ಬೆಂಗಳೂರಿನಿಂದ ಕೋಲ್ಕತಾಗೆ ರೈಲು ಟಿಕೆಟ್ ದರ ₹10,000-ಪ್ರಯಾಣಿಕನಿಗೆ ನೆಟ್ಟಿಗರ ಸಲಹೆ ಏನು?
ಬೆಂಗಳೂರು, ಆಗಸ್ಟ್, 12: ಎಲ್ಲಾ ಸಾರಿಗೆಗಿಂತ ರೈಲು ಪ್ರಯಾಣ ದರ ಕಡಿಮೆ ಎಂದು ರೈಲಿನಲ್ಲಿಯೇ ಪ್ರಯಾಣ ಮಾಡುವವರ ಸಂಖ್ಯೆ ಹೆಚ್ಚು. ಆದರೆ ಇದೀಗ ಬೆಂಗಳೂರಿನಿಂದ ಕೊಲ್ಕತ್ತಾಕ್ಕೆ ನಿಗದಿತ ದರಕ್ಕಿಂತ ಹೆಚ್ಚು ದರ ಹಾಕಿರುವ ಟಿಕೆಟ್‌ವೊಂದು ಸಾಮಾಜಿ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ. ಇನ್ನೂ ಈ ಟಿಕೆಟ್ ಪಡೆದ ಪ್ರಯಾಣಿಕನಿಗೆ ನೆಟ್ಟಿಗರು ಉತ್ತಮ ಸಲಹೆಗಳನ್ನೂ ಕೂಡ ನೀಡಿದ್ದಾರೆ.
ಬೆಂಗಳೂರಿನಿಂದ ಕೋಲ್ಕತಾಗೆ ರೈಲು ಟಿಕೆಟ್ ದರ 10,100 ರೂಪಾಯಿ ಇದ್ದು, ಇದನ್ನು ನೋಡಿದ ಪ್ರಯಾಣಿಕ ಧಂಗಾಗಿದ್ದಾನೆ. ಅಲ್ಲದೆ, ಟಿಕೆಟ್ ಅನ್ನು ಸ್ಕ್ರೀನ್ ಶಾಟ್ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾನೆ. ಇದನ್ನು ಕಂಡ ಈ ಪ್ರಯಾಣಿಕನಿಗೆ ನೆಟ್ಟಗರು ಉತ್ತಮ ಸಲಹೆಗಳನ್ನು ಕೊಟ್ಟಿದ್ದಾರೆ.

ರೆಡಿಟ್ ಬಳಕೆದಾರನೊಬ್ಬ ಬೆಂಗಳೂರಿನಿಂದ ಕೋಲ್ಕತಾಗೆ ಪ್ರಯಾಣಿಸಲು ರೈಲು ಟಿಕೆಟ್ ಬುಕ್ ಮಾಡಲು ಮುಂದಾಗಿದ್ದಾನೆ. 2ಎ ಎಸಿ ಟ್ರೈನ್ ಟಿಕೆಟ್ ಬುಕ್ ಮಾಡಲು ಹೋದ ಪ್ರಯಾಣಿಕ ಟಿಕೆಟ್ ದರ ನೋಡಿ ಬೆಚ್ಚಿ ಬಿದ್ದಿದ್ದಾನೆ. ಬೆಂಗಳೂರು ಕೋಲ್ಕತಾ 2ಎ ಎಸಿ ಕೋಚ್‌ಗೆ ಟಿಕೆಟ್ ದರ ಬರೋಬ್ಬರಿ 10,100 ರೂಪಾಯಿ. ಕೇವಲ 2 ಎಸಿ ಕೋಚ್‌ಗೆ ಈ ದರ ಎಂದು ಪ್ರಯಾಣಿಕ ಸಾಮಾಜಿಕ ಜಾಲತಾಣದಲ್ಲಿ ಸ್ಕ್ರೀನ್‌ಶಾಟ್ ಶೇರ್ ಮಾಡಿಕೊಂಡಿದ್ದಾನೆ.
ಬೆಂಗಳೂರಿನಿಂದ ಕೋಲ್ಕತಾಗೆ ವಿಮಾನ ಪ್ರಯಾಣ ದರ ಸರಾಸರಿ 4,000-5,000 ರೂಪಾಯಿ ಇದೆ. ಆದರೆ 2ಎ ಎಸಿ ದರ ಇದಕ್ಕಿಂತ ಹೆಚ್ಚಳ ಆಗಿದೆ. ಪ್ರಯಾಣಿಕ ಸಾಮಾಜಿಕ ಜಾಲತಾಣದಲ್ಲಿ ಈ ವಿಚಾರ ಪೋಸ್ಟ್ ಮಾಡುತ್ತಿದ್ದಂತೆ ಹಲವರು ಕೆಲವು ಸಲಹೆಗಳನ್ನು ನೀಡಿದ್ದಾರೆ.
ರೈಲಿಗಿಂತ ವಿಮಾನದಲ್ಲಿ ಪ್ರಯಾಣಿಸಿ ಈ ಬೆಲೆಯಲ್ಲಿ ಕೊಲ್ಕತ್ತಾದಲ್ಲಿ ಇಳಿದು ಬಂಗಾಳ ಸಿಹಿ ತಿಂದು ಬೆಂಗಳೂರಿಗೆ ಮರಳಬಹುದು ಎಂದು ಸೂಚನೆ ನೀಡಿದ್ದಾರೆ. ಇದೇ ವೇಳೆ ಕೆಲವರು ಇದೇ 2ಎ ಎಸಿ ಕೋಚ್‌ನಲ್ಲಿ ಟಿಕೆಟ್ ತೆಗೆದುಕೊಳ್ಳದೆ, ಪ್ರಯಾಣಿಸಿ ಬಳಿಕ ದಂಡ ಕಟ್ಟಿದರೆ ಸರಿಯಾಗಿದೆ. ಹೀಗೆ ಮಾಡಿದರೂ 5,000 ರೂಪಾಯಿ ಎಂದು ಹೇಳಿದ್ದಾರೆ.
ಮಹತ್ವದ ಮಾಹಿತಿ: ಬೆಂಗಳೂರು ಮೆಟ್ರೋ ಸುದ್ದಿಯಾಗುತ್ತಲೇ ಇರುತ್ತದೆ. ಇದೀಗ ಬೆಲೆ ಏರಿಕೆ ವಿಚಾರದಲ್ಲಿ ಮತ್ತೆ ಮುನ್ನೆಲೆಗೆ ಬಂದಿದೆ. ಈಗಾಗಲೇ ಬೆಲೆ ಏರಿಕೆಯಿಂದ ನಗರದ ಜನರು ಬೇಸತ್ತಿದ್ದು, ಇದರ ನಡುವೆಯೇ ಇಲ್ಲಿನ ಜನರ ಜೀವನಾಡಿ ಸಾರಿಗೆಯಲ್ಲೊಂದಾದ ನಮ್ಮ ಮೆಟ್ರೋದ ಟಿಕೆಟ್ ದರ ಹೆಚ್ಚಳ ಮಾಡುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಹಾಗಾದರೆ ಈ ನಿರ್ಧಾರ ಯಾಕೆ ಎಂದು ಇಲ್ಲಿ ತಿಳಿಯಿರಿ.
ಬೆಂಗಳೂರಿಗರಿಗೆ ಇದೀಗ ಶಾಕ್ ಎದುರಾಗಿದ್ದು, ಶೀಘ್ರವೇ ನಮ್ಮ ಮೆಟ್ರೋ ರೈಲಿನ ಟಿಕೆಟ್ ದರ ಹೆಚ್ಚಳ ಆಗಲಿದೆ ಎಂದು ತಿಳಿದುಬಂದಿದೆ.
ನಮ್ಮ ಮೆಟ್ರೋ ನಿಲ್ದಾಣಗಳಲ್ಲಿ ಇತ್ತೀಚೆಗೆ ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗುತ್ತಲೇ ಇವೆ. ಈ ದೃಷ್ಟಿಯಿಂದ ಮೆಟ್ರೋ ರೈಲ್ವೇ ನಿಲ್ದಾಣದಲ್ಲಿ ಕೆಲವು ಸುರಕ್ಷಿತ ಕ್ರಮಗಳನ್ನು ಕೈಗೊಳ್ಳಲಿದೆ. ರೈಲ್ವೇ ನಿಲ್ದಾಣದಲ್ಲಿ ಪ್ಲಾಟ್ ಫಾರಂ ಸ್ಕ್ರೀನ್ ಅಳವಡಿಸಲು ಚಿಂತನೆ ನಡೆಸಲಾಗಿದ್ದು, ಇದಕ್ಕೆ 6-7 ಕೋಟಿ ರೂಪಾಯಿ ವೆಚ್ಚ ಆಗಲಿದೆ. ಆದ್ದರಿಂದ ಬಿಎಂಆರ್‌ಸಿ ಎಲ್ ಟಿಕೆಟ್ ದರ ಏರಿಕೆ ಮಾಡಲು ಚರ್ಚೆ ನಡೆಸುತ್ತಿದೆ ಎಂದು ತಿಳಿದುಬಂದಿದೆ.
ಎಲ್ಲಾ ಮೆಟ್ರೋ ನಿಲ್ದಾಣಗಳಲ್ಲಿ ಈ ವ್ಯವಸ್ಥೆಯನ್ನು ಮಾಡಬೇಕೆಂದರೆ ಹೆಚ್ಚಿನ ಹಣ ಬೇಕಾಗುತ್ತದೆ. ಆದ್ದರಿಂದ ಟಿಕೆಟ್ ದರ ಹೆಚ್ಚಳ ಮಾಡುವುದು ಅನಿವಾರ್ಯ ಆಗಿದೆ ಎಂದು ಬಿಎಂಆರ್‌ಸಿಎಲ್ ತಿಳಿಸಿದೆ.
ಆತ್ಮಹತ್ಯೆ ಪ್ರಕರಣಗಳು ಹೆಚ್ಚುತ್ತಿದ್ದಂತೆ ಎಚ್ಚೆತ್ತುಕೊಂಡ ಬಿಎಂಆರ್‌ಸಿಎಲ್ ಬೆಂಗಳೂರಿನ ಮೆಜೆಸ್ಟಿಕ್ ಸೇರಿದಂತೆ ನಗರದ ಹಲವು ಮೆಟ್ರೋ ನಿಲ್ದಾಣಗಳಲ್ಲಿ ಮುಂಜಾಗ್ರತಾ ಕ್ರಮವಾಗಿ ಕಂಬಿಗಳನ್ನು ಅಳವಡಿಕೆ ಮಾಡಿತ್ತು. ಆದರೂ ಆತ್ಮಹತ್ಯೆ ಪ್ರಕರಣಗಳು ದಾಖಲಾಗುತ್ತಲೇ ಇವೆ. ಆದ್ದರಿಂದ ಬಿಎಂಆರ್‌ಸಿಎಲ್ ಈ ನಿರ್ಧಾರಕ್ಕೆ ಬಂದಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.












Click it and Unblock the Notifications