Get Updates
Get notified of breaking news, exclusive insights, and must-see stories!

Bengaluru Suburban Rail Project: ಈ ಭಾಗದಲ್ಲಿ ಭೂಸ್ವಾಧೀನ ಪ್ರಕ್ರಿಯೆ ಆರಂಭ, ಎಲ್ಲೆಲ್ಲಿ?-ಇಲ್ಲಿದೆ ಮಾಹಿತಿ

Bengaluru suburban rail: ಬೆಂಗಳೂರು ಬಹುನಿರೀಕ್ಷಿತ ಯೋಜನೆಯಾದ ಉಪನಗರ ರೈಲು ಯೋಜನೆ ಕಾಮಗಾರಿ ಎಲ್ಲಿಗೆ ಬಂತು ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.

ಉಪನಗರ ರೈಲು ಯೋಜನೆ ನಾನಾ ಕಾರಣಾಂತರಗಳಿಂದ ಆಮೆಗತಿಯಲ್ಲಿ ಸಾಗಿತ್ತು. ಇದೀಗ ಈ ಯೋಜನೆ
ಇದೀಗ ಭರದಿಂದ ಸಾಗುತ್ತಿದೆ ಎಂದು ತಿಳಿದುಬಂದಿದೆ. ನಾಲ್ಕು ಮಾರ್ಗದ ವಿಸ್ತರಣೆಗೆ ಅಗತ್ಯವಿರುವ ಭೂಸ್ವಾಧೀನ ಪ್ರಕ್ರಿಯೆ ಆರಂಭ ಆಗಿದ್ದು, ಈ ಮಾರ್ಗದಲ್ಲಿರುವ ವಸತಿ, ವಾಣಿಜ್ಯ ಕಟ್ಟಡಗಳನ್ನು ಸಂಪೂರ್ಣ ಮತ್ತು ಭಾಗಶಃ ಸ್ವಾಧೀನಪಡಿಸಿಕೊಳ್ಳುವ ಕಾರ್ಯ ಶುರುವಾಗಿದೆ.

Bengaluru Suburban Rail Project Land Acquisition Process start in this Parts

ಈ ಯೋಜನೆಗೆ ಒಟ್ಟು 148 ಕಿಲೋ ಮೀಟರ್‌ ಮಾರ್ಗದಲ್ಲಿ ಸುಮಾರು 650 ವಸತಿ, ವಾಣಿಜ್ಯ ಮತ್ತು ಇತರ ಸಣ್ಣಪುಟ್ಟ ಕಟ್ಟಡಗಳನ್ನು ಸಂಪೂರ್ಣ ಅಥವಾ ಭಾಗಶಃ ಕೆಡವಲು ನಿರ್ಧರಿಸಲಾಗಿದೆ. ಬೈಯಪ್ಪನಹಳ್ಳಿಯಿಂದ ಚಿಕ್ಕಬಾಣಾವರದವರೆಗೆ ವಿಸ್ತರಿಸಿರುವ ಕಾರಿಡಾರ್‌-2ರ ಮಾರ್ಗದಲ್ಲಿನ 289 ಕಟ್ಟಡಗಳನ್ನು ಕೆಡವುವ ಕಾರ್ಯವನ್ನು ರೈಲ್‌ ಇನ್‌ಫ್ರಾಸ್ಟ್ರಕ್ಚರ್‌ ಡೆವಲಪ್‌ಮೆಂಟ್‌ ಕಂಪನಿ (ಕರ್ನಾಟಕ) ಲಿಮಿಟೆಡ್‌ (ಕೆ- ರೈಡ್‌) ಈಗಾಗಲೇ ಶುರು ಮಾಡಿದೆ. ಇನ್ನು ಮುಂದಿನ ಎರಡು ತಿಂಗಳಲ್ಲಿ ನಾಲ್ಕೂ ಮಾರ್ಗದ ಕಟ್ಟಡಗಖನ್ನು ಕೆಡವುವ ಕಾರ್ಯ ಮುಕ್ತಾಯವಾಗಿದೆ ಎಂದು ತಿಳಿದುಬಂದಿದೆ.

ಹೀಲಲಿಗೆಯನ್ನು ರಾಜಾನುಕುಂಟೆಗೆ ಸಂಪರ್ಕಿಸುವ ಕಾರಿಡಾರ್‌-4ರಲ್ಲಿ 140 ಕಟ್ಟಡ ನೆಲಸಮ ಮಾಡಲು ನಿರ್ಧರಿಸಲಾಗಿದೆ. ಕೆಂಗೇರಿಯಿಂದ ವೈಟ್‌ಫೀಲ್ಡ್‌ವರೆಗಿನ ಕಾರಿಡಾರ್‌-3 ಮತ್ತು ಮೆಜೆಸ್ಟಿಕ್‌ನಿಂದ ದೇವನಹಳ್ಳಿಗೆ ಸಂಪರ್ಕ ಕಲ್ಪಿಸುವ ಕಾರಿಡಾರ್‌-1ನಲ್ಲಿ ಕ್ರಮವಾಗಿ 135 ಮತ್ತು 85 ಕಟ್ಟಡಗಳ ಪೈಕಿ ಕೆಲವನ್ನು ಭಾಗಶಃ ಹಾಗೂ ಇನ್ನೂ ಕೆಲವನ್ನು ಸಂಪೂರ್ಣ ಕೆಡವಲು ತೀರ್ಮಾಣ ಮಾಡಲಾಗಿದೆ.

ಕೆ-ರೈಡ್‌ ನಿಲ್ದಾಣ, ಡಿಪೊ ಮತ್ತು ಹಳಿ ನಿರ್ಮಾಣಕ್ಕೆ ರೈಲ್ವೆ ಭೂಮಿ, ಸರ್ಕಾರಿ ಭೂಮಿ, ಅರಣ್ಯ ಭೂಮಿ ಮತ್ತು ಖಾಸಗಿ ಭೂಮಿಯನ್ನು ಒಳಗೊಂಡಿರುವ 233 ಹೆಕ್ಟೇರ್‌ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲಾಗುತ್ತಿದೆ. ಕಾರಿಡಾರ್‌-2ರ ಭಾಗ ಆಗಿರುವ ಮತ್ತಿಕೆರೆ ಮತ್ತು ಎಂಆರ್‌ ಜಯರಾಮ್‌ ಕಾಲೊನಿ ಭಾಗದಲ್ಲಿ ಒಂದು ಹೆಕ್ಟೇರ್‌ಗೂ ಹೆಚ್ಚು ಭಾಗ ಸ್ವಾಧೀನ ಪಡಿಸಿಕೊಳ್ಳಲಾಗುತ್ತಿದೆ.

ಇನ್ನು ಇಲ್ಲಿ ಎತ್ತರಿಸಿದ ಮಾರ್ಗದಲ್ಲಿ ರೈಲು ಸಂಚರ ಮಾಡುತ್ತಿದ್ದು, ಇಲ್ಲಿ 143 ಕಟ್ಟಡ ಮತ್ತು 650 ನಿವಾಸಿಗಳ ಮೇಲೆ ಪರಿಣಾಮ ಬೀರುತ್ತದೆ. ಎಲ್ಲಾ ಮನೆಗಳನ್ನು ನೆಲಸಮ ಮಾಡುವ ಅಗತ್ಯವಿಲ್ಲ. ಆದರೂ, ಮುಂಜಾಗ್ರತಾ ಕ್ರಮವಾಗಿ ಅಪಾಯವನ್ನು ತಡೆಯಲು ವಯಾಡಕ್ಟ್ ವಿಭಾಗಗಳ ನಿರ್ಮಾಣದ ಸಮಯದಲ್ಲಿ ನಿವಾಸಿಗಳನ್ನು ತಾತ್ಕಾಲಿಕವಾಗಿ ಸ್ಥಳಾಂತರ ಮಾಡಲಾಗುತ್ತದೆ ಎಂದು ತಿಳಿಸಿದೆ.

ಮತ್ತೊಂದೆಡೆ ಕಟ್ಟಡ ಕಳೆದುಕೊಳ್ಳುವ ಮಾಲೀಕರಿಗೆ ಪ್ರದೇಶವನ್ನು ಅವಲಂಬಿಸಿ (ವಸತಿ/ವಾಣಿಜ್ಯ) 25,000 ರಿಂದ 45,000 ರೂಪಾಯಿ ರವರೆಗೆ ಪರಿಹಾರ ನೀಡಲಾಗುತ್ತದೆ. ಇದರಲ್ಲಿ ಅನಾನುಕೂಲ ಭತ್ಯೆ 70,000 ರೂಪಾಯಿ ಪ್ರತ್ಯೇಕವಾಗಿ ನೀಡಲಾಗುತ್ತದೆ ಎಂದು ತಿಳಿದುಬಂದಿದೆ

ಪರಿವರ್ತನಾ ಭತ್ಯೆ: 1000 ಚದರ ಅಡಿವರೆಗೆ ಪ್ರತಿ ಚದರಕ್ಕೆ 1,35,000 ರೂಪಾಯಿ, 1001-1500 ಚದರ ಅಡಿಗಳಿಗೆ 1,70,000 ರೂಪಾಯಿ ಮತ್ತು 1,500 ಚದರಕ್ಕಿಂತ ಹೆಚ್ಚಿದ್ದರೆ 2,05,000 ರೂಪಾಯಿ ಹಣ ಕೊಡಲಾಗುತ್ತದೆ.

ವಸತಿ ಬಾಡಿಗೆ ಆದಾಯ ಭತ್ಯೆ: 1000 ಚದರ ಅಡಿವರೆಗೆ ಪ್ರತಿ ಚದರಕ್ಕೆ 1,35,000 ರೂಪಾಯಿ, 1001-1500 ಚದರ ಅಡಿಗೆ 1,70,000 ರೂಪಾಯಿ, 1001 ಮತ್ತು 1,500 ಚದರ ಅಡಿಗಿಂತ ಹೆಚ್ಚಿದ್ದರೆ 2,05,000 ರೂಪಾಯಿ ಪರಿಹಾರ ನೀಡಲಾಗುತ್ತದೆ. ವಾಣಿಜ್ಯ ಬಾಡಿಗೆ ಆದಾಯ ಕಟ್ಟಡಗಳಿದ್ದರೆ 1000 ಚದರ ಅಡಿಗಳವರೆಗೆ 2,70,000 ರೂಪಾಯಿ ಭತ್ಯೆ, 1001-1500 ಚದರ ಅಡಿ ಇದ್ದರೆ 3,40,000 ರೂಪಾಯಿ ಮತ್ತು 1500 ಚದರಕ್ಕಿಂತ ಹೆಚ್ಚಿದ್ದರೆ 4,00,000 ರೂಪಾಯಿ ಕೊಡಲಾಗುತ್ತದೆ.

ವ್ಯಾಪಾರ ನಷ್ಟ ಭತ್ಯೆ: ಜಿಎಸ್‌ಟಿ ಪಾವತಿದಾರರಿಗೆ 85,000 ರಿಂದ 2,25,000 ರೂಪಾಯಿವರೆಗೆ ಭತ್ಯೆ ನೀಡಲಾಗುತ್ತದೆ. ಜಿಎಸ್‌ಟಿ ಪಾವತಿಸದ ಪ್ಯಾಪಾರಿಗಳಿಗೆ ಸರಾಸರಿ 60,000 ರೂಪಾಯಿ ಕೊಡಲಾಗುತ್ತದೆ ಎಂದು ತಿಳಿದುಬಂದಿದೆ. ಒಟ್ಟಿನಲ್ಲಿ ಇಷ್ಟಆಮೆಗತಿಯಲ್ಲಿ ಸಾಗುತ್ತಿದ್ದ ಬೆಂಗಳೂರು ಉಪನಗರ ರೈಲು ಕಾಮಗಾರಿ ಯೋಜನೆ ಇನ್ನಾದಾರೂ ಚುರುಕು ಪಡೆಯಲಿದ್ಯಾ ಎಂದು ಕಾದುನೋಡಬೇಕಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+