Benglauru 2 Tunnel Project: ಪ್ರಮುಖ ಟನಲ್ ರಸ್ತೆ ಯೋಜನೆಗಳಿಗೆ ಸರ್ಕಾರ ಒಪ್ಪಿಗೆ, ಟೋಲ್ ಎಷ್ಟು ಗೊತ್ತಾ?
ಬೆಂಗಳೂರು, ಜೂನ್ 08: ಬೆಂಗಳೂರಿನ ಎರಡು ಪ್ರಮುಖ ಸುರಂಗ ಮಾರ್ಗಗಳಿಗೆ ಕರ್ನಾಟಕ ರಾಜ್ಯ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ. ಕೋಟ್ಯಾಂತರ ರೂಪಾಯಿ ಅಂದಾಜು ವೆಚ್ಚದಲ್ಲಿ ಈ ಕಾರಿಡಾರ್‌ಗಳು ಸಿದ್ಧಗೊಳ್ಳಲಿವೆ. ಟೋಲ್ ಆಧಾರಿತ ರಸ್ತೆ ಬಳಕೆಗೆ ದಾರಿ ಮಾಡಿಕೊಡಲಿವೆ. BOOT ಮಾದರಿಯಲ್ಲಿ ಟನಲ್ ಕಾರಿಡಾರ್ ಮಾಡಲು ಶೀಘ್ರವೇ ಟೆಂಡರ್ ಕರೆಯಲಾಗುವುದು ಎಂದು ಕಾನೂನು ಸಚಿವ ಎಚ್‌ಕೆ ಪಾಟೀಲ್ ತಿಳಿಸಿದರು.
ಹೆಬ್ಬಾಳದ ಎಸ್ಟೀಮ್ ಮಾಲ್‌ನಿಂದ ಸಿಲ್ಕ್‌ಬೋರ್ಡ್ (ಎಚ್‌ಎಸ್‌ಆರ್ ಬಡಾವಣೆ) ವರೆಗೆ ಒಂದು ಹಾಗೂ ಕೆ.ಆರ್‌ಪುರಂ ನಿಂದ ಮೈಸೂರು ರಸ್ತೆಯ ನಾಯಂಡಹಳ್ಳಿವರೆಗೆ ಎರಡು ಸುರಂಗ ರಸ್ತೆ ಯೋಜನೆಗಳನ್ನು ರಾಜ್ಯ ಸರ್ಕಾರದ ಮುಂದಿದ್ದವು. ಬ್ರ್ಯಾಂಡ್ ಬೆಂಗಳೂರು ಭಾಗವಾಗಿ ಈ ಯೋಜನೆಗಳನ್ನು ಸರ್ಕಾರ ಕೈಗೆತ್ತಿಕೊಂಡಿತ್ತು. ಇದೀಗ ಸಚಿವ ಸಂಪುಟ ಸಭೆಯಲ್ಲಿ ಸುರಂಗ ಯೋಜನೆಗಳಿಗೆ ಅನುಮೋದನೆ ನೀಡಿದೆ.

ಈ ಸುರಂಗ ಯೋಜನೆಯಲ್ಲಿ ಮೂರು ಮಾದರಿಗಳನ್ನು ಸರ್ಕಾರ ಪರಿಗಣಿಸಿದೆ. ಹೈಬ್ರಿಡ್ ವರ್ಷಾಶನ ಮಾದರಿ (HAM), ಅಥವಾ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಅಥವಾ ಬಿಲ್ಡ್-ಓನ್-ಆಪರೇಟ್-ಟ್ರಾನ್ಸ್‌ಫರ್ (BOOT) ಮಾದರಿ ಪರಿಗಣಿಸಿದ್ದು, ಇದರಲ್ಲಿ BOOT ಆಯ್ಕೆ ಮಾಡಿಕೊಂಡಿದ್ದು, ಆ ನಿಟ್ಟಿನಲ್ಲಿ ಶೀಘ್ರವೇ ಟೆಂಡರ್ ಆಗಲಿದೆ ಎಂದು ಸಚಿವರು ವಿವರಿಸಿದರು.
ಸರ್ಕಾರ ಈ BOOT ಖಾಸಗಿ ಸಹಭಾಗಿತ್ವದಲ್ಲಿ ಸುರಂಗ ಮಾರ್ಗವನ್ನು ನಿರ್ಮಿಸಲಾಗುತ್ತದೆ. 30 ವರ್ಷಗಳ ಅವಧಿಗೆ ಒಪ್ಪಂದ ಮಾಡಿಕೊಳ್ಳಲಾಗುತ್ತದೆ. ಇದರಿಂದ ಕಂಪನಿಗಳ ಟೋಲ್ ಸಂಗ್ರಹದ ಮೂಲಕ ಹೂಡಿಕೆ ಹಿಂಪಡೆಯುತ್ತಾರೆ. ಅದಕ್ಕು ಮೊದಲು ಟೋಲ್ ಎಷ್ಟಿರಬೇಕು? ಯಾವ ವಾಹನಗಳಿಗೆ ಎಷ್ಟು ಟೋಲ್ ಶುಲ್ಕ ಎಂದೆಲ್ಲ ನಿರ್ಧರಿಸಲಾಗುತ್ತದೆ ಎಂದರು.
ಶೀಘ್ರವೇ ಟೆಂಡರ್ ಆಹ್ವಾನ
ಸಾಕಷ್ಟು ವಿರೋಧ, ಆಕ್ಷೇಪಣೆ, ದೂರುಗಳು ಕೇಳಿ ಬಂದರೂ ಸಹಿತ ಡಿಸಿಎಂ ಡಿಕೆ ಶಿವಕುಮಾರ್ ಅವರು ಬರೋಬ್ಬರಿ 17,780 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಹೆಬ್ಬಾಳ-ಸಿಲ್ಕ್ ಬೋರ್ಡ್ ರಸ್ತೆ ಮೂಲಸೌಕರ್ಯ ಮಾಡುವುದಾಗಿ ಈ ಹಿಂದೆ ತಿಳಿಸಿದ್ದರು. ಸದ್ಯ ಸಂಪುಟದಲ್ಲಿ ಅನುಮೋದನೇ ನೀಡಿ ಅಂತಿಮ ನಿರ್ಧಾರ ಕೈಗೊಂಡಿದ್ದು, ಮುಂದಿನ ಎರಡು ವಾರಗಳಲ್ಲಿ ಟೆಂಡರ್ ಕರೆಯುವ ಸಾಧ್ಯತೆ ಇದೆ ಎಂದು ಸಚಿವರು ಮಾಹಿತಿ ನಿಡಿದರು.
ಹೆಬ್ಬಾಳ ಮತ್ತು ಸಿಲ್ಕ್ ಬೋರ್ಡ್ ಜಂಕ್ಷನ್ ಮಧ್ಯೆ ಯೋಜನೆಗೆ ಡಿಪಿಎಆರ್ ಸಿದ್ಧವಾಗಿದೆ. 16.6 ಕಿ.ಮೀ. ಉದ್ದ ಸುರಂಗ ರಸ್ತೆ ನಿರ್ಮಿಸಲಾಗುತ್ತದೆ. ಈ ರಸ್ತೆಮಾರ್ಗದಲ್ಲಿ ಸಾಗಲು ಒಂದು ನಾಲ್ಕು ಚಕ್ರದ ವಾಹನ ಸುಮಾರು 330 ರೂ. ಟೋಲ್ ಸುಂಕ ಭರಿಸಬೇಕಾಗಬಹುದು ಎಂದು ಅಂದಾಜಿಸಲಾಗಿದೆ.
ಸಗಟು ಬೆಲೆ ಸೂಚ್ಯಂಕದಲ್ಲಿ ಶೇಕಡಾ 5 ರಷ್ಟು ವಾರ್ಷಿಕ ಹೆಚ್ಚಳದ ಆಧಾರದಲ್ಲಿ ಶೇ. 40 ರಷ್ಟು ನಿರ್ಬಂಧದಡಿ ಲೆಕ್ಕಾಚಾರ ಹಾಕಲಾಗುತ್ತದೆ. ಸದ್ಯ ಕಾರುಗಳಿಗೆ ಈ ಸುಂಕ ಅಂದಾಜಿಸಿದ್ದು, ಮುಂದಿನ ದಿನಗಳಲ್ಲಿ ಅಧಿಕೃತ ಅಂಕಿಸಂಖ್ಯೆಗಳನ್ನು ಸರ್ಕಾರವೇ ನೀಡಲಿದೆ.












Click it and Unblock the Notifications