ಬೆಂಗಳೂರು: ಒಂದೇ ರಾತ್ರಿಯಲ್ಲಿ 1367 ಡ್ರಿಂಕ್ ಆಂಡ್ ಡ್ರೈವ್ ಕೇಸು ದಾಖಲು
ಬೆಂಗಳೂರು, ಡಿಸೆಂಬರ್ 01: ಹೊಸ ವರ್ಷದ ಹಿಂದಿನ ರಾತ್ರಿ ಕುಡಿದು ಮಜಾ ಮಾಡುತ್ತಿದ್ದ ಕೆಲವರಿಗೆ ನಗರ ಸಂಚಾರಿ ಪೊಲೀಸರು ಸರಿಯಾಗಿ ಬಿಸಿ ಮುಟ್ಟಿಸಿದ್ದಾರೆ.
ಹೊಸ ವರ್ಷದ ಹಿಂದಿನ ರಾತ್ರಿ ಕುಡಿದು ವಾಹನ ಚಲಾಯಿಸುತ್ತಿದ್ದ 1367 ಮಂದಿ ವಾಹನ ಚಾಲಕರ ಮೇಲೆ ಪೊಲೀಸರು ಕೇಸು ದಾಖಲಿಸಿದ್ದಾರೆ. ಅವರ ಹೊಸ ವರ್ಷ ನ್ಯಾಯಾಲಯದಲ್ಲಿ ನಡೆಯಲಿದೆ ಪಾಪ.

ಬೆಂಗಳೂರು ಪೊಲೀಸರು ಬಾರಿ ಬಾರಿ ಸಾಮಾಜಿಕ ಜಾಲತಾಣಗಳಲ್ಲಿ, ಫ್ಲೆಕ್ಸ್ ಬೋರ್ಡ್ ಗಳ ಮೂಲಕ ಕುಡಿದು ವಾಹನ ಚಾಲನೆ ಮಾಡಬೇಡಿ ಎಂದು ಮನವಿ ಮಾಡಿದ್ದರೂ ಸಹ ಕುಡಿದು ವಾಹನದೊಂದಿಗೆ ರಸ್ತೆಗೆ ಇಳಿದಿದ್ದ ಜನರು ಈಗ ವ್ಯಥೆ ಪಡುವಂತಾಗಿದೆ.
ಬೆಂಗಳೂರು ಸಂಚಾರಿ ಪೊಲೀಸ್ ಹೆಚ್ಚುವರಿ ಕಮಿಷನರ್ ಆರ್.ಹಿತೇಂದ್ರ ಅವರು ಈ ಕುರಿತು ಟ್ವೀಟ್ ಮಾಡಿದ್ದು, 1367 ಮಂದಿ ವಿರುದ್ಧ ಕೇಸು ದಾಖಲಿಸಿರುವುದಾಗಿ ಹೇಳಿದ್ದಾರೆ.
1367 drivers were found driving under the influence of alcohol last night. They will celebrate first day of the year in courtrooms.
— R Hithendra, IPS. (@AddlCPTraffic) January 1, 2018
ಹಿತೇಂದ್ರ ಅವರ ಟ್ವೀಟ್ ಗೆ ಸಾಕಷ್ಟು ಜನ ಮೆಚ್ಚುಗೆ ಸೂಚಿಸಿ ಪ್ರತಿಕ್ರಿಯಿಸಿದ್ದಾರೆ. ಕೆಲವರು ಅವರ ಚಾಲನಾ ಪರವಾನಗಿಯನ್ನು ರದ್ದುಪಡಿಸುವಂತೆ ಆಗ್ರಹಿಸಿದ್ದಾರೆ, ಕೆಲವರು ಅವರನ್ನು ಜೈಲಿಗೆ ಅಟ್ಟಿ ಎಂದಿದ್ದಾರೆ. ಇನ್ನು ಕೆಲವರು ಇನ್ನೂ ಹೆಚ್ಚಿನ ಕೇಸುಗಳನ್ನು ದಾಖಲಿಸುವ ಅವಕಾಶ ಇತ್ತು ಎಂದಿದ್ದಾರೆ.












Click it and Unblock the Notifications