Bengaluru Road Projects: ₹41,780 ವೆಚ್ಚದ 2 ಟನಲ್ ರಸ್ತೆ, ಎಲಿವೆಟೆಡ್ ಕಾರಿಡಾರ್ ಯೋಜನೆಗಳ ಅಪ್ಡೇಟ್
Bengaluru Traffic Relief Projects: ರಾಜಧಾನಿ ಬೆಂಗಳೂರು ಕುಖ್ಯಾತ ಸಂಚಾರ ದಟ್ಟಣೆ ಕಡಿವಾಣ ಹಾಕಲು ಮುಂದಾಗಿರುವ ಕರ್ನಾಟಕ ಸರ್ಕಾರ ಮಹತ್ವದ ಯೋಜನೆಗಳನ್ನು ಈಗಾಗಲೇ ಘೋಷಿಸಿದೆ. ಸರ್ಕಾರದ ಕ್ರಮಗಳು ಟ್ರಾಫಿಕ್ ನಿಯಂತ್ರಿಸುವ ನಿಟ್ಟಿನಲ್ಲಿ ಹಲವು ಮೂಲಸೌಕರ್ಯಗಳನ್ನು ಅಪ್‌ಗ್ರೇಡ್ ಮಾಡಲು ಮುಂದಾಗಿದೆ. ಹಲವು ಸವಾಲುಗಳನ್ನು ಮಟ್ಟಿ ಅಭಿವೃದ್ಧಿಯಾದಲ್ಲಿ ಭವಿಷ್ಯದಲ್ಲಿ ಟ್ರಾಫಿಕ್‌ಗೆ ತಕ್ಕಮಟ್ಟಿನ ಗುಡ್ ಬೈ ಹೇಳಬಹುದು.
ಬೆಂಗಳೂರಿನಲ್ಲಿ ಒಟ್ಟು 74 ಕಿಮೀ ಯೋಜನೆಯು ಸಾಕಾರಗೊಳಿಸಲು ಹೆಜ್ಜೆ ಇಡಲಾಗಿದೆ. ಅದರಲ್ಲಿ ಎರಡು ಪ್ರಮುಖ ರಸ್ತೆ ಸುರಂಗಗಳು ಹಾಗೂ ಹೆದ್ದಾರಿ ಎಲಿವೇಟೆಡ್ ಕಾರಿಡಾರ್‌ಗಳ ಯೋಜನೆ ಸಹ ಇದೆ. ಅಂದಾಜು 41,780 ಕೋಟಿ ರೂಪಾಯಿ ವೆಚ್ಚದ ಈ ಯೋಜನೆಗಳ ಮೂಲಕ ಸರ್ಕಾರ ಬೆಂಗಳೂರಿನ ಸಂಚಾರ ದಟ್ಟಣೆ ತಗ್ಗಿಸುವ ಗುರಿ ಹೊಂದಿದೆ. ಯೋಜನೆಗಳು ಯಾವುವು? ಎಲ್ಲಿಂದ ಎಲ್ಲಿಗೆ?

ಸುರಂಗಗಳು ಮತ್ತು ಎಲಿವೇಟೆಡ್ ಕಾರಿಡಾರ್‌ಗಳು ಬೆಂಗಳೂರಿನಲ್ಲಿ ಯಾವುದೇ ಅಡೆತಡೆ ಇಲ್ಲದೆ ಹೆಚ್ಚಿನ ಸುರಕ್ಷಿತ ಹಾಗೂ ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಡಲಿವೆ. ಹಿಂದಿನ ರಾಷ್ಟ್ರೀಯ ಹೆದ್ದಾರಿಗಳ ಮಾರ್ಗಗಳಲ್ಲಿ ನಿರ್ಣಾಯಕ ಚಾಕ್ ಪಾಯಿಂಟ್‌ಗಳನ್ನು ಗುರುತಿಸಲಾಗಿದೆ. ರಸ್ತೆ ಮೂಲಸೌಕರ್ಯ ದಕ್ಷತೆ ಸುಧಾರಣೆಗೆ ಇದೊಂದು ಉತ್ತಮ ಕ್ರಮ ಅಂತಲೂ ಹೇಳಲಾಗುತ್ತಿದೆ.
ಸುರಂಗ-1: ಹೊಸೂರು ರಸ್ತೆಯಿಂದ ಬಳ್ಳಾರಿ ರಸ್ತೆ (NH-7)
ಯೋಜನೆ ಪ್ರಸ್ತಾವನೆ ಹಂತದಲ್ಲೇ ಭಾರೀ ಪ್ರಚಾರ ಪಡೆಯಿತು. ಬೆಂಗಳೂರಿನ ಉತ್ತರ-ದಕ್ಷಿಣ ಭಾಗದ ಅಂದರೆ ಸಂಪಕಿಸುವ ಸುರಂಗ ರಸ್ತೆ ಇದಾಗಿದೆ. ಹೆಬ್ಬಾಳ ಮತ್ತು ಸಿಲ್ಕ್ ಬೋರ್ಡ್ ಜಂಕ್ಷನ್ ಮಧ್ಯ ಒಟ್ಟು 16.75 ಕಿಲೋ ಮೀಟರ್ ಉದ್ದದ ಸುರಂಗ ಮಾರ್ಗ (ಹೊಸೂರು ರಸ್ತೆ ಸಂಪರ್ಕಿಸುವ ಸುರಂಗ) ಇದಾಗಿದೆ. ರಾಷ್ಟ್ರೀಯ ಹೆದ್ದಾರಿ (NH) 7ರ ಜೋಡಣೆಯ ಈ ಭಾಗದ ಟ್ರಾಫಿಕ್ ಇಳಿಕೆಗೆ ಕೊಡುಗೆ ನೀಡಲಿದೆ. ಉತ್ತರ-ದಕ್ಷಿಣ ಸುರಂಗವನ್ನು ಸಂಪೂರ್ಣವಾಗಿ ಭೂಗತ, ಅತಿ ವೇಗದ, ಸಿಗ್ನಲ್-ಮುಕ್ತ ಮಾರ್ಗವಾಗಿ ನಿರ್ಮಿಸುವತ್ತ ಸರ್ಕಾರ ಗಮನ ಹರಿಸಿದೆ.
ಈ ರಸ್ತೆ ಸುರಂಗ ಯೋಜನೆಗೆ ಹಲವು ವಿರೋಧಗಳು ಇವೆ. ಭೂಮಿ ಸ್ವಾಧೀನ ಹಾಗೂ ಹಾಲಿ ಐತಿಹಾಸಿಕ ಉದ್ಯಾನ, ಕೆರೆ ಪ್ರೆದೇಶ ಯೋಜನೆಯಿಂದ ಹಾಳಾಗುತ್ತದೆ ಎಂದು ವಿಪಕ್ಷಗಳ ನಾಯಕರು, ನಾಗರಿಕರು, ಪರಿಸರವಾದಿಗಳು ಆಕ್ಷೇಪಿಸಿದ್ದಾರೆ. ಇಂತಹ ಕೆಲವು ಸವಾಲುಗಳ ಮಧ್ಯ ಸರ್ಕಾರ ಯೋಜನೆ ಸಾಕಾರಕ್ಕೆ ಮುಂದಾಗಿದೆ.
ಸುರಂಗ 2: ಕೆಆರ್ ಪುರಂ- ಮೈಸೂರು ರಸ್ತೆ (NH-4/NH-275)
ಸರ್ಕಾರದ ಉದ್ದೇಶಿತ ಈ ಎರಡನೇ ಸುರಂಗ ರಸ್ತೆಯೋಜನೆಯು ನಗರದ ಪೂರ್ವ-ಪಶ್ಚಿಮ ಪ್ರದೇಶಗಳನ್ನು ಸಂಪರ್ಕಿಸುವ ಗುರಿ ಹೊಂದಿದೆ. ಈ ಮೂಲಕ ಇಲ್ಲಿನ ಸವಾರರು, ಸಾರ್ವಜನಿಕರಿಗೆ ದಟ್ಟಣೆ ಮುಕ್ತ ರಸ್ತೆ ಮೂಲಸೌಕರ್ಯ ಒದಗಿಸಲು ಯೋಜನೆ ಜಾರಿಗೊಳಿಸಲಾಗುತ್ತದೆ. ಇದು ಪ್ರಸ್ತಾವನೆ, ಕಾರ್ಯಸಾಧ್ಯತಾ ವರದಿ ಹಂತದಲ್ಲಿದೆ. ಪೂರ್ವ ಭಾಗವಾದ ಕೆ.ಆರ್.ಪುರಂ ಮತ್ತು ಹೊರ ವರ್ತುಲ ರಸ್ತೆಯಿಂದ ಪಶ್ಚಿಮ ಭಾಗವಾದ ಮೈಸೂರು ರಸ್ತೆ, ನಾಯಂಡಹಳ್ಳಿ ಪ್ರದೇಶದವರೆಗಿನ ಪ್ರದೇಶಗಳನ್ನು ಸಂಪರ್ಕಿಸುವ ಯೋಜನೆ ಇದಾಗಿದೆ.
ಪ್ರಮುಖ ರಸ್ತೆ, ಸುರಂಗ ರಸ್ತೆಗಳಲ್ಲಿ ಈ ಯೋಜನೆ ಒಂದಾಗಿದೆ. ಏಕೆಂದರೆ ಬೆಂಗಳೂರಿನಾದ್ಯಂತ ಸುಗಮ ಸಾರಿಗೆಯನ್ನು ಒದಗಿಸುತ್ತದೆ ಎಂದು ಸರ್ಕಾರ ವಿಶ್ವಾಸ ವ್ಯಕ್ತಪಡಿಸಿದೆ. ಎರಡನೇ ಸುರಂಗ ರಸ್ತೆ ಯೋಜನೆಗೆ ಪ್ರಸ್ತಾವಿತ ಹಂತದಲ್ಲೇ ವಿರೋಧ ವ್ಯಕ್ತವಾಗಿದೆ.
ಕನಕಪುರ ರಸ್ತೆಯ ಎತ್ತರಿಸಿದ ಕಾರಿಡಾರ್ ಯೋಜನೆ
ಬೆಂಗಳೂರು ಅಷ್ಟ ದಿಕ್ಕುಗಳಿಂದಲೇ ವೇಗವಾಗಿ ಬೆಳೆಯುತ್ತಿದೆ. ಕನಕಪುರ ರಸ್ತೆಯಲ್ಲೂ ಸಂಚಾರ ದಟ್ಟಣೆ ದಿನದಿಂದ ದಿನಕ್ಕೆ ಏರಿಕೆ ಆಗುತ್ತಿದೆ. ಕಾರಿಡಾರ್ ಯೋಜನೆ ಮೂಲಕ ಕನಕಪುರ ರಸ್ತೆ ಉದ್ದಕ್ಕೂ ಟ್ರಾಫಿಕ್ ಮುಕ್ತ ಸಾರಿಗೆ ಲಭ್ಯವಾಗುವಂತೆ ಮಾಡುವ ಉದ್ದೇಶ ಹೊಂದಲಾಗಿದೆ. ಕನಕಪುರ ರಸ್ತೆಯಲ್ಲಿನ ಹಾಲಿ ಮೆಟ್ರೋ ಕಾರಿಡಾರ್‌ನಿಂದ ಉಂಟಾಗುವ ಭಾರೀ ಸಂಚಾರ ಮತ್ತು ನಿರ್ಬಂಧಗಳನ್ನು ನಿವಾರಿಸುವ ಪ್ಲಾನ್ ಮಾಡಲಾಗುತ್ತಿದೆ. ಅಂದರೆ ಬನಶಂಕರಿಯನ್ನು ನೈಸ್ ರಸ್ತೆ ಜಂಕ್ಷನ್ ಕಡೆಗೆ ದಟ್ಟಣೆ ಕಡಿಮೆ ಮಾಡುವ ಗುರಿ ಹೊಂದಲಾಗಿದೆ.
ಈ ಎಲಿವೇಟೆಡ್ ಕಾರಿಡಾರ್‌ಗೆ ಸದ್ಯ ಸುಮಾರು 1200 ಕೋಟಿ ರೂಪಾಯಿ ಖರ್ಚಾಗಬಹುದೆಂದು ಹೇಳಲಾಗುತ್ತಿದೆ. ಒಟ್ಟು ನಾಲ್ಕು ಪಥದ ರಸ್ತೆಗಳು ಇಲ್ಲಿ ಅಭಿವೃದ್ಧಿ ಆಗಲಿದೆ. ವಿವಿಧ ಭಾಗಗಳಿಂದ ಈ ಮೇಲ್ಸೇತುವೆ ಹತ್ತಲು ಮತ್ತು ಇಳಿಯಲು ಅನುಕೂಲವಾಗುವಂತೆ ನಾಲ್ಕರಿಂದ ಐದು ಕಡೆ ಡೌನ್‌ರಾಂಪ್ ನಿರ್ಮಿಸಲಾಗುತ್ತದೆ ಎಂದು ಪ್ರಸ್ತಾವನೆ ವೇಳೆ ತಿಳಿಸಲಾಗಿದೆ.












Click it and Unblock the Notifications