Bengaluru Suburban Rail: ಬೆಂಗಳೂರು ಉಪನಗರ ರೈಲು ಯೋಜನೆ ಕಾರಿಡಾರ್-2 ಕಾಮಗಾರಿಯ ಬಿಗ್ ಅಪ್ಡೇಟ್-ಮಾಹಿತಿ, ವಿವರ ಇಲ್ಲಿದೆ
Bengaluru Suburban Rail: ಬಹುನಿರೀಕ್ಷಿತ ಯೋಜನೆಯಾದ ಬೆಂಗಳೂರು ಉಪನಗರ ರೈಲು ಯೋಜನೆ ಕಾಮಗಾರಿ ಎಲ್ಲಿಗೆ ಬಂತು ಹಾಗೂ ಯಾವೆಲ್ಲ ಮಾರ್ಗಗಳಲ್ಲಿ ಎಷ್ಟು ಕಾಮಗಾರಿ ಮುಗಿದಿದೆ? ಇನ್ನೂ ಯಾವೆಲ್ಲಾ ಮಾರ್ಗಗಲ್ಲಿ ಆರಂಭವಾಗಿದೆ ಹಾಗೂ ವೆಚ್ಚ ಎಷ್ಟು ಎಂಬ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ತಿಳಿಯಿರಿ.
ಕೆ-ರೈಡ್ (ಕರ್ನಾಟಕ ರೈಲ್ ಇನ್‌ಫ್ರಾಸ್ಟ್ರಕ್ಚರ್ ಡೆವಲಪ್‌ಮೆಂಟ್ ಲಿಮಿಟೆಡ್ ಕಂಪನಿ) ಮಲ್ಲಿಗೆ ಮಾರ್ಗದಲ್ಲಿ ಉಳಿದ ನಾಲ್ಕು ಉಪನಗರ ರೈಲು ನಿಲ್ದಾಣಗಳ ನಿರ್ಮಾಣಕ್ಕಾಗಿ ಟೆಂಡರ್‌ಗಳನ್ನು ಆಹ್ವಾನಿಸಿದೆ. ಯಶವಂತಪುರ, ಶೆಟ್ಟಿಹಳ್ಳಿ, ಮ್ಯಾದರಹಳ್ಳಿ ಮತ್ತು ಚಿಕ್ಕಬಾಣಾವರ ಮಾರ್ಗದಲ್ಲಿ ರೈಲು ನಿಲ್ದಾಣಗಳ ನಿರ್ಮಾಣ ಕಾಮಗಾರಿಗೆ ಟೆಂಡರ್‌ಗಳನ್ನು ಆಹ್ವಾನಿಸಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಜೂನ್ 15ರಂದು, ಕಾರಿಡಾರ್ 2ರ ಎಂಟು ನಿಲ್ದಾಣಗಳಿಗೆ ಟೆಂಡರ್ ಕರೆಯಲಾಯಿತು, ಅವುಗಳು ಬೆನ್ನಿಗಾನಹಳ್ಳಿ, ಕಸ್ತೂರಿ ನಗರ, ಸೇವಾ ನಗರ, ಬಾಣಸವಾಡಿ, ನಾಗವಾರ, ಕನಕ ನಗರ, ಹೆಬ್ಬಾಳ ಮತ್ತು ಮತ್ತಿಕೆರೆ ಆಗಿವೆ.
ಸುಮಾರು 25.57 ಕಿ.ಮೀ ಉದ್ದದ ಕಾರಿಡಾರ್-2 859.97 ಕೋಟಿ ರೂಪಾಯಿಗಳ ಯೋಜನೆ ಎಂದು ಅಂದಾಜಿಸಲಾಗಿದೆ. ಇದನ್ನು ಎರಡು ಪ್ಯಾಕೇಜ್‌ಗಳಾಗಿ ವಿಂಗಡಿಸಲಾಗಿದೆ. ಬೈಯ್ಯಪನಹಳ್ಳಿ-ಲೊಟ್ಟೆಗೊಲ್ಲಹಳ್ಳಿ ಮತ್ತು ಲೊಟ್ಟೆಗೊಲ್ಲಹಳ್ಳಿ-ಚಿಕ್ಕಬಾಣಾವರ ಎಂದು ವಿಂಗಡಿಸಲಾಗಿದೆ.
ಟೆಂಡರ್‌ನ ವ್ಯಾಪ್ತಿಯು ಪ್ರವೇಶ/ನಿರ್ಗಮನ ದ್ವಾರಗಳು, ಸೇತುವೆಗಳ ಮೇಲಿನ ಉಕ್ಕಿನ ಸಲಾಕೆಗಳು, ಮೇಲ್ಛಾವಣಿಯ ರಚನೆಗಳು ಇನ್ನಿತರ ಇಂಜಿನಿಯರಿಂಗ್ ಕೆಲಸಗಳು ಈ ಕಾಮಗಾರಿಯಲ್ಲಿ ಒಳಗೊಂಡಿದೆ. ಇನ್ನು ಬೆಂಗಳೂರು ಉಪನಗರ ರೈಲು ಯೋಜನೆಯು ನಾಲ್ಕು ಕಾರಿಡಾರ್‌ಗಳು, 57 ನಿಲ್ದಾಣಗಳನ್ನು ಒಳಗೊಂಡಿರುತ್ತದೆ ಮತ್ತು 148.17 ಕಿಲೋ ಮೀಟರ್ ವ್ಯಾಪಿಸಲಿದೆ ಎಂದು ಹೇಳಾಗುತ್ತಿದೆ.
ನಾಲ್ಕು ಕಾರಿಡಾರ್‌ಗಳ ವಿವರ
* ಸಂಪಿಗೆ (ಕಾರಿಡಾರ್ 1): ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಸಂಪರ್ಕಿಸುವ ಕೆಎಸ್‌ಆರ್ ಬೆಂಗಳೂರು-ದೇವನಹಳ್ಳಿ ಇರಲಿದ್ದು, ಇದರ ದೂರ 41 ಕಿಲೋ ಮೀಟರ್ ಆಗಿದೆ.
* ಮಲ್ಲಿಗೆ (ಕಾರಿಡಾರ್ 2): ಬೈಯಪ್ಪನಹಳ್ಳಿ-ಚಿಕ್ಕಬಾಣಾವರ (25.14 ಕಿ.ಮೀ.)
* ಪಾರಿಜಾತ (ಕಾರಿಡಾರ್ 3) ಕೆಂಗೇರಿಯಿಂದ ವೈಟ್‌ಫೀಲ್ಡ್‌ವರೆಗೆ (35.52 ಕಿ.ಮೀ.)
* ಕನಕ (ಕಾರಿಡಾರ್ 4): ಹೀಲಳಿ-ರಾಜನಕುಂಟೆ (46.24 ಕಿ.ಮೀ.)
ಪ್ರಸ್ತುತ, ನಿಗಧಿಪಡಿದಿ ನಾಲ್ಕು ಕಾರಿಡಾರ್‌ಗಳಲ್ಲಿ ಚಿಕ್ಕಬಾಣಾವರದಿಂದ ಬೈಯಪ್ಪನಹಳ್ಳಿಯವರೆಗೆ ಹಾದು ಹೋಗುವ ಮಲ್ಲಿಗೆ ಮಾರ್ಗದಲ್ಲಿ ಮಾತ್ರ ಕಾಮಗಾರಿ ಪ್ರಗತಿಯಲ್ಲಿದೆ. ಬೆಂಗಳೂರು ಉಪನಗರ ರೈಲು ಯೋಜನೆಯು ರೈಲು ಆಧಾರಿತ ಕ್ಷಿಪ್ರ ಸಾರಿಗೆ ವ್ಯವಸ್ಥೆಯನ್ನು ಹೊಂದಿರಲಿದ್ದು, ಈ ಮೂಲಕ ಬೆಂಗಳೂರನ್ನು ಅದರ ಉಪಗ್ರಹ ಟೌನ್‌ಶಿಪ್‌ಗಳು, ಉಪನಗರಗಳು ಮತ್ತು ಸುತ್ತಮುತ್ತಲಿನ ಗ್ರಾಮೀಣ ಪ್ರದೇಶಗಳಿಗೆ ಸಂಪರ್ಕಿಸುತ್ತದೆ ಎನ್ನಲಾಗುತ್ತಿದೆ.
ಯಾವಾಗ ಮುಕ್ತಾಯ?: ಜೂನ್ 2022ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟಿಸಿದ ಬಿಎಸ್‌ಆರ್‌ಪಿ ಯೋಜನೆಯು ಇದೀಗ ಕರ್ನಾಟಕ ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ.ಪಾಟೀಲ್ ಅವರು ಇದರ ಕಾಮಗಾರಿಯ ಜವಾಬ್ದಾರಿಯನ್ನು ಹೊತ್ತಿದ್ದಾರೆ. ಇನ್ನು ಎಂ.ಬಿ.ಪಾಟೀಲ್ ಅವರು ಈ ಕಾಮಗಾರಿಯನ್ನು ಪೂರ್ಣಗೊಳಿಸಲು ಡಿಸೆಂಬರ್ 2027ರ ಗಡುವನ್ನು ನಿಗದಿಪಡಿಸಿದ್ದಾರೆ. ಯೋಜನೆಯ ಅಂದಾಜು ವೆಚ್ಚ 15,767 ಕೋಟಿ ರೂಪಾಯಿ ವೆಚ್ಚ ಆಗಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.











Click it and Unblock the Notifications