Bengaluru Traffic: ಟ್ರಾಫಿಕ್ ಜಾಮ್‌ನಲ್ಲಿ ಅಪರಿಚಿತರ ನಡುವೆ ನಡೆದ ಫ್ರೆಂಡ್ಲಿ ಮಾತುಕತೆ ವೈರಲ್; ವಿಡಿಯೋದಲ್ಲಿ ಏನಿದೆ

Bengaluru Traffic: ಬೆಂಗಳೂರು ನಗರದಲ್ಲಿ ಟ್ರಾಫಿಕ್ ಜಾಮ್‌ಗೆ ಸಂಬಂಧಿಸಿದಂತೆ ನಡೆದಿರುವ ಮಾತುಕತೆಯೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಬೆಂಗಳೂರು ನಗರದಲ್ಲಿ ಟ್ರಾಫಿಕ್ ಜಾಮ್ ಸಮಸ್ಯೆಯು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದು ಭಾರೀ ಸುದ್ದಿಯಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಪೀಕ್ ಅವರ್‌ನಲ್ಲಿ ಮಾತ್ರವಲ್ಲದೆ ಇನ್ನುಳಿದ ಸಮಯದಲ್ಲೂ ಟ್ರಾಫಿಕ್ ಜಾಮ್ ಸಮಸ್ಯೆ ಆಗುತ್ತಿದೆ.

ಬೆಂಗಳೂರು ನಗರದಲ್ಲಿ ಟ್ರಾಫಿಕ್ ಜಾಮ್‌ನಲ್ಲಿ ಇಬ್ಬರು ವಾಹನ ಸವಾರರು ಮಾತನಾಡಿಕೊಂಡಿರುವ ಮಾತುಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಆದಾಗ್ಯೂ, ಇತ್ತೀಚೆಗೆ ಬೆಂಗಳೂರಿನ ಟ್ರಾಫಿಕ್ ಜಾಮ್‌ನಲ್ಲಿ ಪಶ್ಚಿಮ ಬಂಗಾಳದ ವ್ಯಕ್ತಿ ಮತ್ತು ಬೈಕರ್ ನಡುವೆ ನಡೆದಿರುವ ಸ್ನೇಹಪರ ಮಾತುಕತೆಯಾಗಿ ಬದಲಾಗಿದೆ. ಟ್ರಾಫಿಕ್ ಜಾಮ್‌ನಲ್ಲಿ ಇಬ್ಬರು ವಾಹನ ಸವಾರರ ನಡುವಿನ ಚರ್ಚೆಯು ಫುಟ್‌ಬಾಲ್, ಇಂಡಿಯನ್ ಸೂಪರ್ ಲೀಗ್ (ISL) ಮತ್ತು ಅವರ ನೆಚ್ಚಿನ ತಂಡಗಳು ಹಾಗೂ ಬೈಕ್ ಬಗ್ಗೆಯೂ ನಡೆದಿದೆ. ಈ ವೀಡಿಯೊವನ್ನು ಇನ್‌ಸ್ಟಾಗ್ರಾಮ್ ಬಳಕೆದಾರ ಮತ್ತು ಸ್ಪೋರ್ಟ್ ಕಂಟೆಂಟ್ ಕ್ರಿಯೇಟರ್ ಅವನೀಶ್ ಹೆಗ್ಡೆ ಅವರು ಹಂಚಿಕೊಂಡಿದ್ದಾರೆ.

Bengaluru Traffic Friendly Conversation Between Strangers Goes Viral What s in Viral Video

ವೀಡಿಯೊದಲ್ಲಿ, ಅವನೀಶ್ ಹೆಗ್ಡೆ ಅವರು ತಮ್ಮ ಕಾರಿನ ಪಕ್ಕದಲ್ಲಿ ನಿಂತಿರುವ ಬೈಕ್ ಸವಾರನೊಂದಿಗೆ ಮಾತನಾಡುತ್ತಿರುವುದು ಇದೆ. ಅವರು ಮೊದಲು ಬೈಕ್ ಹೊಸ ಮಾಡೆಲಾ ಅಂತ ಕೇಳಿದ್ದಾರೆ. ಬೈಕ್ ಸವಾರ ಸುಬಿತ್ ಜೈನ್ ಅವರು, ಇದು ಮೂರು ವರ್ಷ ಹಳೆಯ ಬೈಕ್ ಅಂತ ಹೇಳಿದ್ದಾರೆ. ಮೂರು ವರ್ಷಗಳಾದರೂ ಬೈಕ್‌ಅನ್ನು ಉತ್ತಮ ರೀತಿಯಲ್ಲಿರಿಸಿಕೊಂಡಿರುವುದಕ್ಕೆ ಸುಬಿತ್ ಅವರನ್ನು ಅವನೀಶ್ ಅವರು ಹೊಗಳಿದ್ದಾರೆ.

ಬೈಕ್ ರೈಡರ್‌ತರ ನೀವು ಗಾಡಿ ಓಡಿಸ್ತಾ ಇದ್ದೀರಿ.. ಗ್ಲೌಸ್ ಮತ್ತು ಬೈಕ್ ರೈಡರ್ ತರ ಬೈಕ್ ಓಡಿಸುತ್ತಿದ್ದೀರಿ... ಎನ್ನುವುದಕ್ಕೆ ಜೈನ್ ಅವರು ಗ್ಲೌಸ್ ಹಾಕಿಕೊಂಡು ಬೆಂಗಳೂರಿನಲ್ಲಿ ಬೈಕ್ ಡ್ರೈವ್ ಮಾಡುವುದರಿಂದ ಬೈಕ್ ರೈಡ್ ನಿರ್ವಹಿಸುವುದು ಸುಲಭವಾಗುತ್ತದೆ ಅಂತ ಜೈನ್ ಅವರು ವಿವರಿಸಿದ್ದಾರೆ.

ನೀವು ಬೈಕ್ ರೈಡರಾ ಎನ್ನುವ ಪ್ರಶ್ನೆಗೆ ಜೈನ್ ತಮ್ಮನ್ನು ಬೈಕ್ ರೈಡ್ ಮಾಡುವುದಕ್ಕೆ ಸಂತೋಷಪಡುವ, ಆನಂದಿಸುವ ವ್ಯಕ್ತಿ ಅಂತ ಹೇಳಿದ್ದಾರೆ. ಹೆಗ್ಡೆ ಅವರು ಜೈನ್ ಅವರನ್ನು ಎಲ್ಲಿಂದ ಬಂದಿದ್ದೀರಿ ಅಥವಾ ಯಾವ ಊರು ಎನ್ನುವ ಮಾತುಕತೆಯು ಹೆಚ್ಚು ಆಸಕ್ತಿದಾಯಕವಾಗಿದೆ. ಜೈನ್ ಅವರು ಪಶ್ಚಿಮ ಬಂಗಾಳ ಮೂಲದವರು ಅಂತ ಹೇಳಿದ್ದಾರೆ. ತಾನು ಫುಟ್‌ಬಾಲ್ ಮತ್ತು ಟೇಬಲ್ ಟೆನ್ನಿಸ್ ಆಡುತ್ತೇನೆ ಅಂತ ಹೇಳಿದ್ದಾರೆ.

ಇದು ಇಂಡಿಯನ್ ಸೂಪರ್ ಲೀಗ್ ಮತ್ತು ಬಂಗಾಳದ ಪ್ರಸಿದ್ಧ ಫುಟ್ಬಾಲ್ ಪೈಪೋಟಿಯ ಬಗ್ಗೆ ಚರ್ಚೆಗೆ ಕಾರಣವಾಗಿದೆ. ಹೆಗ್ಡೆ ಜೈನ್ ಅವರನ್ನು ಮೋಹನ್ ಬಗಾನ್ ಅಥವಾ ಪೂರ್ವ ಬಂಗಾಳವನ್ನು ಬೆಂಬಲಿಸುತ್ತೀರಾ ಎಂದು ಕೇಳಿದ್ದಾರೆ. ಅವರ ಕುಟುಂಬವು ಪೂರ್ವ ಬಂಗಾಳವನ್ನು ಬೆಂಬಲಿಸುತ್ತಿದ್ದರೂ, ಜೈನ್ ಮೋಹನ್ ಬಗಾನ್ ಅವರ ಆಟ ಇಷ್ಟ ಅಂತ ಹೇಳಿದ್ದಾರೆ.

ಇಬ್ಬರು ವಾಹನ ಸವಾರರು ಭಾರತ - ಉರುಗ್ವೆ ಫುಟ್ಬಾಲ್ ಪಂದ್ಯದ ಬಗ್ಗೆಯೂ ಮಾತನಾಡಿದ್ದಾರೆ. ವಿದೇಶಗಳಲ್ಲಿ ಪ್ರಮುಖ ಕ್ಲಬ್‌ಗಳಿಗಾಗಿ ಆಡುವ ಭಾರತೀಯ ಫುಟ್ಬಾಲ್ ಆಟಗಾರರ ಬಗ್ಗೆಯೂ ಅವರು ಮಾತನಾಡಿದ್ದಾರೆ. ಮಾತುಕತೆ ಮುಗಿಯುತ್ತಿದ್ದಂತೆ, ಬೆಂಗಳೂರಿನ ಟ್ರಾಫಿಕ್ ನಡುವೆಯೂ ಜನರು ಇಂತಹ ಆಸಕ್ತಿದಾಯಕ ವಿಷಯಗಳನ್ನು ಮಾತನಾಡಬಹುದು ಎಂಬುದು ಎಷ್ಟು ಗಮನಾರ್ಹ ಅಂತಲೂ ಹೆಗ್ಡೆ ಅವರು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+