Bengaluru Suburban Rail: ಯೋಜನೆಯ ಎರಡನೇ ಹಂತ 452ಕಿಮೀ ಮಾರ್ಗದ ಪಟ್ಟಿ, ಯಾರಿಗೆ ಲಾಭ, ಸಂಪರ್ಕದ ಬಗ್ಗೆ ತಿಳಿಯಿರಿ
ಬೆಂಗಳೂರು, ನವೆಂಬರ್ 10: ಐಟಿ ಕೇಂದ್ರವಾಗಿರುವ ಸಿಲಿಕಾನ್ ಸಿಟಿ ಬೆಂಗಳೂರು ನಗರದಿಂದ ಸುತ್ತಮುತ್ತಲಿನ ಜಿಲ್ಲೆಗಳ ವ್ಯಾಪ್ತಿಗೆ ಸಂಪರ್ಕ ಸಾಧಿಸುವ ದಿನಗಳು ದೂರು ಉಳಿದಿಲ್ಲ. ಬೆಂಗಳೂರು ಉಪನಗರ ರೈಲು ಯೋಜನೆ (BSRP) ಕೆಲಸಗಳು ನಡೆಯುತ್ತಿವೆ. ಇದೇ ಯೋಜನೆಯ ಹಂತ-II ರ ಅಡಿಯಲ್ಲಿ ನೂರಾರು ಕಿಲೋ ಮೀಟರ್ ಮಾರ್ಗ ನಿರ್ಮಾಣದ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ.
ಹೌದು, ಬೆಂಗಳೂರು ಉಪನಗರ ರೈಲು ಯೋಜನೆಯ ಹಂತ-II ಒಟ್ಟು 452 ಕಿಲೋ ಮೀಟರ್ ಮಾರ್ಗ ವ್ಯಾಪ್ತಿ ಹೊಂದಿದೆ. ಈ ಯೋಜನೆಯಿಂದ ಬೆಂಗಳೂರು ನಗರವು ಹೊರವಲಯದ ಪ್ರತಿ ಪ್ರದೇಶಗಳನ್ನು ಸಂಪರ್ಕಿಸಲಿದೆ. ಲಕ್ಷಾಂತರ ಜನರಿಗೆ ಅನುಕೂಲವಾಗುವ ಜೊತೆಗೆ ನಗರದ ವಾಹನ ದಟ್ಟಣೆಗೂ (Bengaluru Traffic) ಇದು ಕಡಿವಾಣ ಬೀಳಲಿದೆ. ಹಾಗಾದರೆ ಯಾವ ಜಿಲ್ಲೆ-ತಾಲೂಕು ಪ್ರದೇಶಗಳನ್ನು ಬೆಂಗಳೂರು ಸಂಪರ್ಕಿಸಲಿದೆ ಎಂಬ ಮಾಹಿತಿ ಇಲ್ಲಿದೆ.

K-RIDE ಈಗಾಗಲೇ ನೈಋತ್ಯ ರೈಲ್ವೆ ವಲಯಕ್ಕೆ ಯೋಜನೆ ಕೈಗೆತ್ತಿಕೊಳ್ಳಲು ಸ್ಥಳ ಸಮೀಕ್ಷೆಗೆ ಮನವಿ ಮಾಡಿದೆ. ಆದಷ್ಟು ಶೀಘ್ರವೇ ಮನವಿ ಪುರಷ್ಕರಿಸಿ ರೈಲ್ವೆ ಮಂಡಳಿಯಿಂದ ಅನುಮೋದನೆ ನೀಡಲಿದೆ ಎಂಬ ವಿಶ್ವಾಸ ವ್ಯಕ್ತವಾಗಿದೆ. ಬಿಎಸ್ಆರ್‌ಪಿ ಯೋಜನೆ ಎರಡನೇ ಹಂತವು ನಗರದ ಎಲ್ಲ ದಿಕ್ಕುಗಳಲ್ಲಿ ನಡೆಯುತ್ತಿರುವ ಹಂತ-I ಉಪನಗರ ರೈಲು ಜಾಲ (148.17-ಕಿಮೀ) ವಿಸ್ತರಣಾ ಹಂತವಾಗಿದೆ ಎಂದು TNIE ವರದಿ ಮಾಡಿದೆ.
ಯೋಜನೆ ಸಂಪರ್ಕ ಸಾಧಿಸುವ ಪ್ರದೇಶಗಳು
ಯೋಜನೆಯ ಎರಡನೇ ಹಂತವು ಒಟ್ಟು 452 ಕಿಲೋ ಮೀಟರ್ ಮಾರ್ಗ ನಿರ್ಮಾಣದ ಗುರಿ ಹೊಂದಿದೆ. ಈ ಯೋಜನೆಯಿಂದ ಬೆಂಗಳೂರಿನಿಂದ ನಗರದ ಹೊರವಲದ ಪ್ರದೇಶಗಳಾದ ದೇವನಹಳ್ಳಿ, ಚಿಕ್ಕಬಳ್ಳಾಪುರ, ಗೌರಿಬಿದನೂರು, ತುಮಕೂರು, ಕೋಲಾರ, ದೊಡ್ಡಬಳ್ಳಾಪುರ ಹಾಗೂ ಸುತ್ತಮುತ್ತಲಿನ ಸ್ಥಳಗಳವರೆಗೆ ವಿಸ್ತರಣೆ ಆಗುತ್ತದೆ. ಇದರಿಂದ ನಾಗರಿಕರಿಗೆ ಅನುಕೂಲವಾಗುವ ಜೊತೆಗೆ ಇಲ್ಲಿನ ವ್ಯಾಪಾರ ವಹೀವಾಟು, ಮೂಲಸೌಕರ್ಯಗಳು ಅಭಿವೃದ್ಧಿ ಹೊಂದುತ್ತವೆ.
ಯೋಜನೆಯ ಹಂತ 1ರ ವಿಸ್ತರಣೆ ಇದಾಗಿದೆ
ಯೋಜನೆಯ ಕಾರಿಡಾರ್-1ರ ಪ್ರಕಾರ ದೇವನಹಳ್ಳಿಯಿಂದ ಚಿಕ್ಕಬಳ್ಳಾಪುರವರೆಗೆ 22 ಕಿ.ಮೀ. ರೈಲು ಓಡಲಿವೆ. ಅಲ್ಲಿಂದ ಕಾರಿಡಾರ್ 2ರ ಮೂಲಕ ಮತ್ತೆ ಚಿಕ್ಕಬಳ್ಳಾಪುರದಿಂದ ಕೋಲಾರವರೆಗೆ 85 ಕಿಮೀ ಯೋಜನೆ ವಿಸ್ತರಣೆ ಆಗಲಿದೆ.

ಅದೇ ರೀತಿ ಚಿಕ್ಕಬಾವನಾರದಿಂದ ತುಮುಕೂರಿನವರೆಗೆ ದಾಬಸ್‌ಪೇಟೆ-35 ಕಿಮೀ, ಕಾರಿಡಾರ್ 2ಎ ಮೂಲಕ ಚಿಕ್ಕಬಾಣಾವರದಿಂದ ಮಾಗಡಿವರೆಗೆ 45 ಕಿ.ಮೀ, ಕಾರಿಡಾರ್ 3 ಮೂಲಕ ರಾಮನಗರ ಮತ್ತು ಮಂಡ್ಯ ಮೂಲಕ ಕೆಂಗೇರಿಯಿಂದ ಮೈಸೂರಿಗೆ 125 ಕಿ.ಮೀ ವರೆಗೆ ಉಪನಗರ ರೈಲುಗಳು ಸಂಪರ್ಕ ಸಾಧಿಸಲಿವೆ.
ವೈಟ್‌ಫೀಲ್ಡ್‌ನಿಂದ ಬಂಗಾರಪೇಟೆಗೆ 45 ಕಿಮೀ, ಹೆಲ್ಲಳಿ-ಹೊಸೂರುವರೆಗೆ 23 ಕಿಮೀ ನಿರ್ಮಾಣವಾಗಲಿದ್ದು, ಇದು ಕಾರಿಡಾರ್ 4ರ ವ್ಯಾಪ್ತಿಗೆ ಬರುತ್ತದೆ. ರಾಜನಕುಂಟೆಯಿಂದ ದೊಡ್ಡಬಳ್ಳಾಪುರ ಮಾರ್ಗವಾಗಿ ಗೌರಿಬಿದನೂರಿಗೆ 52 ಕಿ.ಮೀವರೆಗೆ ಯೋಜನೆಯ ಹಂತ I ಪೂರ್ಣಗೊಂಡ ನಂತರ ಹಂತ ಎರಡು ಪ್ರಾರಂಭವಾಗಲಿದೆ. ಎಲ್ಲವು ಅಂದುಕೊಂಡಂತೆ ಆದರೆ ಎರಡು ಹಂತಗಳಲ್ಲಿ ಕೆಲಸಗಳು ಒಟ್ಟೊಟ್ಟಿಗೆ ನಡೆಯಲೂಬಹುದು ಎಂದು ಮೂಲಗಳು ತಿಳಿಸಿವೆ.
ಕೆರೈಡ್‌ಗೆ ಅಧಿಕಾರಿಗಳಿಗೆ ಸಚಿವರ ಸಲಹೆ-ಸೂಚನೆ
ಇದೇ ವಿಚಾರ ಕುರಿತುಶುಕ್ರವಾರ ಕರ್ನಾಟಕ ಮೂಲ ಸೌಕರ್ಯ ಅಭಿವೃದ್ಧಿ ಸಚಿವ ಎಂಬಿ ಪಾಟೀಲ್ ಅವರು ಬೆಂಗಳೂರು ಉಪನಗರ ರೈಲು ಯೋಜನೆ (BSRP) ಅನುಷ್ಠಾನದ ನೋಡಲ್ ಏಜೆನ್ಸಿ ಕೆ-ರೈಡ್‌ಗೆ ಕಚೇರಿಯಲ್ಲಿ ಸಭೆ ನಡೆಸಿದರು. ಈ ರೈಲು ಯೋಜನೆ 452 ಕಿಮೀ ಹಂತ ಎರಡರ ಅನುಷ್ಠಾನದ ಅಂತಿಮ ಸ್ಥಳ ಸಮೀಕ್ಷೆ (FLS) ಕೈಗೊಳ್ಳಲು ಪ್ರಕ್ರಿಯೆ ತ್ವರಿತಗೊಳಿಸಲು ಸೂಚಿಸಿದ್ದಾರೆ.
ಉಪನಗರ ರೈಲು ಯೋಜನೆ ಮೂಲಕ ಉದ್ದೇಶಿತ ರೈಲು ಜೋಡಣೆಗಳು, ಮುಂಬರುವ ನಿಲ್ದಾಣಗಳು ಮತ್ತು ಯಾರ್ಡ್‌ಗಳನ್ನು ಸಂಪೂರ್ಣವಾಗಿ ಪರಿಶೀಲಿಸಲು ಮತ್ತು ನಿಖರವಾದ ರೇಖಾಚಿತ್ರಗಳನ್ನು ತಯಾರಿಸಲು FLS ಅನ್ನು ಮಾಡಲಾಗುತ್ತದೆ.
ಕೆ-ರೈಡ್ ಯೋಜನೆಯ ಮಧ್ಯಸ್ಥಗಾರರು ಮತ್ತು ಸಿಟಿಜನ್ ಗ್ರೂಪ್ ಸಮ್ಮುಖದಲ್ಲಿ ತನ್ನ ದ್ವೈಮಾಸಿಕ ಸುದ್ದಿಪತ್ರ 'ಸಂಪರ್ಕ' ಬಿಡುಗಡೆ ಮಾಡಿದೆ. ಅದರಲ್ಲಿ ಸಹ ಮಾಹಿತಿ ನೀಡಲಾಗಿದೆ. ಉದ್ದೇಶಿತ ಈ ರೈಲು ಯೋಜನೆಯು ಬೆಂಗಳೂರಿನ ಸಂಚಾರ ದಟ್ಟಣೆ ತೀವ್ರವಾಗಿ ಕಡಿಮೆ ಮಾಡಲಿದೆ. ಬೆಂಗಳೂರಿನ ಮಟ್ಟಿಗೆ ಇದೊಂದು 'ಗೇಮ್ ಚೇಂಜರ್' ಎಂದು ಹೇಳಲಾಗಿದೆ.
'ವೃತ್ತಾಕಾರ ರೈಲು ಯೋಜನೆ'ಗೆ ಸ್ಥಳ ಸಮೀಕ್ಷೆಗೆ ಒಪ್ಪಿಗೆ
ಇನ್ನೂ ಬೆಂಗಳೂರಿನ ಸುತ್ತಲೂ ವೃತ್ತಾಕಾರದಲ್ಲಿ (ಸರ್ಕುಲರ್) ರೈಲು ಮಾರ್ಗ ನಿರ್ಮಾಣಕ್ಕೆ ಅಂತಿಮ ಸ್ಥಳ ಸಮೀಕ್ಷೆಯನ್ನು ಕೈಗೊಳ್ಳಲು ನೈಋತ್ಯ ರೈಲ್ವೆಯು (SWR) ರೈಲ್ವೆ ಮಂಡಳಿಯಿಂದ ಸಹಮತ ಪಡೆದುಕೊಂಡಿದೆ. ಈ ವೃತ್ತಾಕಾರದ ರೈಲು ಯೋಜನೆಯು ಒಟ್ಟು 287 ಕಿಮೀ ವ್ಯಾಪ್ತಿ ಹೊಂದಿದೆ.
ಬೆಂಗಳೂರು ನಗರದ ಭವಿಷ್ಯದ ಸಾರಿಗೆ ಮೂಲ ಸೌಕರ್ಯಗಳನ್ನು ಪೂರೈಸುವ ನಮ್ಮ ಆದ್ಯತೆಯಾಗಿದೆ. ನಿಡವಂಡ-ದೊಡ್ಡಬಳ್ಳಾಪುರ-ದೇವನಹಳ್ಳಿ-ಮಾಲೂರು-ಹೀಳಲಿಗೆ-ಸೋಲೂರು-ನಿಡವಂಡ ಸಂಪರ್ಕಿಸುವ ವೃತ್ತಾಕಾರದ ರೈಲು ಜಾಲ ತಲೆಎತ್ತಲಿದೆ. ಸ್ಥಳ ಸಮೀಕ್ಷೆ ಆರಂಭವಾಗಿದೆ. ಯೋಜನೆಯಡಿ ಬರುವ ರೈಲು ನಿಲ್ದಾಣ ಇನ್ನಿತರ ಕಾರ್ಯಗಳ ಕುರಿತು ಪರಿಶೀಲನೆ ಆಗುತ್ತಿದೆ ಎಂದು ಎಸ್‌ಡಬ್ಲುಆರ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
-
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ












Click it and Unblock the Notifications