೈದಿ ಹೇಮಂತ್ ತಪ್ಪಿಸಿಕೊಂಡಿದ್ದಾನೆ. ಅರೆ ಇದು ಹೇಗೆ ಅಂತ ಕೇಳ್ತಿರಾ?
ಆಗಿದ್ದಿಷ್ಟೆ; ಹೇಮಂತ್ ಮೇಲೆ ಕಳ್ಳತನ ಮತ್ತು ಇತರ ಎರಡು ಪ್ರಕರಣಗಳಿದ್ದವು. ಈ ಸಂಬಂಧ ಉಪ್ಪಾರಪೇಟೆ ಠಾಣೆಯಲ್ಲಿ ಪೊಲೀಸ್ ಕೇಸು ದಾಖಲಾಗಿತ್ತು. [ಪರಪ್ಪನ ಅಗ್ರಹಾರ : ತರಕಾರಿ ವಾಹನದಲ್ಲಿ ಕೈದಿ ಪರಾರಿ!]

ಎರಡು ಪ್ರಕರಣಗಳಲ್ಲಿ ಒಂದು ಪ್ರಕರಣದಲ್ಲಷ್ಟೆ ಹೇಮಂತ್ ಗೆ ಜಾಮೀನು ಮಂಜೂರಾಗಿತ್ತು. ಮತ್ತೊಂದು ಪ್ರಕರಣದಲ್ಲಿ ಜಾಮೀನಿನ್ನೂ ಸಿಕ್ಕಿರಲಿಲ್ಲ. ಆದರೆ ಜೈಲಿನ ಅಧಿಕಾರಿಗಳಾದ ಪರಮೇಶ ನಾಯ್ಕ ಮತ್ತು ಹೇಮಾವತಿಯವರಿಗೆ ಒಂದು ಪ್ರಕರಣದಲ್ಲಿ ಸಿಕ್ಕಿದ ಜಾಮೀನನ್ನೇ ತೋರಿಸಿ ಜೈಲಿನಿಂದ ಪರಾರಿಯಾಗಿದ್ದಾನೆ.
ಹೀಗೆ ಚಾಲಾಕಿ ಹೇಮಂತ್ ಜೈಲು ಅಧಿಕಾರಿಗಳಿಗೆ ಚಳ್ಳೆ ಹಣ್ಣು ತಿನ್ನಿಸಿ ಬಿಗಿ ಭದ್ರತೆಯ ಜೈಲಿನಿಂದಲೇ ರಾಜಾರೋಷವಾಗಿ ಎಸ್ಕೇಪ್ ಆಗಿದ್ದಾನೆ. [ಅಮ್ಮನಂತೆ ಪರಪ್ಪನ ಅಗ್ರಹಾರ ಜೈಲಿನಿಂದಲೇ ಚಿನ್ನಮ್ಮನ ದರ್ಬಾರ್!]












Click it and Unblock the Notifications