Get Updates
Get notified of breaking news, exclusive insights, and must-see stories!

ಬೆಂಗಳೂರು ಶಿಕ್ಷಕರ-ಪದವೀಧರರ ಕ್ಷೇತ್ರ ಚುನಾವಣೆ-2024, ಪ್ರಕ್ರಿಯೆ ಆರಂಭ

ಬೆಂಗಳೂರು, ಅಕ್ಟೋಬರ್ 27: ಬೆಂಗಳೂರು ಶಿಕ್ಷಕರ ಹಾಗೂ ಪದವೀಧರರ ಕ್ಷೇತ್ರ ಚುನಾವಣೆಗೆ ಸಂಬಂದಿಸಿದ ಕಾರ್ಯಚಟುವಟಿಕೆಗಳ ಕುರಿತು ವಿಶೇಷ ಆಯುಕ್ತರು(ಚುನಾವಣೆ) ಆರ್. ರಾಮಚಂದ್ರನ್ ರವರ ನೇತೃತ್ವದಲ್ಲಿ ವಿವಿಧ ರಾಜಕೀಯ ಪಕ್ಷದ ಪ್ರತಿನಿಧಿಗಳ ಜೊತೆ ಸಭೆ ನಡೆಯಿತು.

ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಬೆಂಗಳೂರು ಶಿಕ್ಷಕರ ಕ್ಷೇತ್ರ ಹಾಗೂ ಪದವೀಧರರ ಚುನಾವಣೆಗೆ ಸಂಬಂಧಿಸಿದಂತೆ ಜಿಲ್ಲಾ ಚುನಾವಣಾಧಿಕಾರಿಗಳು-ಬೆಂಗಳೂರು ರವರ ವ್ಯಾಪ್ತಿಯಲ್ಲಿ ಪದವೀಧರರ ಕ್ಷೇತ್ರ ಚುನಾವಣೆಗೆ ಸಂಬಂಧಿಸಿದಂತೆ ನೂತನವಾಗಿ(de-novo) ಮತದಾರ ಪಟ್ಟಿಯನ್ನು ಸಿದ್ದಪಡಿಸಲಾಗುವುದು.

Bengaluru Teachers Constituency and Graduate Constituency Election-2024 Process Start

ಭಾರತ ಚುನಾವಣಾ ಆಯೋಗದ ಉಲ್ಲೇಖಿತ ಪತ್ರದಲ್ಲಿನ ನಿರ್ದೇಶನದಂತೆ ಕರ್ನಾಟಕ ರಾಜ್ಯ ವಿಧಾನ ಪರಿಷತ್ತಿನ ಬೆಂಗಳೂರು ಪದವೀಧರರು ಮತ್ತು ಶಿಕ್ಷಕರ ಕ್ಷೇತ್ರಗಳಿಗೆ ಇದೇ 2023 ನವೆಂಬರ್ 01 ಅನ್ವಯವಾಗುವಂತೆ ನೂತನವಾಗಿ(de-novo) ಮತದಾರ ಪಟ್ಟಿ ಸಿದ್ಧಪಡಿಸಲು ನಿರ್ದೇಶಿಸಲಾಗಿದೆ ಎಂದು ರಾಮಚಂದ್ರನ್ ತಿಳಿಸಿದರು.

ನವೆಂಬರ್ 23ರಂದು ಕರಡು ಮತದಾರರ ಪಟ್ಟಿ

ನವೆಂಬರ್ 6 ರಂದು ಮತದಾರ ಪಟ್ಟಿ ಕುರಿತ ಅರ್ಜಿ ನಮೂನೆ-18 ಅಥವಾ ನಮೂನೆ-19ನ್ನು ಸ್ವೀಕರಿಸಲು ಕೊನೆಯ ದಿನಾಂಕ ಆಗಿರಲಿದೆ. ನವೆಂಬರ್ 20 ರಂದು ಹಸ್ತಪ್ರತಿಗಳು ತಯಾರಿಕೆ ಮತ್ತು ಕರಡು ಮತದಾರರ ಪಟ್ಟಿ ಮುದ್ರಿಸಬೇಕು. ನವೆಂಬರ್ 23 ರಂದು ಕರಡು ಮತದಾರರ ಪಟ್ಟಿ ಪ್ರಕಟಿಸಲಾಗುವುದು.

ನವೆಂಬರ್ 23ರಿಂದ ಡಿಸೆಂಬರ 09ರವರೆಗೆ ಹಕ್ಕು ಮತ್ತು ಆಕ್ಷೇಪಣೆ ಸಲ್ಲಿಸಬಹುದಾಗಿದೆ. ಡಿಸೆಂಬರ್ 25 ರಂದು ಮತದಾರರ ಪಟ್ಟಿ ಕುರಿತ ಹಕ್ಕು ಮತ್ತು ಆಕ್ಷೇಪಣೆ ವಿಲೇವಾರಿ ಮಾಡಲಾಗುವುದು. ಡಿಸೆಂಬರ್ 30ರಂದು ಅಂತಿಮ ಮತದಾರರ ಪಟ್ಟಿ ಬಿಡುಗಡೆಮಾಡಲಗುವುದು ಎಂದು ತಿಳಿಸಿದರು.

Bengaluru Teachers Constituency and Graduate Constituency Election-2024 Process Start

ಶಿಕ್ಷಕರ-ಪದವೀದರರ ಕ್ಷೇತ್ರ ಚುನಾವಣೆ-ಸಭೆ

ಮುಂಬರುವ ಕರ್ನಾಟಕ ರಾಜ್ಯ ವಿಧಾನ ಪರಿಷತ್ತಿನ (ಬೆಂಗಳೂರು ಶಿಕ್ಷಕರ ಮತ್ತು ಪದವೀದರರ ಕ್ಷೇತ್ರ) ಚುನಾವಣೆ-2024ರ ಸಂಬಂಧ ಸಹಾಯಕ ಮತದಾರರಪಟ್ಟಿ ನೊಂದಣಾಧಿಕಾರಿಗಳು ಹಾಗೂ ದಕಷಿಣ ವಿಭಾಗದ ಅಪರ ಜಿಲ್ಲಾ ಚುನಾವಣಾಧಿಕಾರಿಗಳು ಹಾಗೂ ವಲಯ ಜಂಟಿ ಆಯುಕ್ತರು ಮತ್ತು ನೋಡಲ್ ಅಧಿಕಾರಿಗಳು(ದಕ್ಷಿಣ) ರವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು.

ಪದವೀದರರ ಕ್ಷೇತ್ರಕ್ಕೆ ಸಂಬಂಧಿಸಿದ ನಮೂನೆ 18ರ ಅರ್ಜಿಗಳನ್ನು ಸ್ವೀಕರಿಸಲು ಕಾರ್ಮಿಕ ಇಲಾಖೆಯ ಅಧಿಕಾರಿಗಳೊಂದಿಗೆ ವಿಧಾನಸಭಾವಾರು ಹಾಜರಿದ್ದ ಸಹಾಯಕ ಮತದಾರರಪಟ್ಟಿ ನೊಂದಣಾಧಿಕಾರಿಗಳು ರವರ ಸಮನ್ವಯದೊಂದಿಗೆ ತಮ್ಮ ವ್ಯಾಪ್ತಿಗೆ ಒಳಪಡುವ ಪದವೀದರರ ಮತದಾರರ ನೋಂದಣಿ ಕುರಿತು ಜಾಗೃತಿ ಮೂಡಿಸಿ ನಮೂನೆ-18ರ ಅರ್ಜಿಗಳನ್ನು ಸ್ಥಳೀಯ ನಿವಾಸಿ ಪದವೀದರರಿಗೆ ನೀಡಿ ಭರ್ತಿ ಮಾಡಿದ ಅರ್ಜಿಗಳನ್ನು ವಿಧಾನಸಭಾವಾರು ಸಹಾಯಕ ಮತದಾರರಪಟ್ಟಿ ನೊಂದಣಾಧಿಕಾರಿಗಳು ರವರ ಕಛೇರಿಗೆ ನಿಗಧಿತ ಅವಧಿಯೊಳಗೆ (ನವೆಂಬರ್ 6) ಸಲ್ಲಿಸಬೇಕು ಎಂದು ಸೂಚಿಸಲಾಗಿದೆ.

ನಿಗದಿತ ಅವಧಿಯೊಳಗೆ ಅರ್ಜಿ ಸಲ್ಲಿಸಿ

ಕ್ಷೇತ್ರ ಶಿಕ್ಷಣಾಧಿಕಾರಿಗಳು S-1, S-2 & S-3 ಇವರುಗಳು ವಿಧಾನಸಭಾವಾರು ಹಾಜರಿದ್ದ ಸಹಾಯಕ ಮತದಾರರಪಟ್ಟಿ ನೊಂದಣಾಧಿಕಾರಿಗಳು ರವರ ಸಮನ್ವಯದೊಂದಿಗೆ ತಮ್ಮ ವ್ಯಾಪ್ತಿಗೆ ಒಳಪಡುವ ಪದವೀದರರ ಮತದಾರರ ನೊಂದಣಿ ಕುರಿತು ಜಾಗೃತಿ ಮೂಡಿಸಲಾಗುವುದು. ಈ ಸಂಬಂಧ ನಮೂನೆ 18 ಮತ್ತು ನಮೂನೆ 19ರ ಅರ್ಜಿಗಳನ್ನು ತಮ್ಮ ವ್ಯಾಪ್ತಿಗೆ ಒಳಪಡುವ ಶಿಕ್ಷಣ ಸಂಸ್ಥೆಗಳಿಗೆ ನೀಡಿ ಭರ್ತಿ ಮಾಡಿದ ಅರ್ಜಿಗಳನ್ನು ಆಯಾ ವಿಧಾನಸಭಾ ಸಹಾಯಕ ಮತದಾರರಪಟ್ಟಿ ನೊಂದಣಾಧಿಕಾರಿಗಳು ರವರ ಕಛೇರಿಗೆ ಸಲ್ಲಿಸಬೇಕು ಎಂದು ತಿಳಿಸಲಾಗಿದೆ.

ಸಭೆಯಲ್ಲಿ ಪಶ್ಚಿಮ ವಲಯದ ಜಂಟಿ ಆಯುಕ್ತರಾದ ಯೋಗೇಶ್.ಟಿ, 7 ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದ ವಿದ್ಯಾಸಂಸ್ಥೆಗಳು ಹಾಗೂ ಬಿ.ಬಿ.ಎಂ.ಪಿ ದಕ್ಷಿಣ ವ್ಯಾಪ್ತಿಯ ಎಲ್ಲಾ ಸಹಾಯಕ ಮತದಾರರ ನೊಂದಣಾಧಿಕಾರಿಗಳು ಹಾಜರಿದ್ದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+