ಬೆಂಗಳೂರು-ತುಮಕೂರು ಮೇಲ್ಸೇತುವೆ ಭಾರಿ ವಾಹನಗಳಿಗೆ ಮುಕ್ತ ಯಾವಾಗ?, ಇಲ್ಲಿಗೆ ಮಾಹಿತಿ
ಬೆಂಗಳೂರು, ಜುಲೈ 23: ಬೆಂಗಳೂರಿನಿಂದ ಉತ್ತರ ಕರ್ನಾಟಕ ಭಾಗಕ್ಕೆ ಸಂಪರ್ಕ ಬೆಂಗಳೂರು-ತುಮಕೂರು ಮೇಲ್ಸೇತುವೆಯಲ್ಲಿ ಭಾರೀ ವಾಹನಗಳಿಗೆ ಸಂಚಾರ ನಿರ್ಬಂಧ ಹೇರಿ ಒಂದೂವರೆ ವರ್ಷವೇ ಕಳೆದಿದೆ. ಹೀಗಿದ್ದರೂ ಸಹ ಇನ್ನೂ ದುರಸ್ಥಿ ಕಾರ್ಯ ನಡೆಯುತ್ತಿರುವುದರಿಂದ ಸದ್ಯಕ್ಕೆ ದೊಡ್ಡ ವಾಹನಗಳಿಗೆ ಸಂಚಾರಕ್ಕೆ ಮುಕ್ತವಾಗುವುದು ಅನು4ಮಾನ ಎನ್ನಲಾಗಿದೆ.
2021ರ ಡಿಸೆಂಬರ್‌ನಲ್ಲಿ ಫ್ಲೈಓವರ್ ನ ಎರಡು ಪಿಲ್ಲರ್ ಗಳ ಮಧ್ಯೆ ದೋಷ ಕಂಡು ಬಂದ ಹಿನ್ನೆಲೆಯಲ್ಲಿ ಎಲ್ಲ ರೀತಿಯ ವಾಹನಗಳ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿತ್ತು. ಅದಾದ ಬಳಿಕ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು, ಮುಂಬೈ ನಿಂದ ವಿಶೇಷ ತಜ್ಞರು ಪರಿಶೀಲಿಸಿ ದುರಸ್ಥಿಗೆ ಪ್ರಯತ್ನಿಸಿದರು. ಆದರೆ ನಿರೀಕ್ಷೆಯ ಫಲಿತಾಂಶ ಸಿಗಲಿಲ್ಲ, ಹೀಗಾಗಿ ಕೆಲವು ದಿನಗಳ ಬಳಿಕ ಲಘು ವಾಹನಗಳಿಗೆ ಸಂಚಾರಕ್ಕೆ ಅವಕಾಶ ಸಿಕ್ಕಿತು, ಭಾರಿ ವಾಹನಗಳಿಗೆ ಫ್ಲೈಓವರ್ ಮೇಲೆ ಓಡಾಟ ನಿರ್ಬಂಧ ಮುಂದುವರಿದಿದೆ.

ಸದ್ಯ ಬೆಂಗಳೂರು- ತುಮಕೂರು ಮೇಲ್ಸೇತುವೆಯಲ್ಲಿ ಕೇಬಲ್ ಅಳವಡಿಕೆ ಕಾರ್ಯ ನಡೆಯುತ್ತಿದೆ. ಇದು ಮುಗಿಯಲು ಇನ್ನೂ ಐದಾರು ತಿಂಗಳು ಬೇಕಾಗಬಹುದು. ಈ ಹಿನ್ನೆಲೆಯಲ್ಲಿ ಭಾರೀ ವಾಹನ ನಿರ್ಬಂಧ ಮುಂದಿನ ವರ್ಷದವರೆಗೂ ಮುಂದುವರಿಯಲಿದೆ.
ಕೆಲಸ ಪೂರ್ಣವಾಗಲು ಐದಾರು ತಿಂಗಳು ಬೇಕು
ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ ನ (IISc) ತಂತ್ರಜ್ಞರ ತಂಡದ ಶಿಫಾರಸ್ಸಿನ ಭಾರತೀಯ ರಾಷ್ಟ್ರೀಯ ಹೆದ್ದಾರಿ ಫ್ಲೈಓವರ್ ನ ವ್ಯಾಪ್ತಿಯ ಹಳೆಯ ಕೇಬಲ್‌ಗಳನ್ನು ಹೊಸ ಪ್ರಿಸ್ಟ್ರೇಸ್ಡ್ ಕೇಬಲ್‌ಗಳಿಗೆ ಬದಲಾಯಿಸಲು ಆರಂಭಿಸಲಾಗಿದೆ. ಈ ಕೆಲಸ ಮುಗಿಯಲು ಇನ್ನೂ 5ರಿಂದ 6 ತಿಂಗಳು ಬೇಕಾಗಬಹುದು. 4 ಕಿಮೀ ಉದ್ದದ ಮೇಲ್ಸೇತುವೆಯ ಉದ್ದಕ್ಕೂ ಹಳೆಯ ಕೇಬಲ್‌ಗಳು ಮತ್ತು ಅದಕ್ಕೆ ಸಂಬಂಧಿಸಿದ ಕಾಮಗಾರಿಗಳನ್ನು ನಡೆಸಲಾಗುತ್ತಿದ್ದು, ಒಟ್ಟು ಸುಮಾರು 30 ಕೋಟಿ ರೂ. ವೆಚ್ಚವಾಗಲಿದೆ ಎಂದು ಅಂದಾಜು ಮಾಡಲಾಗಿದೆ.
2022 ಆರಂಭದಿಂದಲೂ ಕೇಬಲ್ ಅಳವಡಿಕೆ ಸೇರಿದಂತೆ ಅಗತ್ಯ ಕಾಮಗಾರಿ ಕೈಗೊಳ್ಳಲಾಗಿದೆ. ಆದರೆ ಕೇಬಲ್ ಅಳವಡಿಕೆ ಕೆಲಸ ಸುಸೂತ್ರವಾಗಿ ನಡೆದಿಲ್ಲ. ಬೆಂಗಳೂರು ತುಮಕೂರು ಮೇಲ್ಸೇತುವೆ 102 ಮತ್ತು 103ನೇ ಕಂಬಗಳ ಮಧ್ಯೆ ತಾಂತ್ರಿಕ ದೋಷ ಉಂಟಾಗಿದೆ. ಅದನ್ನು ಸರಿಪಡಿಸುವ ಕಾರ್ಯ ಪ್ರಗತಿಯಲ್ಲಿದೆ.

ಕೆಲವು ಕೇಬಲ್ ಶಿಥಿಲಾವಸ್ಥೆಯಲ್ಲಿವೆ?
ಮೇಲ್ಸೇತುವೆಯ ಒಂದು ಕಂಬದಿಂದ ಇನ್ನೊಂದು ಕಂಬದ ನಡುವೆ ಜೋಡಿಸುವ ಸೆಗ್ಮೆಂಟ್‌ನಲ್ಲಿ ತೂತು ಮಾಡಿ ಕೇಬಲ್ ತೂರಿಸಿ ಎಳೆದು ಬೋಲ್ಟ್ ಹಾಕಲಾಗುತ್ತದೆ. ತುಮಕೂರು ರಸ್ತೆ ಮೇಲ್ಸೇತುವೆಯಲ್ಲಿ ಅಳವಡಿಲಾದ ಕೇಬಲ್‌ಗಳಲ್ಲಿ ಕೆಲ ಕೇಬಲ್ ಶಿಥಿಲಾವಸ್ಥೆಯಲ್ಲಿವೆ ಎನ್ನಲಾಗಿದೆ.
ಬೆಂಗಳೂರು ಮಾರ್ಗವಾಗಿ ಚಿತ್ರದುರ್ಗ, ದಾವಣಗೆರೆ, ಹುಬ್ಬಳ್ಳಿ ಮಾರ್ಗವಾಗಿ ಬೆಳಗಾವಿ, ಪುಣೆ, ಮುಂಬೈ ತಲುಪಲು ಈ ರಾಷ್ಟ್ರೀಯ ಹೆದ್ದಾರಿ 4 ಅಗತ್ಯ ಹೆಚ್ಚಿದೆ. ಸದ್ಯ ಫ್ಲೈಓವರ್ ನಲ್ಲಿ ಕಾಮಗಾರಿ ಕೆಲಸ ನಡೆಯುತ್ತಿದ್ದು, ಭಾರಿ ವಾಹನಗಳು ಕೆಳದಿನ ಸರ್ವೀಸ್ ರಸ್ತೆಲ್ಲಿಯೇ ಓಡಾಡುತ್ತಿವೆ. ಇದರಿಂದ ಬೆಳಗ್ಗೆ ಮತ್ತು ಸಂಜೆ ಸಂಚಾರ ದಟ್ಟಣೆ ಹೆಚ್ಚಿರುತ್ತದೆ.












Click it and Unblock the Notifications