Bengaluru Traffic Advisory: ವರ್ತೂರಿನಲ್ಲಿ 3 ದಿನ ಜಾತ್ರೆ, ನಗರದ ಈ ರಸ್ತೆಗಳಲ್ಲಿ ಸಂಚಾರ ಬದಲಾವಣೆ
ಬೆಂಗಳೂರು: ಬೆಂಗಳೂರು ವೈಟ್ ಫೀಲ್ಡ್ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ವರ್ತೂರಿನಲ್ಲಿ ಮೂರು ದಿನ ಶ್ರೀ ಚನ್ನರಾಯಸ್ವಾಮಿ ಜಾತ್ರಾ ರಥೋತ್ಸವ ದೀಪೋತ್ಸವ ಮತ್ತು ಪಲ್ಲಕ್ಕಿ ಕರಗ ಮಹೋತ್ಸವ ನಡೆಯಲಿದೆ. ಈ ಸಂಬಂಧ ಠಾಣಾ ವ್ಯಾಪ್ತಿಯಲ್ಲಿನ ಸಂಚಾರ ಮಾರ್ಗಗಳಲ್ಲಿ ಒಂದಷ್ಟು ಬದಲಾವಣೆ ಮಾಡಲಾಗಿದೆ. ವಾಹನ ಸವಾರರು ಈ ಮಾರ್ಪಾಡು ಗಮನಿಸುವಂತೆ ಟ್ರಾಫಿಕ್ ಪೊಲೀಸರು ತಿಳಿಸಿದ್ದಾರೆ.
ಜನವರಿ 25 ಭಾನುವಾರದಿಂದ ಜನವರಿ 27ರವರೆಗೆ ಮೂರು ದಿನ ಈ ಭಾಗದಲ್ಲಿ ಧಾರ್ಮಿಕ ಕಾರ್ಯಕ್ರಮ ನಡೆಯಲಿವೆ. ಇದರ ಹಿನ್ನೆಲೆಯಲ್ಲಿ ಸಾರ್ವಜನಿಕರ ಮತ್ತು ವಾಹನ ಸವಾರರ ಹಿತದೃಷ್ಟಿಯಿಂದ ಜಾತ್ರಾ ಸ್ಥಳದಲ್ಲಿ ವಾಹನಗಳ ಪ್ರವೇಶ ನಿಷೇಧಿಸಿ ಮಾರ್ಪಾಡು ಮಾಡಲಾಗಿದೆ. ಈ ಮಾರ್ಗದಲ್ಲಿ ವಾಹನ ಸಮೇತ ಬಂದು ಕಿರಿಕಿರಿ ಅನುಭವಿಸದೇ ಪಾರ್ಯಾಯ ರಸ್ತೆಗಳಲ್ಲಿ ಸಂಚರಿಸುವಂತೆ ಬೆಂಗಳೂರು ನಗರ ಸಂಚಾರ ಪೂರ್ವ ವಿಭಾಗ ಉಪ ಪೊಲೀಸ್ ಆಯುಕ್ತ ಸಾಹಿಲ್ ಬಾಗ್ಲಾ ತಿಳಿಸಿದ್ದಾರೆ. ಸಂಚಾರದ ಪರ್ಯಾಯ ರಸ್ತೆಗಳ ವಿವರ ಇಲ್ಲಿದೆ.

ವಾಹನಗಳ ಸಂಚಾರಕ್ಕೆ ಪರ್ಯಾಯ ಮಾರ್ಗಗಳು
ಗುಂಜೂರಿನಿಂದ ವೈಟ್ ಫೀಲ್ಡ್ ಕಡೆಗೆ ಸಂಚರಿಸುವ ಲಘು ವಾಹನಗಳು ಗುಂಜೂರಿನ ಶ್ರೀರಾಮದೇವಾಲಯದ ಬಳಿ ಬಲ ತಿರುವು ಪಡೆದು ಹಲಸಹಳ್ಳಿ ರಸ್ತೆಯಿಂದ ಮಧುರನಗರದ ಮೂಲಕ ಸೂರಹುಣಸೆ ಮತ್ತು ವಾಲೇಪುರ ಮೂಲಕ ಹಾಗೂ ವರ್ತೂರು ಕಾಲೇಜು ಮೂಲಕ ವೈಟ್ ಫೀಲ್ಡ್ ಕಡೆಗೆ ಸಂಚರಿಸಬಹುದು.
ವೈಟ್‌ಫೀಲ್ಡ್‌ನಿಂದ ಗುಂಜೂರು ಕಡೆಗೆ ಬರುವ ಲಘು ವಾಹನಗಳು ಇಮ್ಮಡಿಹಳ್ಳಿ, ವಾಲೇಪುರ ಸೂರಹುಣಸೆ ರಸ್ತೆಯಿಂದ ಮಧುರನಗರದ ಮೂಲಕ ಹಲಸಹಳ್ಳಿ ಗುಂಜೂರು ಕಡೆಗೆ ಹಾಗೂ ವರ್ತೂರು ಪೊಲೀಸ್ ಠಾಣೆ ಕಡೆಯಿಂದ ಸಂಚರಿಸಬಹುದಾಗಿದೆ.
ಗುಂಜೂರು ಕಡೆಯಿಂದ ಬರುವ ವಾಹನ ಸವಾರರು ಕುಂದಲಹಳ್ಳಿ ಮತ್ತು ಮಾರತ್ ಹಳ್ಳಿ ಕಡೆಗೆ ಸಂಚರಿಸುವ ಲಘು ವಾಹನಗಳು ಗುಂಜೂರು ಕೆ.ಎಫ್.ಸಿ ರಸ್ತೆ, ಪಣತ್ತೂರು ರೈಲ್ವೆ ಬ್ರಿಜ್ ಮೂಲಕ ಹಾಗೂ ವಿಬ್ ಗಯಾರ್ ಕಡೆಯಿಂದ ಸಂಚರಿಸವಂತೆ ಸಂಚಾರ ಪೊಲೀಸರು ಕೋರಿದ್ದಾರೆ.
ಸರಕು ವಾಹನಗಳ ಸಂಚಾರಕ್ಕೆ ಪರ್ಯಾಯ ರಸ್ತೆಗಳು
1. ಹೊಸಕೋಟೆಯಿಂದ ಬರುವ ಎಲ್ಲಾ ಭಾರೀ ಸರಕು ವಾಹನಗಳು (HGV) ವಾಹನಗಳು ಕಡ್ಡಾಯವಾಗಿ ಹೋಪ್ ಫಾರ್ಮ್ ನಲ್ಲಿ ಎಡಕ್ಕೆ ತೆಗೆದುಕೊಂಡು ಚನ್ನಸಂದ್ರ ಮಾರ್ಗವಾಗಿ ಸರ್ಜಾಪುರ ಕಡೆಗೆ ಸಂಚರಿಸಬಹುದು.
2. ಹೆಚ್.ಎ.ಎಲ್ ಓಲ್ಡ್ ಏರ್‌ಪೋರ್ಟ್ ಮಾರ್ಗವಾಗಿ ಬರುವ ಎಲ್ಲಾ ಭಾರೀ ಸರಕು ವಾಹನಗಳು ಕಡ್ಡಾಯವಾಗಿ ವರ್ತೂರು ಕೋಡಿ, ಹೋಪ್ ಫಾರ್ಮ್, ಚನ್ನಸಂದ್ರ ಮಾರ್ಗವಾಗಿ ಸರ್ಜಾಪುರ ಕಡೆಗೆ ಸಂಚರಿಸಬೇಕಿದೆ.
3. ಸರ್ಜಾಪುರದಿಂದ ಬರುವ ಎಲ್ಲಾ ಗೂಡ್ಸ್ ವಾಹನಗಳು ಚಿಕ್ಕತಿರುಪತಿ, ದೊಮ್ಮಸಂದ್ರ, ಕೊಡತಿ, ಬೆಳ್ಳಂದೂರು ಮಾರ್ಗವಾಗಿ ಸಂಚರಿಸಬಹುದಾಗಿದೆ.
4. ಬೆಳ್ಳಂದೂರು ಕಡೆಯಿಂದ ಬರುವ ಎಲ್ಲ ಗೂಡ್ಸ್ ವಾಹನಗಳು ಕೊಡತಿ, ದೊಮ್ಮಸಂದ್ರ ಮಾರ್ಗವಾಗಿ ಓಡಾಟ ನಡೆಸಬಹುದು.
5. ಗುಂಜೂರು ಬಿ.ಎಂ.ಟಿ.ಸಿ ಡಿಪೋ-41 ಯಿಂದ ಗುಂಜೂರು ವರ್ತೂರು ಕಡೆಗೆ ಹೋಗುವ ಬಸ್ಸುಗಳು ನೆರಿಗೆ ರಸ್ತೆಯನ್ನು ಬಳಸಿ ಹೊಸಹಳ್ಳಿ ಮಾರ್ಗವಾಗಿ ಮದುರನಗರ ಕಡೆಯಿಂದ ವರ್ತೂರಿನ ಮಾರ್ಗವಾಗಿ ಸಂಚರಿಸಬೇಕು. ಸಾರ್ವಜನಿಕರು ಈ ಧಾರ್ಮಿಕ ಕಾರ್ಯಕ್ರಮಕ್ಕೆ ಸಹಕರಿಸಬೇಕು. ಕೊನೆ ಗಳಿಗೆಯಲ್ಲಿ ಸವಾರರು ನಿಷೇಧಿತ ರಸ್ತೆಯಲ್ಲಿ ಬಂದು ತೊಂದರೆ ಅನುಭವಿಸದೇ, ಮುಂಚಿತವಾಗಿ ಪರ್ಯಾಯ ಮಾರ್ಗಗಳನ್ನು ಅನುರಿಸುವಂತೆ ಪ್ರಕಟಣೆಯಲ್ಲಿ ಕೋರಲಾಗಿದೆ.
#ಸಂಚಾರಸಲಹೆ#TrafficAdvisory @DgpKarnataka @KarnatakaCops @CPBlr @Jointcptraffic @BlrCityPolice @blrcitytraffic @acpwfieldtrf @acpeasttraffic @mahadevapuratrf @halairporttrfps @KRPURATRAFFIC @wftrps @bwaditrafficps @ftowntrfps @jbnagartrfps @halasoortrfps @kghallitrfps… pic.twitter.com/kEtSux1KwO
— DCP Traffic East ಉಪ ಪೊಲೀಸ್ ಆಯುಕ್ತರು ಸಂಚಾರ ಪೂರ್ವ (@DCPTrEastBCP) January 24, 2026












Click it and Unblock the Notifications