ಬೆಂಗಳೂರು ಶಿಕ್ಷಕ-ಪದವೀಧರ ಕ್ಷೇತ್ರ ಚುನಾವಣೆ: ಕಾಂಗ್ರೆಸ್ ಅಭ್ಯರ್ಥಿಗಳು ಫೈನಲ್, ಯಾರು? ಯಾವ ಕ್ಷೇತ್ರ?
ಬೆಂಗಳೂರು, ಅಕ್ಟೋಬರ್ 29: ಕರ್ನಾಟಕದಲ್ಲಿ ಪದವೀಧರ/ಶಿಕ್ಷಕರ ಕ್ಷೇತ್ರಗಳಿಂದ ಕರ್ನಾಟಕ ವಿಧಾನ ಪರಿಷತ್ತಿಗೆ ದ್ವೈವಾರ್ಷಿಕ ಚುನಾವಣೆ ಹತ್ತಿರ ಬರುತ್ತಿದೆ. ಈ ಸಂಬಂಧ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಭಾನುವಾರ ಅಭ್ಯರ್ಥಿಗಳನ್ನು ಅಂತಿಮಗೊಳಿಸಿದ್ದಾರೆ.
ಒಟ್ಟು ಐದು ಕ್ಷೇತ್ರಗಳಿಗೆ ಕಾಂಗ್ರೆಸ್ ಅಭ್ಯರ್ಥಿಗಳ ಯಾರೆಂದು ಘೋಷಣೆ ಆಗಿದೆ. ಈ ಮೂಲಕ ಚುನಾವಣೆ ಪ್ರಕ್ರಿಯೆಗಳು ಆರಂಭವಾದ ಬೆನ್ನಲ್ಲೆ ಅಭ್ಯರ್ಥಿಗಳು ಘೋಷಿಸಿದ ಕಾಂಗ್ರೆಸ್ ಮೊದಲ ಪಕ್ಷವಾಗಿದೆ. ಹಾಗಾದರೆ ಯಾವ ಕ್ಷೇತ್ರಕ್ಕೆ ಯಾರು ಅಭ್ಯರ್ಥಿಗಳು ಎಂದು ಇಲ್ಲಿ ನೋಡೋಣ.

ಕ್ಷೇತ್ರ-ಅಭ್ಯರ್ಥಿಗಳ ಹೆಸರು
ಬೆಂಗಳೂರು ಪದವೀಧರ ಕ್ಷೇತ್ರ - ರಾಮೋಜಿ ಗೌಡ
ಬೆಂಗಳೂರು ಶಿಕ್ಷಕರ ಕ್ಷೇತ್ರ- ಪುಟ್ಟಣ್ಣ
ಬೆಂಗಳೂರು ನೈಋತ್ಯ ಶಿಕ್ಷಕರ ಕ್ಷೇತ್ರ - ಕೆ.ಕೆ ಮಂಜುನಾಥ್
ಬೆಂಗಳೂರು ಆಗ್ನೇಯ ಶಿಕ್ಷಕರ ಕ್ಷೇತ್ರ - ಡಿ.ಟಿ ಶ್ರೀನಿವಾಸ್
ಬೆಂಗಳೂರು ಈಶಾನ್ಯ ಪದವೀಧರ ಕ್ಷೇತ್ರ - ಚಂದ್ರಶೇಖರ್ ಬಿ.ಪಾಟೀಲ್ ಇವರನ್ನು ಆಯ್ಕೆ ಮಾಡಿ ಎಐಸಿಸಿ ಮಲ್ಲಿರ್ಜುನ ಖರ್ಗೆ ಅವರು ಆದೇಶಿಸಿದ್ದಾರೆ.
ಚುನಾವಣೆ ಪ್ರಕ್ರಿಯೆ ಆರಂಭಿಸಿದ ಆಯೋಗ
ಬೆಂಗಳೂರು ಶಿಕ್ಷಕರ ಕ್ಷೇತ್ರ ಮತ್ತು ಪದವೀಧರರ ಚುನಾವಣೆಗೆ ಕುರಿತಂತೆ ಜಿಲ್ಲಾ ಚುನಾವಣಾಧಿಕಾರಿಗಳು ಮತದಾರರ ಪಟ್ಟಿ ತಯಾರಿಕೆಗೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಇದೇ ನವೆಂಬರ್ 1ರ ಅನುಗುನವಾಗಿ ಪಟ್ಟಿ ಸಿದ್ಧಪಡಿಸಲು ಜಿಲ್ಲಾ ಚುನಾವಣಾಧಿಕಾರಿ ರಾಮಚಂದ್ರನ್ ತಿಳಿಸಿದ್ದಾರೆ. ಚುನಾವಣೆ ದಿನಾಂಕ ನಿಗದಿಯಾಗುವ ಮೊದಲೇ ಕರಡು ಮತ್ತು ಅಂತಿಮ ಪಟ್ಟಿ ಪ್ರಕಟಗೊಳ್ಳಲಿವೆ.












Click it and Unblock the Notifications