Bengaluru Suburban Train: ಕಾರಿಡಾರ್-4 ಕಾಮಗಾರಿಯನ್ನ ಗುತ್ತಿಗೆ ಪಡೆದ L&T- ಎಷ್ಟು ಸಾವಿರ ಕೋಟಿ? ಅಂಕಿಅಂಶ, ವಿವರ
ಬೆಂಗಳೂರು, ಡಿಸೆಂಬರ್, 31: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಮೆಟ್ರೋ, ರೈಲು ನಿಲ್ದಾಣ ಕಾಮಗಾರಿಗಳ ವಿಚಾರದಲ್ಲಿ ಆಗಾಗಾ ದೊಡ್ಡ ದೊಡ್ಡ ಅಭಿವೃದ್ಧಿಗಳು ಆಗುತ್ತಲೇ ಇರುತ್ತವೆ. ಹಾಗೆಯೇ ಉಪನಗರ ರೈಲು ಯೋಜನೆಯ ಕಾರಿಡಾರ್-4 ನಿರ್ಮಾಣ ಕಾಮಗಾರಿಯ ಗುತ್ತಿಗೆಯನ್ನು ಎಲ್ ಆಂಡ್ ಟಿ ಕಂಪನಿ ಪಡೆದಿದೆ. ಹಾಗಾದರೆ ಎಷ್ಟು ಕೋಟಿಗೆ ಗುತ್ತಿಗೆ ಪಡೆದಿದೆ ಹಾಗೂ ಇದನ್ನು ಪೂರ್ಣಗೊಳಿಸುವ ಅವಧಿಯ ಬಗ್ಗೆ ಇಲ್ಲಿ ತಿಳಿಯಿರಿ.
ಬೆಂಗಳೂರು ಉಪನಗರ ರೈಲು ಯೋಜನೆಯ ಕಾರಿಡಾರ್-4 ನಿರ್ಮಾಣ ಕಾಮಗಾರಿಯಯನ್ನು ಎಲ್ ಆಂಡ್ ಟಿ ಕಂಪನಿ 1040.51 ಕೋಟಿ ರೂಪಾಯಿಗೆ ಪಡೆದಿದ್ದು, 30 ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸಲು ಅವಧಿ ನಿಗದಿ ಪಡಿಸಲಾಗಿದೆ.

ಹೀಲಲಿಗೆಯಿಂದ ರಾಜಾನುಕುಂಟೆಗೆ ಸಂಪರ್ಕಿಸುವ ಕಾರಿಡಾರ್ -4.48 ಕಿಲೋ ಮೀಟರ್ ಉದ್ದವಿದೆ. 8.960 ಕಿಲೋ ಮೀಟರ್ ಎತ್ತರಿಸಿದ ಮಾರ್ಗ ಮತ್ತು 37.9 ಕಿಲೋ ಮೀಟರ್ ಸಮತಲ ಮಾರ್ಗಗಳನ್ನು ಒಳಗೊಂಡಿದೆ. ಈ ನಿರ್ಮಾಣ ಕಾಮಗಾರಿಯ ಒಪ್ಪಂದವು ಯಲಹಂಕ ಬಳಿ ಕಾರಿಡಾರ್-1 ಮತ್ತು ಕಾರಿಡಾರ್-4ಕ್ಕಾಗಿ 1.2 ಕಿಲೋ ಮೀಟರ್ ಉದ್ದದ ಡಬಲ್ ಡೆಕ್ಕರ್ ಜೋಡಣೆಯ ನಿರ್ಮಾಣ ಒಳಗೊಂಡಿದೆ.
ಬೆನ್ನಿಗಾಹಳ್ಳಿ ಬಳಿ ಬಿಎಂಆರ್‌ಸಿಎಲ್ ವಯಡಕ್ಟ್ ಕೆಳಗೆ 500 ಮೀಟರ್ ಉದ್ದದ ಬಿಎಸ್‌ಆರ್‌ಪಿ ಎತ್ತರಿಸಿದ ಮಾರ್ಗ ನಿರ್ಮಿಸಲಿದೆ. ಬಿಎಸ್‌ಆರ್‌ಪಿ ಮತ್ತು ಬಿಎಂಆರ್‌ಸಿಎಲ್ ನಡುವೆ ಮಾರ್ಗ ಸಮಾನವಾಗಿ ಹಂಚಿಕೆ ಆಗಲಿದೆ. ಈ ಮಾದರಿಯ ಕಾಮಗಾರಿ ನಿರ್ಮಾಣವು ದೇಶದಲ್ಲಿಯೇ ಮೊದಲು ಎಂದು ಬಿಎಸ್‌ಆರ್‌ಪಿ ಅಧಿಕಾರಿಗಳು ತಿಳಿಸಿದ್ದಾರೆ.
ಕಾರಿಡಾರ್-2 ಚಿಕ್ಕಬಾಣವರ-ಬೈಯಪ್ಪನಹಳ್ಳಿ ಕಾಮಗಾರಿಯನ್ನು ಕೂಡ ಲಾರ್ಸೆನ್ ಆಂಡ್ ಟ್ಯೂಬ್ರೊ ಲಿಮಿಟೆಡ್ ಪಡೆದಿತ್ತು. ಈ ಕಾಮಗಾರಿ ಭರದಿಂದ ಸಾಗುತ್ತಿದೆ. ಬೆಂಗಳೂರು ಉಪನಗರ ರೈಲು ಯೋಜನೆಯನ್ನು ಅನುಷ್ಠಾನಗೊಳಿಸುತ್ತಿರುವ ರಾಜ್ಯದ ರೈಲು ಮೂಲ ಸೌಲಭ್ಯ ಅಭಿವೃದ್ಧಿ ಕಂಪನಿ ನಿಯಮಿತವು (ಕೆ-ರೈಡ್) ಈಗಾಗಲೇ 50 ಕೋಟಿ ರೂಪಾಯಿ ಯುರೊ ಸಾಲಕ್ಕೆ ಜರ್ಮನಿಯ ಪ್ರತಿಷ್ಠಿತ ಕೆಎಫ್‌ಡಬ್ಲ್ಯು ಡೆವಲಪ್‌ಮೆಂಟ್ ಬ್ಯಾಂಕ್‌ನೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದೆ.
ಇದರ ಮುಂದುವರಿದ ಭಾಗವಾಗಿ ಯೂರೋಪಿಯನ್ ಹೂಡಿಕೆ ಬ್ಯಾಂಕ್‌ನೊಂದಿಗೆ 2024ರ ಮಾರ್ಚ್‌ನಲ್ಲಿ 30 ಕೋಟಿ ಯುರೊ ಸಾಲ ಒಪ್ಪಂದಕ್ಕೆ ಸಹಿ ಮಾಡಲು ತಯಾರಿ ನಡೆಸಲಾಗಿದೆ. ಕಾರಿಡಾರ್-1 ಮತ್ತು ಕಾರಿಡಾರ್-3 ಟೆಂಡರ್ ಶೀಘ್ರದಲ್ಲೇ ಆಹ್ವಾನಿಸಲಾಗುವುದು. ಕಾರಿಡಾರ್-4 ಕಾಮಗಾರಿಗಾಗಿ 115 ಹೆಕ್ಟೇರ್ ಭೂಮಿಯನ್ನು ನೈರುತ್ಯ ರೈಲ್ವೆ ಶೀಘ್ರ ಹಸ್ತಾಂತರಿಸಲಿದೆ ಎಂದು ಕೆ-ರೈಡ್ ಅಧಿಕಾರಿಗಳು ತಿಳಿಸಿದ್ದಾರೆ.
ಆಗಸ್ಟ್ 2023ರಲ್ಲಿ L&T ರೈಲು ಸಿವಿಲ್ ವರ್ಕ್ ಟೆಂಡರ್‌ಗೆ ಕಡಿಮೆ ಬಿಡ್‌ದಾರರಾಗಿ ಹೊರಹೊಮ್ಮಿತ್ತು. ಆದರೂ ಉಪನಗರ ರೈಲು ಯೋಜನೆಯನ್ನು ಕಾರ್ಯಗತಗೊಳಿಸುವ ಜವಾಬ್ದಾರಿಯುತ KRIDE,ನೈಋತ್ಯ ರೈಲ್ವೆಯಿಂದ ಭೂಮಿಯನ್ನು ಹಸ್ತಾಂತರಿಸುವಲ್ಲಿ ವಿಳಂಬವಾದ ಕಾರಣ ಕೆಲಸದ ಆದೇಶವನ್ನು ನೀಡಲು ಸಾಧ್ಯವಾಗಲಿಲ್ಲ. ಜನವರಿ 2023ರಲ್ಲಿ, ಕನಕ ಲೈನ್‌ನ ಸಿವಿಲ್ ಎಂಜಿನಿಯರಿಂಗ್ ಕಾಮಗಾರಿಗಳಿಗೆ ಬಿಡ್‌ಗಳನ್ನು ಆಹ್ವಾನಿಸಿತು.
ಕನಕ ಮಾರ್ಗವು ರಾಜನಕುಂಟೆ, ಮುದ್ದನಹಳ್ಳಿ, ಯಲಹಂಕ (ಇಂಟರ್‌ಚೇಂಜ್), ಜಕ್ಕೂರು, ಹೆಗಡೆ ನಗರ, ಥಣಿಸಂದ್ರ, ಹೆಣ್ಣೂರು, ಹೊರಮಾವು, ಚನ್ನಸಂದ್ರ, ಬೆನ್ನಿಗಾನಹಳ್ಳಿ (ಇಂಟರ್‌ಚೇಂಜ್), ಕಗ್ಗದಾಸಪುರ, ದೊಡ್ಡನೆಕುಂದಿ, ಮಾರತ್ತಹಳ್ಳಿ, ಬೆಳಂದೂರು ರಸ್ತೆ, ಕಾರ್ಮೆಲರಂ, ಸಿಂಗೇನ ಅಗ್ರಹಾರ, ಬೊಮ್ಮಸಂದ್ರ ಮತ್ತು ಹೀಲಳಿಗೆ ಆಸ್ಕ್ ಲೈನ್‌ನಲ್ಲಿ ನಿಲ್ದಾಣಗಳನ್ನು ಒಳಗೊಂಡಿರುತ್ತದೆ.
ಹೆಚ್ಚುವರಿಯಾಗಿ, ಇದು ಬೆನ್ನಿಗಾನಹಳ್ಳಿ ಬಳಿ ಬೆಂಗಳೂರು ಮೆಟ್ರೊ ಮಾರ್ಗದ ಕೆಳಗೆ 500-ಮೀಟರ್‌ಗಳಷ್ಟು ವ್ಯಾಪಿಸಿರುವ ಉಪನಗರ ರೈಲು ಎಲಿವೇಟೆಡ್ ವಯಡಕ್ಟ್‌ನ ನಿರ್ಮಾಣವನ್ನು ಒಳಗೊಂಡಿದೆ. ಭಾರತದಲ್ಲಿ ಈ ರೀತಿಯ ಯೋಜನೆ ಮೊದಲನೆಯದು ಎಂದು ಹೇಳಿಕೊಳ್ಳುತ್ತದೆ. ಈ ಹಿಂದೆ ಕಾರಿಡಾರ್-2 (ಚಿಕ್ಕಬಾಣಾವರದಿಂದ ಬೈಯಪ್ಪನಹಳ್ಳಿವರೆಗೆ 25.2 ಕಿ.ಮೀ.ವರೆಗೆ) ಕಾಮಗಾರಿಯನ್ನು ಎಲ್ ಅಂಡ್ ಟಿಗೆ ನೀಡಲಾಗಿದ್ದು, ನಿರ್ಮಾಣ ಕಾರ್ಯಗಳು ನಡೆಯುತ್ತಿವೆ.
" ಬಿಎಸ್‌ಆರ್‌ಪಿಗೆ ಒಟ್ಟು 72.08 ಕಿಲೋ ಮೀಟರ್ ಉದ್ದದ ಸಿವಿಲ್ ಕಾಮಗಾರಿಯ ಈ ಗುತ್ತಿಯನ್ನು ನೀಡಲಾಗಿದೆ. ಇದು ಒಟ್ಟು ಯೋಜನೆಯ ಸರಿಸುಮಾರು ಶೇಕಡಾ 50ರಷ್ಟು ಒಳಗೊಂಡಿದೆ. ಕಾರಿಡಾರ್-2 (ಚಿಕ್ಕಬಾಣಾವರದಿಂದ-ಬೈಯಪ್ಪನಹಳ್ಳಿ) ಮತ್ತು ಕಾರಿಡಾರ್-4 (ಹೀಲಲಿಗೆ-ರಾಜಾನುಕುಂಟೆ) ಅನ್ನು ರಾಜ್ಯದ ಸರ್ಕಾರವು ಹಂತ-1 ಆದ್ಯತೆಯ ಕಾರಿಡಾರ್‌ಗಳಾಗಿ ಗುರುತಿಸಲಾಗಿದೆ," ಎಂದು KRIDE ತಿಳಿಸಿದೆ.












Click it and Unblock the Notifications