ಬೆಂಗಳೂರಿನ ಎಲ್ಲ ಪಾಲಕರಿಗೆ ಈ ಸುದ್ದಿ ಎಚ್ಚರಿಕೆ ಘಂಟೆ

ಬೆಂಗಳೂರು, ಸೆಪ್ಟೆಂಬರ್, 09: ಮಗುವು ಶಾಲೆಗೆ ಪ್ರತಿದಿನ ತೆರಳಬೆಕಿದ್ದ ವಾಹನ ಅಪಘಾತಕ್ಕೀಡಾಗಿದೆ. ಹಾಗಾಗಿ ಶಾಲೆಯವರು ಬೇರೊಂದು ವಾಹನ ಕಳಿಸಿಕೊಟ್ಟಿದ್ದಾರೆ. ಮಗು ರೆಡಿಯಾಗಿದ್ದರೆ ಶಾಲೆಗೆ ಕಳಿಸಿ ಎಂದು ನಿಮ್ಮ ಮನೆಯ ಬಾಗಿಲು ತಟ್ಟುತ್ತಾರೆ. ನೀವು ಹೌದೆಂದು ನಂಬಿ ಮಗುವನ್ನು ಕಳಿಸಿದರೆ ಕತೆ ಮುಗಿದಂತೆ!

ಹೌದು.. ಹೊಸ ಬಗೆಯ ಕಿಡ್ನಾಪ್ ತಂತ್ರವೊಂದನ್ನು ದುಷ್ಕರ್ಮಿಗಳು ಸಂಶೋಧನೆ ಮಾಡಿದ್ದಾರೆ! ಅದನ್ನು ಪ್ರಯೋಗ ಮಾಡಲು ಹೋಗಿ ಸಾಧ್ಯವಾಗದೇ ಹಿಂದಿರುಗಿದ್ದಾರೆ. ಬೆಂಗಳೂರಿನ ಕುಮಾರನ್ ಶಾಲೆ ಹೆಸರಿನಲ್ಲಿ ಅಪಹರಣಕಾರು ಕಾರ್ಯಾಚರಣೆ ಮಾಡಿದ್ದು ಬೆಳಕಿಗೆ ಬಂದಿದೆ.[ಹುಡುಗಿಯರ ಕೊಡಿಸುತ್ತೇವೆ ಎಂದು ನಂಬಿಸಿ ದೋಚಿದರು]

school

ಸೋಮವಾರ ಬೆಳಗ್ಗೆ ನಡೆದ ಘಟನೆ ಫೇಸ್ ಬುಕ್ ಪೇಜ್ ನ ಅಪ್ ಡೇಟ್ ಮೂಲಕ ಹೊರಕ್ಕೆ ಬಂದಿದೆ. ತಾಯಿಯೊಬ್ಬರು ಘಟನೆಯ ಎಲ್ಲ ವಿವರವನ್ನು ಫೇಸ್ ಬುಕ್ ಪೇಜ್ ನಲ್ಲಿ ಬರೆದಿದ್ದಾರೆ.

ಪೇಸ್ ಬುಕ್ ನಲ್ಲಿ ಬರತೆದುಕೊಂಡಿರುವ ತಾಯಿಯ ಸ್ನೇಹಿತೆಯ ಮಗನನ್ನು ಕರೆದುಕೊಂಡು ಹೋಗಲು ಕುಮಾರನ್ ಶಾಲೆ ಹೆಸರಿನಲ್ಲಿ ಶಾಲಾ ವಾಹನವೊಂದು ಬಂದಿದೆ. ಪ್ರತಿದಿನ ಬರುತ್ತಿದ್ದ ವಾಹನ ತೊಂದರೆಗೀಡಾಗಿದ್ದು ಶಾಲಾ ಮಂಡಳಿಯವರು ಬದಲಿ ವಾಹನ ಕಳಿಸಿದ್ದಾರೆ ಎಂದು ಚಾಲಕ ಸೇರಿದಂತೆ ವಾಹನದಲ್ಲಿ ಆಗಮಿಸಿದವರು ಹೇಳಿದ್ದಾರೆ.

ಆದರೆ ಕೊಂಚ ಅನುಮಾನಗೊಂಡ ಹುಡುಗನ ತಂದೆ ಶಾಲೆಗೆ ಕರೆ ಮಾಡಿದ್ದಾರೆ. ಇದನ್ನು ಕೇಳಿದ ಆಡಳಿತ ಮಂಡಳಿ ಒಂದು ಕ್ಷಣ ಹೌಹಾರಿದ್ದು ಎಲ್ಲ ಸರಿಯಾಗಿದೆ ನಾವು ಅಂಥ ಯಾವುದೇ ವಾಹನ ಕಳಿಸಿಲ್ಲ ಎಂದು ಹೇಳಿದ್ದಾರೆ. ತಕ್ಷಣ ಪೊಲೀಸರಿಗೆ ಕರೆ ಮಾಡಿ ವಿಷಯ ತಿಳಿಸಬೇಕು ಎಂದು ಕುಟುಂಬ ಮುಂದಾದಾಗ ಜಾಗೃತಗೊಂಡ ಅಪಹರಣಕಾರರು ಅಲ್ಲಿಂದ ಕಾಲು ಕಿತ್ತಿದ್ದಾರೆ.

ನಂತರ ಶಾಲಾ ಆಡಳಿತ ಮಂಡಳಿ ಎಲ್ಲ ಪಾಲಕರಿಗೆ ತಿಳಿವಳಿಕೆ ನೀಡಿದ್ದು ಎಚ್ಚರ ವಹಿಸಬೇಕಾಗಿ ಕೋರಿಕೊಂಡಿದೆ. ಫೇಸ್ ಬುಕ್ ಸ್ಟೇಟಸ್ ನ್ನು 140 ಜನ ತಾಯಂದಿರು ಷೇರ್ ಮಾಡಿದ್ದು ಎಚ್ಚರಿಕೆ ವಹಿಸುವಂತೆ ತಿಳಿಸಿದ್ದಾರೆ. ನಿಮ್ಮ ಮಕ್ಕಳನ್ನು ಶಾಲಾ ವಾಹನಕ್ಕೆ ಹತ್ತಿಸುವ ಮುನ್ನ ಒಮ್ಮೆ ಪರಿಶೀಲನೆ ಮಾಡಿಕೊಳ್ಳುವುದು ಉತ್ತಮ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+