ವಾಹನ ಸವಾರರೇ ಎಚ್ಚರ... 251 ಕೋಟಿ ರೂಪಾಯಿ ದಂಡ ವಸೂಲಿ ಮಾಡಿದ್ದಾರೆ ಪೊಲೀಸರು! Bengaluru Traffic
ಬೆಂಗಳೂರಿನಲ್ಲಿ ಟ್ರಾಫಿಕ್ ತಲೆಬಿಸಿ ಜಾಸ್ತಿ, ಅದರಲ್ಲೂ ಸರಿಯಾಗಿ ಟ್ರಾಫಿಕ್ ರೂಲ್ಸ್ ಫಾಲೋ ಮಾಡದವರ ಕಾರಣಕ್ಕೆ ಅಪಘಾತ ಹಾಗೂ ಸಮಸ್ಯೆ ಹೆಚ್ಚಾಗುತ್ತಿದೆ ಎಂಬ ಆರೋಪ ಇದೆ. ಹೀಗೆ ಟ್ರಾಫಿಕ್ ಫಾಲೋ ಮಾಡದವರಿಗೆ ಪೊಲೀಸರು ಕೂಡ ಬಿಸಿ ಮುಟ್ಟಿಸುವ ಕೆಲಸ ಮಾಡುತ್ತಿದ್ದಾರೆ. ಅದರಲ್ಲೂ ಬೇಕಾಬಿಟ್ಟಿ ಗಾಡಿ ಓಡಿಸುತ್ತಾ ಮತ್ತೊಬ್ಬರಿಗೆ ತೊಂದರೆ ಕೊಡುವವರಿಗೆ ಸರಿಯಾಗಿಯೇ ಪಾಠ ಕಲಿಸುತ್ತಿದ್ದಾರೆ ಪೊಲೀಸರು. ಹೀಗಿದ್ದಾಗ ವಾಹನ ಸವಾರರೇ ನೀವು ಮತ್ತಷ್ಟು ಎಚ್ಚರವಾಗಿ ಇರಬೇಕಿದೆ ಈಗ.
ಕನ್ನಡಿಗರ ರಾಜಧಾನಿ ಬೆಂಗಳೂರು, ದಿನದಿಂದ ದಿನಕ್ಕೆ ದೊಡ್ಡದಾಗಿ ಬೆಳೆಯುತ್ತಲೇ ಸಾಗುತ್ತಿದೆ. ಟ್ರಾಫಿಕ್... ಟ್ರಾಫಿಕ್... ಟ್ರಾಫಿಕ್... ಅಷ್ಟಕ್ಕೂ ಇದು ಬೆಂಗಳೂರಿನ ಜನರ ಪ್ರತಿ ದಿನದ ಸಂಕಷ್ಟ ಅದರಲ್ಲೂ ಬೆಂಗಳೂರಿನ ಕೆಲವು ಏರಿಯಾಗಳು ಟ್ರಾಫಿಕ್ ಕಾರಣಕ್ಕೆ ಸಿಕ್ಕಾಪಟ್ಟೆ ಫೇಮಸ್ ಕೂಡ ಆಗಿವೆ. ಇಂತಹ ಸಮಯದಲ್ಲಿ ಸರಿಯಾಗಿ ಟ್ರಾಫಿಕ್ ರೂಲ್ಸ್ ಫಾಲೋ ಮಾಡದೇ ಇರುವ ಕಾರಣ ಸಮಸ್ಯೆ ಮತ್ತಷ್ಟು ಜಟಿಲವಾಗುತ್ತಿದೆ. ಹೀಗಾಗಿ ಟ್ರಾಫಿಕ್ ಪೊಲೀಸರು ದಂಡ ಅಸ್ತ್ರ ಪ್ರಯೋಗಿಸಿ, ರೂಲ್ಸ್ ಫಾಲೋ ಮಾಡದವರಿಗೆ ಬಿಸಿ ಮುಟ್ಟಿಸುತ್ತಿದ್ದಾರೆ. ಈ ಮೂಲಕ ಹೊಸ ದಾಖಲೆಯನ್ನು ಬರೆದಿದ್ದಾರೆ.

ವಾಹನ ಸವಾರರು ಎಚ್ಚರವಾಗಿ ಇರಬೇಕು!
ಅಂದಹಾಗೆ ಬೆಂಗಳೂರು ಸಂಚಾರ ಪೊಲೀಸರಿಗೆ 2025 ಪೂರ್ತಿ ದಂಡ ವಸೂಲಿಯಲ್ಲಿ ಬಂಪರ್ ಸಿಕ್ಕಿದೆ. ಒಂದು ವರ್ಷದಲ್ಲಿ ದಾಖಲೆ ಪ್ರಮಾಣದ ದಂಡ ವಸೂಲಿ ಆಗಿದೆ. 2024ರ ಸಮಯದಲ್ಲಿ 62.82 ಕೋಟಿ ರೂಪಾಯಿ ಸಂಗ್ರಹ ಮಾಡಿದ್ದ ಪೊಲೀಸರು 2025ರಲ್ಲಿ ಹೊಸ ಇತಿಹಾಸ ಬರೆದಿದ್ದಾರೆ ಈಗ. ದಂಡ ವಸೂಲಿಯ ಪ್ರಮಾಣದಲ್ಲಿ ಬರೋಬ್ಬರಿ ಶೇಕಡಾ 300ರಷ್ಟು ಏರಿಕೆ ಕಂಡುಬಂದು, ಇದೀಗ ಹೊಸ ಇತಿಹಾಸ ನಿರ್ಮಾಣ ಆಗಿದೆ. ಅಲ್ಲದೆ 1 ದಶಕದಲ್ಲೇ ಇದು ಅತಿಹೆಚ್ಚು ವಾರ್ಷಿಕ ಸಂಗ್ರಹ ಎಂಬ ದಾಖಲೆ ಬರೆದಿದೆ.
ದಂಡ ಸಂಗ್ರಹದಲ್ಲಿ ಭಾರಿ ಏರಿಕೆ
ಬೆಂಗಳೂರಲ್ಲಿ ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿ ದಂಡದ ಅಸ್ತ್ರದಲ್ಲಿ ಸಿಲುಕುವವರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಲೇ ಇದೆ. 2014 ಮತ್ತು 2016ರ ನಡುವೆ, ವಾರ್ಷಿಕ ಆದಾಯವು 65-70 ಕೋಟಿ ರೂಪಾಯಿ ನಡುವೆ ಇತ್ತು. ಆ ಬಳಿಕ ಸ್ವಯಂಚಾಲಿತ ಕ್ಯಾಮರಾಗಳ ಬಳಕೆ ನಂತರ ದಂಡ ಸಂಗ್ರಹ 112.41 ಕೋಟಿ ರೂಪಾಯಿಗೆ ತಲುಪಿತ್ತು. 2017ರ ಈ ದಾಖಲೆ ನಂತರ ಇದೀಗ ಮತ್ತೊಂದು ಬಾರಿ ಹೊಸ ಇತಿಹಾಸ ನಿರ್ಮಾಣವಾಗಿದೆ ದಂಡ ಸಂಗ್ರಹದಲ್ಲಿ. 2025 ದಂಡ ಸಂಗ್ರಹದಲ್ಲಿ ಮೊದಲ ಸ್ಥಾನ ಪಡೆದಿದ್ದು, ದಂಡದ ಮೇಲೆ ಶೇಕಡಾ 50 ರಷ್ಟು ವಿನಾಯಿತಿ ಸೇರಿ ಹಲವು ಕಾರಣಗಳಿಂದ ಸುಮಾರು 251 ಕೋಟಿ ರೂಪಾಯಿ ದಂಡ ವಸೂಲಿ ಮಾಡಿದ್ದಾರೆ ಪೊಲೀಸರು.












Click it and Unblock the Notifications