Bengaluru Suburban rail: ಈ ಮಾರ್ಗಗಳಲ್ಲಿ ನಿಲ್ದಾಣಗಳ ನಿರ್ಮಾಣ ಕಾಮಗಾರಿ ಎಲ್ಲಿಗೆ ಬಂತು?
ಬೆಂಗಳೂರು, ಮೇ, 01: ಬೆಂಗಳೂರಿನಲ್ಲಿ ಬಹುನಿರೀಕ್ಷಿತ ಉಪನಗರ ರೈಲು ಯೋಜನೆಯ ಎರಡು ಹಂತದ ನಿಲ್ದಾಣಗಳ ನಿರ್ಮಾಣಕ್ಕೆ ರೆಸ್ಪಾನ್ಸ್ ಹೇಗಿದೆ ಎನ್ನುವ ಮಾಹಿತಿಯನ್ನು ಇಲ್ಲಿದೆ ತಿಳಿಯಿರಿ.
ಬೆಂಗಳೂರು ಉಪನಗರ ರೈಲು ಯೋಜನೆಯ ಕಾರಿಡಾರ್-2 ಮಾರ್ಗದಲ್ಲಿ ನಿಲ್ದಾಣಗಳ ನಿರ್ಮಾಣಕ್ಕಾಗಿ ಕರೆದಿದ್ದ ಟೆಂಡರ್‌ನಲ್ಲಿ ಭಾಗವಹಿಸಲು ಬಿಡ್‌ದಾರರು ತೋರುತ್ತಿಲ್ಲ. ಆದ್ದರಿಂದ ಎರಡು ಭಾಗಗಳನ್ನಾಗಿ ಮಾಡಿ ಟೆಂಡರ್ ಕರೆಯಲು ಬಿಎಸ್‌ಆರ್‌ಪಿ ಮುಂದಾಗಿದೆ.

ಈಗಾಗಲೇ ತುಂಬಾ ಅಡೆತಡಗಳು ಉಂಟಾಗಿ ಹಾಗೂ ರಾಜ್ಯ, ಕೇಂದ್ರ ಸರ್ಕಾರಗಳ ಅಸಡ್ಡೆಯಿಂದ ಈ ಯೋಜನೆ ಆಮೆಗತಿಯಲ್ಲಿ ಸಾಗಿತ್ತು. ಬಳಿಕ ರೈಲ್ವೆ ಅಶ್ವಿನಿ ವೈಷ್ಣವ್ ಅವರು ಈ ಉಪನಗರ ರೈಲು ಕಾಮಗಾರಿಯನ್ನು ಆದಷ್ಟು ಬೇಗ ಮುಗಿಸಿ ಎಂದು ರಾಜ್ಯ ಸರ್ಕಾರಕ್ಕೆ ಸೂಚಿಸಿದ್ದರು.
ಚಿಕ್ಕಬಾಣಾವರ-ಬೆನ್ನಿಗಾನಹಳ್ಳಿವರೆಗೆ 25 ಕಿಲೋ ಮೀಟರ್ ದೂರದ ಕಾರಿಡಾರ್ (ಮಲ್ಲಿಗೆ ಮಾರ್ಗ) ಇದಾಗಿದೆ. ಅದರಲ್ಲಿ 16.5 ಕಿಲೋ ಮೀಟರ್ ನೆಲಮಟ್ಟದಲ್ಲಿದ್ದು, 8.5 ಕಿಲೋ ಮೀಟರ್‌ನಷ್ಟು ಎತ್ತರಿಸಿದ (ಎಲಿವೆಟೆಡ್) ಮಾರ್ಗವನ್ನು ಹೊಂದಿದೆ. 14 ನಿಲ್ದಾಣಗಳು ನಿರ್ಮಾಣ ಆಗಬೇಕಿದ್ದು, ಅದಕ್ಕಾಗಿ ಉಪನಗರ ರೈಲು ಯೋಜನೆಯನ್ನು ಅನುಷ್ಠಾನಗೊಳಿಸುತ್ತಿರುವ ಕೆ-ರೈಡ್ ಟೆಂಡರ್ ಕರೆದಿತ್ತು.
ಬಿಡ್‌ದಾರರಿಂದ ಸರಿಯಾಗಿ ಪ್ರತಿಕ್ರಿಯೆ ಬಾರದಿರುವುದರಿಂದ ಟೆಂಡರ್ ರದ್ದುಪಡಿಸಲಾಗಿದೆ. ಎತ್ತರಿಸಿದ ಮಾರ್ಗಗಳಲ್ಲಿ 6 ನಿಲ್ದಾಣಗಳಿಗೆ ಮತ್ತು ನೆಲಮಟ್ಟದ 8 ನಿಲ್ದಾಣಗಳಿಗೆ ಪ್ರತ್ಯೇಕ ಟೆಂಡರ್ ಕರೆಯಲು ತೀರ್ಮಾಣ ಮಾಡಲಾಗಿದೆ. ರೈಲ್ವೆ ಮಂಡಳಿಯ ಅನುಮೋದನೆಗಾಗಿ ಕಾಯುತ್ತಿದ್ದೇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ ಅಂತಾ ಪ್ರಜಾವಾಣಿ ವರದಿ ಮಾಡಿದೆ.
ಚಿಕ್ಕಬಾಣವರ, ಮ್ಯಾಡರಹಳ್ಳಿ, ಶೆಟ್ಟಿಹಳ್ಳಿ, ಜಾಲಹಳ್ಳಿ, ಯಶವಂತಪುರ ನಿಲ್ದಾಣಗಳು ನಿರ್ಮಾಣಗೊಂಡು ಸಿಗ್ನಲಿಂಗ್ ಸೇರಿದಂತೆ ಮತ್ತಿತರ ತಾಂತ್ರಿಕ ಕಾರ್ಯಗಳು ಪೂರ್ಣ ಆದರಷ್ಟೇ ಉಪನಗರ ಯೋಜನೆಯ ಮೊದಲ ರೈಲು ಸಂಚಾರ ಮಾಡಲಿದೆ. ಕಾರಿಡಾರ್-2ರಲ್ಲಿ 2025ರ ಡಿಸೆಂಬರ್‌ವೊಳಗೆ ಚಿಕ್ಕಬಾಣವರ-ಯಶವಂತಪುರ ನಡುವೆ 7.4 ಕಿ.ಮೀ. ಮಾರ್ಗದಲ್ಲಿ ರೈಲು ಸಂಚಾರವನ್ನು ಶುರುವಾಗುವಂತೆ ಕೆ-ರೈಡ್ ಗುರಿ ಇಟ್ಟುಕೊಂಡಿದೆ. ಪ್ರಾಥಮಿಕ ಹಂತದ ಕಾಮಗಾರಿಗಳು ಬಹುತೇಕ ಪೂರ್ಣವಾಗಿದೆ. ಆದರೆ, ಹಳಿ ಅಳವಡಿಸುವ, ವಿದ್ಯುದೀಕರಣ ಕಾರ್ಯಗಳು ಆಗಿಲ್ಲ.
ಶೀಘ್ರದಲ್ಲೇ ಹಳಿ ಅಳವಡಿಕೆ, ವಿದ್ಯುದೀಕರಣ ಕಾರ್ಯಗಳಿಗೆ ಟೆಂಡರ್ ಕರೆಯಲಾಗುತ್ತದೆ. 7.4 ಕಿ.ಮೀಗಷ್ಟೇ ಅಲ್ಲದೆ, ಎಲ್ಲ 25 ಕಿ.ಮೀಟರ್ ಒಂದೇ ಟೆಂಡರ್ ಕರೆಯಲಾಗುತ್ತದೆ. ಲೋಕಸಭಾ ಚುನಾವಣೆಯ ನೀತಿ ಸಂಹಿತೆಯಿಂದ ಟೆಂಡರ್‌ಗಳನ್ನು ಕರೆಯಲು ಆಗಿರಲಿಲ್ಲ. ಚುನಾವಣೆ ಮುಗಿದ ಕೋಡಲೇ ಒಂದೊಂದೇ ಟೆಂಡರ್ ಪ್ರಕ್ರಿಯೆಗಳು ನಡೆಯಲಿವೆ.
ಹಳಿ ಅಳವಡಿಸುವ ಕಾರ್ಯ ಶುರುವಾದ ಮೇಲೆ ಸಿಗ್ನಲಿಂಗ್ ಮತ್ತು ಟೆಲಿಕಮ್ಯುನಿಕೇಶನ್ ಟೆಂಡರ್, ರೋಲಿಂಗ್ ಸ್ಟಾಕ್ (ಕೋಚ್‌ಗಳು) ಟೆಂಡರ್ ಪ್ರಕ್ರಿಯೆ ಆರಂಭಗೊಳ್ಳಲಿದೆ. ಮುಂದಿನ ವರ್ಷ ಡಿಸೆಂಬರ್‌ವೊಳಗೆ ಚಿಕ್ಕಬಾಣಾವಾರ-ಯಶವಂತಪುರ ನಡುವೆ ಹಾಗೂ 2026ರ ಜೂನ್ ಒಳಗೆ ಯಶವಂತಪುರ-ಬೆನ್ನಿಗಾನಹಳ್ಳಿ ನಡುವೆ (17.5 ಕಿ.ಮೀ) ಉಪನಗರ ರೈಲು ಸಂಚರಿಸಲಿದೆ ಎಂದು ಕೆ-ರೈಡ್ ಅಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಕಾರಿಡಾರ್-2ರಲ್ಲಿ 2025ರ ಡಿಸೆಂಬರ್ ಒಳಗೆ ಉಪನಗರ ರೈಲು ಸಂಚಾರ ಆರಂಭ ಆಗಲಿದೆ ಎಂದು ಅಧಿಕಾರಿಗಳು ಭರವಸೆ ಭರವಸೆ ನೀಡುತ್ತಿದ್ದಾರಷ್ಟೇ. ಪಿಲ್ಲರ್ ಗರ್ಡರ್ ಹಳಿ ಅಳವಡಿಸಿದ ಕೂಡಲೇ ರೈಲು ಸಂಚಾರ ಆರಂಭಿಸಲು ಆಗುವುದಿಲ್ಲ. ಸ್ಟೇಷನ್ ನಿರ್ಮಾಣಕ್ಕೆ ಇನ್ನೂ ಟೆಂಡರ್ ಆಗಿಲ್ಲ. ಸ್ಷೇಷನ್ ನಿರ್ಮಾಣವಾದ ಮೇಲೆ ಸಿಗ್ನಲಿಂಗ್ ಮತ್ತು ಟೆಲಿಕಮ್ಯುಮಿಕೇಷನ್ ಕಾರ್ಯಗಳಾಗಬೇಕು ಎಂದು ಸಿಟಿಜನ್ಸ್ ಫಾರ್ ಸಿಟಿಜನ್ಸ್ ಸಂಸ್ಥಾಪಕ ತಿಳಿಸಿದ್ದಾರೆ ಎಂದು ಹೇಳಿದ್ದಾರೆ.
ರೈಲು ಕೋಚ್‌ಗಳಿಗೆ (ರೋಲಿಂಗ್ ಸ್ಟಾಕ್) ಟೆಂಡರ್ ಆದ ಮೇಲೆ ಕಂಪನಿಗಳು ಕೋಚ್‌ಗಳನ್ನು ತಯಾರು ಮಾಡಿ ಪೂರೈಸುತ್ತದೆ. ಹಾಗಾಗಿ ಇವತ್ತು ಆದೇಶ ಮಾಡಿದರೆ, ನಾಳೆ ಅವು ಅಭ್ಯ ಆಗುವುದಿಲ್ಲ. ಚುನಾವಣೆಗೂ ಕಾಮಗಾರಿಗಳಿಗೂ ಸಂಬಂಧವಿಲ್ಲದಿದ್ದರೂ ಟೆಂಡರ್ ಪ್ರಕ್ರಿಯೆಗಳು ನಡೆದಿಲ್ಲ ಎಂದು ತಿಳಿಸಿದರು.
2 ಹಂತದ ಮಾರ್ಗಗಳ ವಿವರ: ಕಾರಿಡಾರ್, ಚಿಕ್ಕಬಾಣವರ, ಮ್ಯಾಡರಹಳ್ಳಿ, ಶೆಟ್ಟಿಹಳ್ಳಿ, ಜಾಲಹಳ್ಳಿ, ಯಶವಂತಪುರ, ಲೊಟ್ಟೆಗೊಲ್ಲಹಳ್ಳಿ, ಹೆಬ್ಬಾಳ, ಕನಕನಗರ, ನಾಗಾವರ, ಕಾವೇರಿನಗರ, ಬಾಣಸವಾಡಿ, ಸೇವಾನಗರ, ಕಸ್ತೂರಿನಗರ, ಬೆನ್ನಿಗಾನಹಳ್ಳಿ ಮಾರ್ಗಗಳು. ಒಟ್ಟಿನಲ್ಲಿ ಈ ಬಹುನಿರೀಕ್ಷಿತ ಉಪನಗರ ರೈಲು ಯೋಜನೆ ಕಾಮಗಾರಿ ಯಾವಾಗ ಮುಗಿಯಲಿದೆ ಎನ್ನುವುದೇ ಇದೀಗ ಎಲ್ಲರಲ್ಲೂ ಕಾಡುವ ಪ್ರಶ್ನೇಯಾಗಿದೆ.












Click it and Unblock the Notifications