ಆಂಜನೇಯ ಮನೆ ಮುಂದಿನ ಮ್ಯಾನ್ ಹೋಲ್‌ಗೆ ಇಬ್ಬರು ಬಲಿ

ಬೆಂಗಳೂರು, ಆಗಸ್ಟ್, 19: ಸಮಾಜ ಕಲ್ಯಾಣ ಖಾತೆ ಸಚಿವ ಎಚ್ . ಆಂಜನೇಯ ಅವರ ಮನೆ ಮುಂದೆಯೇ ಘೋರ ದುರಂತವೊಂದು ಸಂಭವಿಸಿದೆ.

ಸಚಿವರ ಮನೆ ಸಮೀಪವೇ ಇರುವ ಮ್ಯಾನ್ ಹೋಲ್ ಗೆ ಇಳಿದಿದ್ದ ಪ್ರಸನ್ನ ಕುಮಾರ(29) ಮತ್ತು ಯತಿರಾಜ್ (23) ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ. ಕಂಟ್ರಾಕ್ಟರ್ ಒಬ್ಬರ ಮಾರ್ಗದರ್ಶನದಲ್ಲಿ ಬೆಂಗಳೂರಿನ ಜಯಮಹಲ್ ರಸ್ತೆಯ ಆದಾಯ ತೆರಿಗೆ ಇಲಾಖೆಯ ಕೇಂದ್ರ ಕಚೇರಿ ಸಮೀಪ ಮ್ಯಾನ್ ಹೋಲ್ ಗೆ ಇಳಿದಿದ್ದವರು ಹೆಣವಾಗಿದ್ದಾರೆ.[ಅಸಂಘಟಿತ ಕಾರ್ಮಿಕರಿಗೂ ವೈದ್ಯಕೀಯ ವಿಮೆ]

Bengaluru: Two Labourers Die After Falling in Manhole

ಯತಿರಾಜ್ ಮೊದಲು ಮ್ಯಾನ್ ಹೋಲ್ ಒಳಕ್ಕೆ ಇಳಿದಿದ್ದಾರೆ. ಆದರೆ ಉಸಿರು ಕಟ್ಟಿದಂಥಾದ ಅವರು ಸಹಾಯಕ್ಕೆ ಮೇಲಿದ್ದ ಪ್ರಸನ್ನ ಕುಮಾರ್ ಅವರನ್ನು ಕರೆದಿದ್ದಾರೆ. ಕೆಳಕ್ಕೆ ಇಳಿದ ಪ್ರಸನ್ನ ಕುಮಾರ್ ಸಹ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ.

1993 ರ ನಂತರ ಇದು ಮ್ಯಾನ್ ಹೋಲ್ ಗೆ ಒಂಭತ್ತು ಜನ ಬಲಿಯಾಗಿದ್ದಾರೆ. ಮ್ಯಾನ್ ಹೋಲ್ ಗೆ ಇಳಿಯದಂತೆ ಕಾನೂನು ಮಾಡಲಾಗಿದ್ದರೂ ಸಮರ್ಪಕ ಅನುಷ್ಠಾನ ಸಾಧ್ಯವಾಗಿಲ್ಲ.[2014 ರಲ್ಲೂ ಇಬ್ಬರು ಪ್ರಾಣ ಕಳೆದುಕೊಂಡಿದ್ದರು]

ಸಚಿವರ ಸಾಂತ್ವನ
ಆಸ್ಪತ್ರೆಗೆ ಭೇಟಿ ನೀಡಿದ ಸಚಿವರಾದ ಎಚ್. ಆಂಜನೇಯ ಮತ್ತು ಯು.ಟಿ. ಖಾದರ್ ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿದರು. ಘಟನೆ ಕುರಿತು ಸಮಗ್ರ ಮಾಹಿತಿ ಪಡೆದುಕೊಂಡು ಮುಂದೆ ಇಂಥ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ವಹಿಸಲಾಗುವುದು ಎಂದು ತಿಳಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+