ನವೆಂಬರ್ ಕೊನೆಯ ವಾರದಲ್ಲಿ 6 ಬೋಗಿಗಳ ಮೂರನೇ ರೈಲು ಸಂಚಾರ

ಬೆಂಗಳೂರು, ನವೆಂಬರ್ 17: ನವೆಂಬರ್ ಅಂತ್ಯದಲ್ಲಿ ಆರು ಬೋಗಿಗಳ ಮೂರನೇ ರೈಲು ಸಂಚರಿಸಲಿದೆ, ಸಂಚಾರ ದಟ್ಟಣೆ ಕಡಿಮೆ ಮಾಡುವ ಉದ್ದೇಶದಿಂದ ನಗರದಲ್ಲಿ ನಮ್ಮ ಮೆಟ್ರೋ ಆರಂಭಿಸಲಾಯಿತು.

ಈಗ ಮೆಟ್ರೋದಲ್ಲಿ ಜನ ಸಂದಣಿ ಕಡಿಮೆ ಮಾಡುವ ನಿಟ್ಟಿನಲ್ಲಿ ಆರು ಬೋಗಿಗಳ ಮೆಟ್ರೋವನ್ನು ಆರಂಭಿಸಲಾಗಿದೆ. ಈಗಾಗೇ ಎರಡು ಬೋಗಿಗಳು ತನ್ನ ಕಾರ್ಯ ಆರಂಭಿಸಿದ್ದು ಈ ತಿಂಗಳ ಅಂತ್ಯದಲ್ಲಿ ಇನ್ನೊಂದು ಆರು ಬೋಗಿಗಳ ಮೆಟ್ರೋ ಸಂಚಾರ ಆರಂಭಿಸಲಿದೆ.

1421 ಕೋಟಿ ರೂ ವೆಚ್ಚದಲ್ಲಿ ಭಾರತ್ ಅರ್ತ್ ಮೂವರ್ಸ್ ಲಿಮಿಟೆಡ್ ನಿಂದ 150 ಬೋಗಿಗಳನ್ನು ಹಸ್ತಾಂತರವಾಗಿ, ಕಾರ್ಯಾಚರಿಸುತ್ತಿದ್ದ ಮೂರು ಬೋಗಿಗಳ ಎರಡು ರೈಲಿಗೆ ಜೋಡಿಸಲಾಗಿದೆ. ಈ ಎರಡೂ ರೈಲುಗಳುರೈಲುಗಳು ಬೈಯಪ್ಪನಹಳ್ಳಿ-ಮೈಸೂರು ರಸ್ತೆಯ ನೇರಳೆ ಮಾರ್ಗದಲ್ಲಿ ಸಂಚಾರ ನಡೆಸುತ್ತಿದೆ.

ರೈಲು ಒಂದೆಡೆಯಿಂದ ಮತ್ತೊಂದೆಡೆ ಸಂಚರಿಸಲು 40 ನಿಮಿಷ ಬೇಕು

ರೈಲು ಒಂದೆಡೆಯಿಂದ ಮತ್ತೊಂದೆಡೆ ಸಂಚರಿಸಲು 40 ನಿಮಿಷ ಬೇಕು

ಒಂದು ರೈಲು ಮತ್ತೊಂದೆಡೆಗೆ ಸಂಚರಿಸಲು 40 ನಿಮಿಷ ಬೇಕಾಗುತ್ತದೆ. ಇದರಿಂದ ಸ್ವಲ್ಪ ಮಟ್ಟಿಗೆ ದಟ್ಟಣೆ ಕಡಿಮೆ ಮಾಡಲು ಸಾಧ್ಯವಾಗಿದೆ.

ಪ್ರತಿ ತಿಂಗಳು ಆರು ಬೋಗಿಗಳ ಒಂದು ರೈಲು

ಪ್ರತಿ ತಿಂಗಳು ಆರು ಬೋಗಿಗಳ ಒಂದು ರೈಲು

ಪ್ರತಿ ತಿಂಗಳು ಆರು ಬೋಗಿಗಳ ಒಂದು ಅಥವಾ ಎರಡು ರೈಲುಗಳನ್ನು ಸಂಚಾರಕ್ಕೆ ಮುಕ್ತಗೊಳಿಸುವ ಪ್ರಯತ್ನ ನಡೆಯುತ್ತಿದೆ. ಕಳೆ ತಿಂಗಳು ಆರು ಬೋಗಿಗಳ ಎರಡನೇ ರೈಲು ಸಂಚಾರ ಆರಂಭಿಸಿತ್ತು.

ನೇರಳೆ ಮಾರ್ಗದಲ್ಲಿ ನಿತ್ಯ 1.87 ಲಕ್ಷ ಜನ ಸಂಚಾರ

ನೇರಳೆ ಮಾರ್ಗದಲ್ಲಿ ನಿತ್ಯ 1.87 ಲಕ್ಷ ಜನ ಸಂಚಾರ

ವೈಟ್‌ಫೀಲ್ಡ್ ಸಂಪರ್ಕ ಕಲ್ಪಿಸುವ ನೇರಳೆ ಮಾರ್ಗದಲ್ಲಿ ನಿತ್ಯ ಸರಾಸರಿ 1.87 ಲಕ್ಷ ಮಂದಿ ಸಂಚರಿಸುತ್ತಾರೆ ಹಾಗೂ ನಾಗಸಂದ್ರ-ಯಲಚೇನಹಳ್ಳಿ ಹಸಿರು ಮಾರ್ಗದಲ್ಲಿ 1.60 ಲಕ್ಷ ಜನರು ಪ್ರಯಾಣಿಸುತ್ತಾರೆ. ನೇರಳೆ ಮಾರ್ಗದಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಿಸರುವುದರಿಂದ ಅಲ್ಲಿಗೆ ಆರು ಬೋಗಿಗಳ ಮೂರನೇ ರೈಲನ್ನು ನೀಡಲಾಗುತ್ತಿದೆ.

ಮಹಿಳೆಯರಿಗೂ ಅನುಕೂಲ

ಮಹಿಳೆಯರಿಗೂ ಅನುಕೂಲ

ಆರು ಬೋಗಿಗಳ ರೈಲಿನಲ್ಲಿ ಮೊದಲ ಬೋಗಿಯನ್ನು ಮಹಿಳೆಯರಿಗೆ ಮೀಡಲಿಡಲಾಗಿದೆ. ಮೊದಲ ಬೋಗಿಯು ಹಳೆ ರೈಲಿನ ಭಾಗವಾಗಿರುವುದರಿಂದ ಇದರಲ್ಲಿ 325 ಮಂದಿ ಒಂದೇ ಬಾರಿಗೆ ಪ್ರಯಾಣಿಸಬಹುದಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+