Bengaluru: ಟ್ರಾಫಿಕ್‌ಗೆ ಬ್ರೇಕ್ ಹಾಕುವ 2 ಬೃಹತ್ ಕಾರಿಡಾರ್ 2024ಕ್ಕೆ ಪೂರ್ಣ

ಬೆಂಗಳೂರು, ಜುಲೈ 19: ಬೆಂಗಳೂರಿನಲ್ಲಿನ ಸಂಚಾರ ದಟ್ಟಣೆ ನಿವಾರಣೆಗೆ ಪ್ರತಿ ಸರ್ಕಾರಗಳು ಒಂದಲ್ಲ ಒಂದು ಯೋಜನೆ ರೂಪಿಸುತ್ತಲೇ ಇರುತ್ತವೆ. ಅದೇ ರೀತಿ 2019ರಲ್ಲಿ ಆರಂಭಗೊಂಡಿದ್ದ ನಗರದ ಹೊರವಲಯದಲ್ಲಿನ ರಸ್ತೆ ಮತ್ತು ಮೇಲ್ಸೇತುವೆ ರಸ್ತೆ ನವೀಕರಣ ಕಾಮಗಾರಿ ಮೊದಲ ಹಂತ ಕೆಲವೇ ತಿಂಗಳಲ್ಲಿ ಪೂರ್ಣಗೊಳ್ಳಲಿದೆ. ಈ ಮೂಲಕ ಸಾರ್ವಜನಿಕರಿಗೆ ಸುಹಿ ಸುದ್ದಿಯೊಂದು ಲಭಿಸಿದೆ.

ಬೆಂಗಳೂರಿನಲ್ಲಿ ಹೊರವಲಯದಲ್ಲಿ ಆರು ರಸ್ತೆ ಮತ್ತು ನಾಲ್ಕು ಸೇತುವೆಗಳ ರಸ್ತೆ ನವೀಕರಣ ಕಾಮಗಾರಿಯನ್ನು ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮವು (KRDCL) 2,095 ಕೋಟಿ ರೂಪಾಯಿ ವೆಚ್ಚದಲ್ಲಿ ಕೈಗೊಂಡಿತ್ತು. ಹೊಸಕೋಟೆ-ಬೂದಿಗೆರೆ ಮತ್ತು ನೆಲಮಂಗಲ-ಮಧುರೆ ಕಾರಿಡಾರಿನ ಮೊದಲ ಹಂತದ ಕಾಮಗಾರಿ 2024ರ ಜನವರಿಯೊಳಗೆ ಪೂರ್ಣಗೊಳ್ಳುವ ಸಾಧ್ಯತೆ ಇದೆ ಎಂದು ಕನ್ನಡಪ್ರಭ ವರದಿ ಮಾಡಿದೆ.

Bengaluru Two road Corridor Will Complete Next Year 2024 January

ನೆಲಮಂಗಲ -ಮಧುರೆ ಕಾರಿಡಾರ್ ರೈಲ್ವೆ ಮೇಲ್ಸೇತುವೆ ಮತ್ತು ರೈಲ್ವೆ ಕೆಳಸೇತುವೆಯನ್ನು ಸಹ ಹೊಂದಿದ್ದು ಇದು 15.25 ಕಿಮೀ ಉದ್ದ ಇದೆ. ಹೊಸಕೋಟೆ-ಬೂದಿಗೆರೆ ಕಾರಿಡಾರ್‌ನ ಒಟ್ಟು ಉದ್ದ 20.11 ಕಿಲೋ ಮೀಟರ್ ಇದೆ. ಹೊಸಕೋಟೆ-ಬೂದಿಗೆರೆ ಕ್ರಾಸ್ ರಸ್ತೆಯನ್ನು ಕೆಆರ್‌ಡಿಸಿಎಲ್‌ ಮೇಲ್ದರ್ಜೆಗೇರಿಸುವ ಕೆಲಸವು ನಡೆಯುತ್ತಿದೆ.

ಈ ಎರಡು ಕಾಮಗಾರಿಗಳ ಮೊದಲ ಹಂತವು 2019 ರಲ್ಲಿ ಆಂಭಗೊಂಡಿತ್ತು. ಈ ಮಧ್ಯೆ ಭೂಸ್ವಾಧೀನ, ಮರ ಕತ್ತರಿಸುವಿಕೆಗೆ ಸಮಯ ಹಿದಿಡ ಪರಿಣಾಮ ಹಾಗೂ ಕೊರೊನಾ ಪಿಡುಗಿನ ಸಂಬಂಧ ಕೆಲಸ ವಿಳಂಬವಾಯಿತು ಎನ್ನಲಾಗಿದೆ.

ಯೋಜನೆಯ ಅಂದಾಜು ವೆಚ್ಚದ ಮಾಹಿತಿ

ಬೂದಿಗೆರೆ ಕ್ರಾಸ್-ಹೊಸಕೋಟೆ, ಬೂದಿಗೆರೆ-ಸಿಂಗಹಳ್ಳಿ ಮತ್ತು ಮೈಲನಹಳ್ಳಿ ಮೂಲಕ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆ ಕಾಮಗಾರಿಯನ್ನು ಚುರುಕುಗೊಳಿಸಲು ಅಧಿಕಾರಿಗಳು ನಿರ್ಧರಿಸಿದ್ದಾರೆ. ಈ ಯೋಜನೆಗೆ ಒಟ್ಟು ಸುಮಾರು 137.51 ಕೋಟಿ ರೂಪಾಯ ತಗುಲಬಹುದು ಎನ್ನಲಾಗಿದೆ.

Bengaluru Two road Corridor Will Complete Next Year 2024 January

ಬೆಂಗಳೂರು ಉತ್ತರದಲ್ಲಿ, ಚಿಕ್ಕಮಧುರೆ ಮೂಲಕ ಎನ್ ಎಚ್ 4 ನಲ್ಲಿ ನೆಲಮಂಗಲದಿಂದ ರಾಜ್ಯ ಹೆದ್ದಾರಿ-74 ರಲ್ಲಿ ಮಧುರೆಗೆ ಸಂಪರ್ಕಿಸಲು 15.25 ಕಿಲೋ ಮೀಟರ್ ರಸ್ತೆ ನವೀಕರಣ ಯೋಜನೆಗೆ 155.69 ಕೋಟಿ ವೆಚ್ಚ ಮಾಡಲಾಗುತ್ತಿದೆ ಎಂದು ನಿಗಮದ ಮೂಲಗಳು ತಿಳಿಸಿವೆ.

ಈ ರಸ್ತೆ ಅಭಿವೃದ್ಧಿ ಯೋಜನೆಗಳಿಂದ ನಗರದ ಸಂಚಾರದ ದಟ್ಟಣೆ ತುಸು ಕಡಿಮೆ ಆಗಲಿದೆ. ವಾರಾಂತ್ಯದಲ್ಲಿ ಹೆಚ್ಚಿರುವ ವಾಹನ ದಟ್ಟಣೆಗೆ ಈ ಯೋಜನೆ ಕಡಿವಾಣ ಹಾಕುವ ನಿರೀಕ್ಷೆ ಇದೆ. ಆದಷ್ಟು ಶೀಘ್ರವೇ ಕಾಮಗಾರಿಗಳನ್ನು ಪೂರ್ಣಗೊಳಿಸಲು ಕಾರ್ಯ ನಿರತವಾಗಿದ್ದೇವೆ. ಮುಂದಿನ ಜನವರಿ ಒಳಗೆ ಯೋಜನೆ ಮುಗಿಸಲಿದ್ದೇವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+