ಮುಷ್ಕರ ಹಿಂದಕ್ಕೆ: ನಿಟ್ಟುಸಿರು ಬಿಟ್ಟ ವಾಹನ ಸವಾರರು
ಬೆಂಗಳೂರು, ಏಪ್ರಿಲ್, 5: ವಾಹನ ಸವಾರರು ಸದ್ಯಕ್ಕೆ ನಿಟ್ಟುಸಿರು ಬಿಡಬಹುದು. ವಿವಿಧ ಸೌಕರ್ಯಗಳಿಗೆ ಒತ್ತಾಯಿಸಿ ತೈಲ ಸಾಗಣೆ ಟ್ಯಾಂಕರ್ ಚಾಲಕರು ಮತ್ತು ಕ್ಲೀನರ್ಗಳು ಹಮ್ಮಿಕೊಂಡಿದ್ದ ಮುಷ್ಕರ ಕೈಬಿಟ್ಟಿದ್ದಾರೆ.
ಎಂದಿನಂತೆ ಮಹಾನಗರಕ್ಕೆ ಟ್ಯಾಂಕರ್ ಗಳ ಮೂಲಕ ಅಗತ್ಯ ಇಂಧನ ಸರಬರಾಜಾಗಲಿದೆ. ಚಾಲಕರು ಹಾಗೂ ಕ್ಲೀನರ್ ಸಂಘದ ಜೊತೆ ಐಒಸಿ ಅಧಿಕಾರಿಗಳು ಮತ್ತು ಪೆಟ್ರೋಲ್ ಬಂಕ್ ಮಾಲೀಕರು ನಡೆಸಿದ ಸಂಧಾನ ಯಶಸ್ವಿಯಾಗಿದ್ದು ಭರವಸೆ ನಂತರ ಧರಣಿಯನ್ನು ಹಿಂದಕ್ಕೆ ಪಡೆಯಲಾಗಿದೆ.[ಬೆಂಗಳೂರಿಗೆ ತೈಲ ಸಾಗಾಟ ಬಂದ್ ಮಾಡಿದ್ದು ಯಾಕೆ?]

ಚಾಲಕರು ಹಾಗೂ ಕ್ಲೀನರ್ ಗಳ ಸಮಸ್ಯೆಗಳ ಪರಿಹಾರಕ್ಕಾಗಿ ಮೂರು ತಿಂಗಳಲ್ಲಿ ಸಮಿತಿ ರಚಿಸಿ ಸೂಕ್ತ ತೀರ್ಮಾನ ತೆಗೆದುಕೊಳ್ಳಲಾಗುವುದು. ಸಮಿತಿ ಮುಂದೆ ಸಮಸ್ಯೆಯನ್ನು ಚಾಲಕರು ತೆರೆದಿಡಬಹುದು ಎಂದು ತಿಳಿಸಲಾಗಿದೆ.
ದೇವನಹಳ್ಳಿ ಮತ್ತು ಹೊಸಕೋಟೆಯಲ್ಲಿರುವ ಪೆಟ್ರೋಲ್ ಟ್ಯಾಂಕರ್ ಟರ್ವಿುನಲ್ಗಳಲ್ಲಿ ಮೂಲ ಸೌಕರ್ಯ ಕಲ್ಪಿಸಿಕೊಡಬೇಕೆಂದು ಒತ್ತಾಯಿಸಿ ನೂರಾರು ಚಾಲಕರು, ಕ್ಲೀನರ್ಗಳು, ಟ್ಯಾಂಕರ್ ಗಳನ್ನು ಪ್ರತಿಭಟನೆ ಆರಂಭಿಸಿದ್ದು ರಾಜಧಾನಿಯ ನಾಗರಿಕರಿಗೆ ಬಿಸಿ ಮುಟ್ಟಿಸಿತ್ತು.












Click it and Unblock the Notifications