Bengaluru Sub Urban Rail: ಚಿಕ್ಕಬಾಣಾವರ-ಯಶವಂತಪುರ ಮಾರ್ಗ ಸಂಚಾರದ ಅಪ್ಡೇಟ್
ಬೆಂಗಳೂರು, ಮೇ 11: ದಶಕಗಳಿಂದಲೂ ಸದ್ದು ಮಾಡುತ್ತಿರುವ ಬೆಂಗಳೂರು ಉಪನಗರ ರೈಲು ಯೋಜನೆಯ ಮೊದಲ ವಿಭಾಗದ ಕಾಮಗಾರಿ ಪೂರ್ಣಗೊಳ್ಳುವ ಕಾಲ ಸನ್ನಿಹಿತವಾಗಿದೆ. ವಿಳಂಬದ ಹೊರತಾಗಿಯುವ ಇತ್ತೀಚಿನ ವರ್ಷಗಳಲ್ಲಿ ಚುರುಕು ಪಡೆದ ಯೋಜನೆಯ ಕಾಮಗಾರಿ ಅಂತಿಮ ಹಂತಕ್ಕೆ ಬಂದಿದೆ. ಒಂದು ಮಾರ್ಗವು ಇನ್ನೇನು ಕಾರ್ಯಾಚರಣೆಗೆ ಮುಕ್ತಗೊಳ್ಳಲಿದೆ.
ನಮ್ಮ ಮೆಟ್ರೋ, ಬಿಎಂಟಿಸಿ ಜೊತೆಗೆ ಬೆಂಗಳೂರಿನಲ್ಲಿ ಮತ್ತೊಂದು ಸಾರ್ವಜನಿಕ ಸಾರಿಗೆ ವ್ಯವಸ್ಥೆ ಇದಾಗಿದೆ. ಬೆಂಗಳೂರು ಉಪನಗರ ರೈಲು ಯೋಜನೆ (BSRPಪಿ) ನಿಗದಿಯಂತೆ ಕಾರ್ಯರೂಪಕ್ಕೆ ಬರದೇ ವಿಳಂಬವಾಯಿತು ಎಂದು 'ಡಿಎಚ್' ವರದಿ ಮಾಡಿದೆ.

ಉಪನಗರ ರೈಲು ಯೋಜನೆ ಕುರಿತು ಮೂಲ ಸೌಕರ್ಯ ಅಭಿವೃದ್ಧಿ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ ಮತ್ತು ಕೆ-ರೈಡ್‌ನ ವ್ಯವಸ್ಥಾಪಕ ನಿರ್ದೇಶಕಿ ಮಂಜುಳಾ ಎನ್ ಅವರು ಪ್ರತಿಕ್ರಿಯಿಸಿದ್ದಾರೆ. ನಾಲ್ಕು ಕಾರಿಡಾರ್‌ಗಳ ಉಪನಗರ ರೈಲು ಯೋಜನೆಗೆ 2022ರ ಮಧ್ಯಭಾಗ (ಜೂನ್) ದಲ್ಲಿ ಕಾಮಗಾರಿ ಆರಂಭಕ್ಕೆ ಅಡ್ಡಿಗಲ್ಲು ಸ್ಥಾಪನೆ ನೆರವೇರಿಸಲಾಯಿತು.
ಇದುವರೆಗೆ 2 ಕಾರಿಡಾರ್‌ಗೆ ಟೆಂಡರ್ ಆಹ್ವಾನ
ಅಲ್ಲಿಂದ ಇಲ್ಲಿಯವರೆಗೆ ನಾಲ್ಕು ಕಾರಿಡಾರ್‌ಗಳಲ್ಲಿ ಎರಡಕ್ಕೆ ಕಾರಿಡಾರ್ ಕಾಮಗಾರಿ ನಿರ್ಮಾಣಕ್ಕೆ ಮಾತ್ರವೇ ಟೆಂಡರ್ ಕರೆಯಲಾಗಿದೆ. ಎಲ್ಲಾ ಅಂದುಕೊಂಡಂತೆ ಆಗಿದ್ದರೆ ಇಷ್ಟೊತ್ತಿಗೆ ಒಂದು ಒಂದು ವಿಭಾಗದಲ್ಲಿ ಸಂಚಾರ ಆರಂಭವಾಗುತ್ತಿತ್ತು. ಆದರೆ ಕೊರೋನಾ ಸಾಂಕ್ರಾಮಿಕದಿಂದ ಯೋಜನೆ ವಿಳಂಬವಾಯಿತು. ಭೂಮಿ ಹಸ್ತಾಂತರ ಪ್ರಕ್ರಿಯೆ, ರೈಲ್ವೆ ಮತ್ತು ಕೆರೈಡ್ ಮಧ್ಯದ ಭಿನ್ನಾಭಿಪ್ರಾಯ ಕಾರಣದಿಂದ ಯೋಜನೆಗೆ ಬ್ರೇಕ್ ಬಿದ್ದಿತ್ತು.
ಬಿಎಸ್‌ಆರ್‌ಪಿ ಕಾರಿಡಾರ್-2ರ ಕಾಮಗಾರಿಗೆ ಚುರುಕು ನೀಡಲಾಗಿದೆ. ಇದು ಚಿಕ್ಕಬಾಣಾವರದಿಂದ ಯಶವಂತಪುರದವರೆಗೆ ಒಟ್ಟು 7.4-ಕಿಮೀ (ವಿಭಾಗ 4) ಇದೆ. ಈ ಸೆಕ್ಸನ್ ಇದೇ ಮುಂದಿನ ವರ್ಷ 2025 ಡಿಸೆಂಬರ್ ಒಳಗೆ ಮುಕ್ತಾಯಗೊಂಡು ಕಾರ್ಯಾರಂಭಗೊಳ್ಳಲಿದೆ. ಇನ್ನೂ ಈ ಯೋಜನೆಯನ್ನು 2027ರ ಡಿಸೆಂಬರ್ ಹೊತ್ತಿಗೆ ಪೂರ್ಣಗೊಳಿಸಲು ನೈಋತ್ಯ ರೈಲ್ವೆ ವಲಯ-ಕೆರೈಡ್ ಅಧಿಕಾರಿಗಳು ನಿರ್ಧರಿಸಿದ್ದಾರೆ.

ಕೋವಿಡ್ ನಿಂದ ಯೋಜನೆಗೆ ವಿಳಂಬ
ಕೊರೊನಾ ಮೊದಲ ಅಲೆಯಲ್ಲಿ ದೇಶವೇ ಲಾಕ್‌ಡೌನ್ ಆಗಿತ್ತು. ಇನ್ನೂ ನಂತರ ಎರಡು ಕೊರೊನಾ ಅಲೆಗಳ ಕಾರಣದಿಂದಾಗಿ ಯೋಜನೆ ಕೆಲಸಗಳು ಒಂದು ವರ್ಷ ತಡವಾಗಿ ಆರಂಭವಾದವು. ರೈಲ್ವೆ ಭೂಮಿ ಹಸ್ತಾಂತರ ಪ್ರಕ್ರಿಯೆ, ಮಧ್ಯಸ್ಥಗಾರ ಜತೆಗಿನ ಒಂದಷ್ಟು ಸಮಸ್ಯೆ ಇನ್ನಿತರ ಕಾರಣಗಳು ಯೋಜನೆ ವಿಳಂಬಕ್ಕೆ ಕಾರಣವಾದವು. ಸದ್ಯ ಯೋಜನೆಯನ್ನು ಸರ್ಕಾರ ಕೂಲಂಕುಷವಾಗಿ ಮೇಲ್ವಿಚಾರಣೆ ಮಾಡುತ್ತಿದೆ. ಕಾಲ ಕಾಲಕ್ಕೆ ಅಗತ್ಯ ನಿರ್ದೇಶನ ನೀಡುತ್ತಿದೆ.
ಒಟ್ಟು ನಾಲ್ಕು ಕಾರಿಡಾರ್ ಪೈಕಿ ಒಂದು ಕಾರಿಡಾರ್ ಕಾಮಗಾರಿ ನಡೆಯುತ್ತಿವೆ. ಕಾರಿಡಾರ್-4ರ ಸಿವಿಲ್ ಕೆಲಸಗಳ ಆರಂಭಕ್ಕಾಗಿ 2023 ಡಿಸೆಂಬರ್ ನಲ್ಲಿ ಟೆಂಡರ್ ನೀಡಲಾಗಿದೆ. ರೈಲ್ವೆ ಇಲಾಖೆಯು ಕೆ-ರೈಡ್‌ಗೆ ಇದೇ ವರ್ಷ ಏಪ್ರಿಲ್ ತಿಂಗಳಲ್ಲಿ ಹಸ್ತಾಂತರ ಮಾಡಿತು.
ನಿರ್ಮಾಣ ಪೂರ್ವ ಕಾರ್ಯಗಳು ಪೂರ್ಣ
ಭೂಮಿ ಸಿಗುತ್ತಿದ್ದಂತೆ ಗುತ್ತಿಗೆ ಪಡೆದ ಸಂಸ್ಥೆಯು ಇಲ್ಲಿ ಸಮೀಕ್ಷೆ, ಡ್ರೋನ್ ವಿಡಿಯೋ, ಲೈಟ್ ಡಿಟೆಕ್ಷನ್, ರೇಂಜಿಂಗ್ ಸರ್ವೆ ಮತ್ತು ಜಿಪಿಆರ್ ಹಾಗೂ ಇನ್ನಿತರ ನಿರ್ಮಾಣ ಪೂರ್ವ ಕಾರ್ಯ ಪೂರ್ಣಗೊಳಿಸಿದ್ದಾರೆ. ಕಾಮಗಾರಿ ಆರಂಭವಾಗಿದೆ. ಹಲವು ಕಾಮಗಾರಿಗಳು ಪ್ರಗತಿಯಲ್ಲಿವೆ ಎಂದು ಮೂಲಗಳು ತಿಳಿಸಿವೆ.
ನಡೆಯುತ್ತಿರುವ ಕಾರಿಡಾರ್ ನಲ್ಲಿ ಸುಮಾರು ಶೇ. 52ರಷ್ಟು ಎಸ್ ಆಂಡ್ ಟಿ ಯುಟಿಲಿಟಿ ಶಿಫ್ಟಿಂಗ್ ಕೆಲಸ ಪೂರ್ಣವಾಗಿದೆ. ಎಲೆಕ್ಟ್ರಿಕಲ್ ಯುಟಿಲಿಟಿ ಶಿಫ್ಟಿಂಗ್ ಟೆಂಡರ್ ನೀಡಲಾಗಿದೆ. ಬಿಡ್ ದಾಖಲೆಗಳನ್ನು ಫಂಡಿಂಗ್ ಏಜೆನ್ಸಿಗೆ ನೀಡಲಾಗಿದೆ. ಕಾರಿಡಾರ್-1ಕ್ಕೆ ಅನುಮೋದನೆ ಗಾಗಿ ನೈಋತ್ಯ ರೈಲ್ವೆ ಇಲಾಖೆಗೆ ಸಲ್ಲಿಸಲಾಗಿದೆ.
ಯೋಜನೆಗೆ ಸರ್ಕಾರದಿಂದ ಚುರುಕು
ಮುಂದಿನ ದಿನಗಳಲ್ಲಿ ಉಪನಗರ ರೈಲು ಯೋಜನೆ ಚುರುಕು ನೀಡಲು ಸಜ್ಜಾಗಿರುವ ರಾಜ್ಯ ಸರ್ಕಾರ ಕಾರಿಡಾರ್ 2 ಅನ್ನು 2026ರ ಜೂನ್ ಅಂತ್ಯಕ್ಕೆ, ಕಾರಿಡಾರ್ -4 ಅನ್ನು 2026ರ ಡಿಸೆಂಬರ್ ಒಳಗೆ, ಉಳಿದ ಎರಡು ಯೋಜನೆಗಳನ್ನು 2027 ರ ಅಂತ್ಯದ ಹೊತ್ತಿಗೆ ಪೂರ್ಣಗೊಳಿಸುವ ಗುರಿ ಹಾಕಿಕೊಳ್ಳಲಾಗಿದೆ. ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಈ ಯೋಜನೆಗೆ ಹಣ ಒದಗಿಸಿವೆ.
ಹೆಬ್ಬಾಳ ರೈಲು ನಿಲ್ದಾಣ: ಬಹು-ಮಾದರಿ ಸಾರಿಗೆ ಕೇಂದ್ರ
ಬೆಂಗಳೂರು ಉಪನಗರ ಯೋಜನೆಯಡಿ ನಿರ್ಮಾಣವಾಗುವ 'ಹೆಬ್ಬಾಳ ರೈಲು ನಿಲ್ದಾಣ'ವನ್ನು ಬಹು-ಮಾದರಿ ಸಾರಿಗೆ ಕೇಂದ್ರವಾಗಲಿದೆ. ಅಂದರೆ ಇಲ್ಲಿ ರೈಲು, ನಮ್ಮ ಮೆಟ್ರೋ ರೈಲು, ಬಸ್ ಡಿಪೋಗಳು ಹೀಗೆ ಎಲ್ಲವು ಇಲ್ಲಿ ಸಂಪರ್ಕಗೊಳ್ಳಲಿವೆ. ಈ ನಿಟ್ಟಿನಲ್ಲಿ ಸಾರಿಗೆ ಸಂಯೋಜನೆಯ ಪ್ಲಾನ್ ಮಾಡಿಕೊಳ್ಳಲಾಗಿದೆ.
ಬೆಂಗಳೂರು ನಗರ, ಯಶವಂತಪುರ, ಬೆನ್ನಿಗಾನಹಳ್ಳಿ ನಿಲ್ದಾಣಗಳನ್ನು ಮೆಟ್ರೋ, ರೈಲು ನಿಲ್ದಾಣಗಳು ಮತ್ತು ಬಸ್ ಡಿಪೋಗಳು / ನಿಲ್ದಾಣಗಳ ಇಲ್ಲಿ ಸಂಯೋಜನೆಗೊಳ್ಳಿವೆ. ಇದರಿಂದ ತಡೆರಹಿತ ಸಾರಿಗೆ ನೀಡಲು ಅವಕಾಶವಾಗಲಿದೆ ಎಂದು ರೈಲ್ವೆ ಇಲಾಖೆ ಯೋಜಿಸಿದೆ.
ಇತ್ತೀಚೆಗಷ್ಟೇ ಜಗಳ ದೂರಾದ ಬಳಿಕ ನೈಋತ್ಯ ರೈಲ್ವೆಯು ಕೆ-ರೈಡ್‌ಗೆ ಕನಕ ಕಾರಿಡಾರ್ ನಿರ್ಮಾಣಕ್ಕೆ ಒಟ್ಟು 115 ಭೂಮಿ ಹಸ್ತಾಂತರ ಮಾಡಲು ಒಪ್ಪಿತ್ತು. ಅದರಂತೆ ಭೂಮಿ ಹಸ್ತಾಂತರದ ಪ್ರಕ್ರಿಯೆಗಳು ಪೂರ್ಣಗೊಂಡಿವೆ. ಇದರ ನಂತರವೇ ಸರ್ವೇ ಕಾರ್ಯ ನಡೆಸಲಾಗಿದೆ.












Click it and Unblock the Notifications