ಬಾಲಕಿ ಪ್ರಾಣ ತೆಗೆದ ಲಾಲ್ ಬಾಗ್ ನ ಜೇನ್ನೊಣ
ಬೆಂಗಳೂರು, ಆಗಸ್ಟ್, 19: ಲಾಲ್ ಬಾಗ್ ನ ಪುಷ್ಪ ಪ್ರದರ್ಶನದ ಸೌಂದರ್ಯ ಸವಿಯಲು ಹೋಗಿದ್ದ್ ಬಾಲಕಿ ಜೇನು ದಾಳಿಗೆ ಸಿಕ್ಕಿ ಮೃತಪಟ್ಟಿದ್ದಾಳೆ. ಪದ್ಮನಾಭನಗರ ಗುರುಪ್ರಸಾದ್ ಹಾಗೂ ಸುಗುಣ ದಂಪತಿ ಪುತ್ರಿ ವೈಷ್ಣವಿ(7) ಮೃತ ದುರ್ದೈವಿ.
ಆ.15ರಂದು ಪಾಲಕರೊಂದಿಗೆ ಲಾಲ್ ಬಾಗ್ ಗೆ ತೆರಳಿದ್ದಾಗ ಬಾಲಕಿ೮ ಮೇಲೆ ಜೇನು ಹುಳುಗಳು ದಾಳಿ ಮಾಡಿದ್ದವು. ಅಸ್ವಸ್ಥಗೊಂಡಿದ್ದ ಬಾಲಕಿಯನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. [ಬೆಂಗಳೂರು ಹೂವಿನ ಅರಮನೆ ನೋಡದಿದ್ದರೆ ನಿಮಗೇ ನಷ್ಟ]
ಆಗಸ್ಟ್ 15 ರಂದು ಮಧ್ಯಾಹ್ನ ತಂದೆ ಜತೆ ಕಡಿಮೆ ಜನ ದಟ್ಟಣೆ ಇರುವ ಕೆಂಪೇಗೌಡ ಟವರ್ ಬಳಿ ಬಾಲಕಿ ಆಟವಾಡುತ್ತಿದ್ದಳು. ಆಗ ಜೇನು ಹುಳುಗಳು ಬಾಲಕಿ ಮೇಲೆ ದಾಳಿ ಮಾಡಿವೆ. ಮಗಳನ್ನು ರಕ್ಷಿಸಲು ಮುಂದಾದ ಗುರುಪ್ರಸಾದ್ ಮೇಲೆಯೂ ಜೇನು ಹುಳುಗಳು ದಾಳಿ ಮಾಡಿವೆ.[ಬೆಂಗಳೂರು ಅರಮನೆ ಹೇಗಿತ್ತು?]
ಹತ್ತಿರದಲ್ಲಿದ್ದ ಜನರು ಆಗಮಿಸಿ ರಕ್ಷಣೆ ಮಾಡಿ ಜೇನು ಹುಳುಗಳನ್ನು ಓಡಿಸಿದ್ದರು. ಆದರೆ ಬಾಲಕಿ ಸ್ಥಿತಿ ಚಿಂತಾಜನಕವಾಗಿತ್ತು. ಬಾಲಕಿ ಬುಧವಾರ ಚಿಕಿತ್ಸೆ ಫಲಕಾರಿಯಾಗದೇ ಬುಧವಾರ ಕೊನೆ ಉಸಿರೆಳೆದಿದ್ದಾಳೆ. ಸಿದ್ದಾಪುರ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.













Click it and Unblock the Notifications