Street Lights: ಬೆಂಗಳೂರು ಬೀದಿ ದೀಪ ನಿರ್ವಹಣೆಯಲ್ಲಿ ಲೋಪ! 2 ಗುತ್ತಿಗೆ ಕಂಪನಿಗಳಿಗೆ ₹27 ಲಕ್ಷ ದಂಡ

ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರ ( ಜಿಬಿಎ) ವ್ಯಾಪ್ತಿಯಲ್ಲಿ ಇತ್ತೀಚೆಗೆ ಬೀದಿ ದೀಪಗಳ ಅಳವಡಿಕೆ, ನಿರ್ವಹಣೆಯಲ್ಲಿನ ಲೋಪ ಕುರಿತಂತೆ ಚರ್ಚೆ ಆಗಿತ್ತು. ಇದೀಗ ಕಾರ್ಯನಿರ್ವಹಿಸದಿರುವ ಬೀದಿ ದೀಪಗಳನ್ನು ಗುರುತಿಸಿ, ಸಾರ್ವಜನಿಕರ ಸುರಕ್ಷತೆ, ಸುಗಮ ಸಂಚಾರ ಹಾಗೂ ರಾತ್ರಿ ವೇಳೆಯಲ್ಲಿ ಸಮರ್ಪಕ ಬೆಳಕಿನ ವ್ಯವಸ್ಥೆ ಖಚಿತಪಡಿಸಿಕೊಳ್ಳುವ ನಿಟ್ಟಿನಲ್ಲಿ ತಕ್ಷಣವೇ ದುರಸ್ಥಿ ಕಾರ್ಯ ಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಗುತ್ತಿಗೆ ಸಂಸ್ಥೆಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಜೊತೆಗೆ ಎರಡು ಸಂಸ್ಥೆಗಳಿಗೆ ಬರೋಬ್ಬರಿ 27 ಲಕ್ಷ ರೂ. ದಂಡ ಸಹ ವಿಧಿಸಲಾಗಿದೆ.

ಬೆಂಗಳೂರು ಕೇಂದ್ರ ನಗರ ಪಾಲಿಕೆಯ ಮಾನ್ಯ ಆಯುಕ್ತ ಜಗದೀಶ್.ಜಿ ಹಾಗೂ ಅಭಿವೃದ್ಧಿ ಅಪರ ಆಯುಕ್ತರಾದ ವೆಂಕಟಾಚಲಪತಿ.ಆರ್ ರವರು ಕಳೆದ ವಾರ ರಾತ್ರಿ ಪ್ರಮುಖ ರಸ್ತೆಗಳು ಹಾಗೂ ವಿವಿಧ ಪ್ರದೇಶಗಳಿಗೆ ಭೇಟಿ ನೀಡಿದ್ದರು. ಬೀದಿ ದೀಪಗಳ ಕಾರ್ಯ ನಿರ್ವಹಣೆ ಖುದ್ದಾಗಿ ಪರಿಶೀಲಿಸಿದ್ದರು. ಈ ವೇಳೆ ಹಲವು ಬೀದಿ ದೀಪಗಳು ಕಾರ್ಯ ನಿರ್ವಹಿದಿರುವುದು ಕಂಡು ಬಂದಿತ್ತು ಎಂದು ಪಾಲಿಕೆ ಆಯುಕ್ತ ಜಗದೀಶ್.ಜಿ ಹೇಳಿದರು.

Bengaluru Street Lights

ಗುತ್ತಿಗೆ ಕಂಪನಿಗಳಿಗೆ ಸೂಕ್ತ ನಿರ್ವಹಣೆಗೆ ಸೂಚನೆ ನೀಡಿದ ಹೊರತಾಗಿಯೂ ನಿರ್ವಹಣಾ ಕಾರ್ಯದಲ್ಲಿ ಲೋಪ ಕಂಡು ಬಂದ ಹಿನ್ನೆಲೆ ಒಪ್ಪಂದದ ಷರತ್ತುಗಳನ್ವಯ ಸಂಬಂಧಪಟ್ಟ ಗುತ್ತಿಗೆ ಸಂಸ್ತೆಗಳ ವಿರುದ್ದ ದಂಡ ವಿಧಿಸಲಾಗಿದೆ. ಸಾರ್ವಜನಿಕರಿಗೆ ಯಾವುದೇ ರೀತಿಯ ತೊಂದರೆ ಉಂಟಾಗದಂತೆ ಬೀದಿ ದೀಪಗಳ ನಿರ್ವಹಣೆಯನ್ನು ಸಮರ್ಪಕವಾಗಿ ಕೈಗೊಳ್ಳುವುದು ಗುತ್ತಿಗೆ ಸಂಸ್ಥೆಗಳ ಜವಾಬ್ದಾರಿಯಾಗಿದೆ. ಬೀದಿ ದೀಪಗಳ ನಿರ್ವಹಣೆಯಲ್ಲಿ ನಿರ್ಲಕ್ಷ್ಯ ವಹಿಸಿದ ಗುತ್ತಿಗೆದಾರರಿಗೆ ದಂಡ ವಿಧಿಸುವ ಕ್ರಮ ಮುಂದುವರಿಸಲಾಗುವುದು ಎಂದರು.

1. M/s Effilume Pvt. Ltd. ಸಂಸ್ಥೆಗೆ 21.35 ಲಕ್ಷ ರೂ. ದಂಡ!

ಬೀದಿ ದೀಪಗಳ ನಿರ್ವಹಣೆಯಲ್ಲಿ ಲೋಪ ಕಂಡುಬಂದ ಹಿನ್ನೆಲೆಯಲ್ಲಿ M/s Effilume Pvt. Ltd. ಸಂಸ್ಥೆಗೆ ವಿವಿಧ ಹಂತಗಳಲ್ಲಿ ಒಟ್ಟು ರೂ.21,35,125/- ಗಳ ದಂಡ ವಿಧಿಸಲಾಗಿದೆ.

* 31-08-2026 ರಂದು ರೂ.1,00,000/- ಹಾಗೂ ರೂ.2,00,292/-
* 16-09-2026 ರಂದು ರೂ.8,46,846/-
* 22-09-2026 ರಂದು ರೂ.9,87,987/
ಒಟ್ಟು ರೂ.21,35,125/- ರೂಪಾಯಿ ದಂಡಿ ವಿಧಿಸಲಾಗಿದೆ.

2. M/s Esmart Energy Solutions ಸಂಸ್ಥೆಗೆ 6.44 ಲಕ್ಷ ರೂ.ದಂಡ

ನಗರದ ಬೀದಿ ದೀಪಗಳ ನಿರ್ವಹಣೆಯಲ್ಲಿ ಲೋಪ ಕಂಡುಬಂದ ಹಿನ್ನೆಲೆಯಲ್ಲಿ M/s Esmart Energy Solutions ಸಂಸ್ಥೆಗೆ ಒಟ್ಟು ರೂ.6,44,182/- ದಂಡ ವಿಧಿಸಲಾಗಿದೆ. 19-09-2026 ರಂದು 3,02,841 ರೂ, 22-09-2026 3,41,341 ರೂಪಾಯಿ ಸೇರಿ ಒಟ್ಟು 6,44,182 ರೂ. ದಂಡ ವಿಧಿಸಲಾಗಿದೆ. ಎರಡು ಸಂಸ್ಥೆಗಳಿಗೆ ಒಟ್ಟು ರೂ.27,79,307 ರೂ. ದಂಡ ವಿಧಿಸಲಾಗಿದೆ.

ಡಾರ್ಕ್ ಸ್ಪಾಟ್ ನಿವಾರಣೆಗೆ ಖಡಕ್ ಸೂಚನೆ

ಬೆಂಗಳೂರು ಕೇಂದ್ರ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಬೀದಿ ದೀಪಗಳು ಕಾರ್ಯ ನಿರ್ವಹಿಸದಿರುವ ಕಾರಣದಿಂದ ಯಾವುದೇ ಪ್ರದೇಶವು ಕತ್ತಲೆಯಿಂದ ಇರದಂತೆ ಅಗತ್ಯ ಕ್ರಮ ಕೈಗೊಳ್ಳಬೇಕು. ಕಾರ್ಯನಿರ್ವಹಿಸದಿರುವ ಬೀದಿ ದೀಪಗಳನ್ನು ಗುರುತಿಸಿ, ಅವುಗಳ ದುರಸ್ತಿಯನ್ನು ತ್ವರಿತವಾಗಿ ಪೂರ್ಣಗೊಳಿಸುವ ಮೂಲಕ Dark Spots ನಿವಾರಿಸಲು ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಗುತ್ತಿಗೆ ಸಂಸ್ಥೆಗಳಿಗೆ ಖಡಕ್ ಸೂಚನೆ ನೀಡಿದರು.

ರಾತ್ರಿ ವೇಳೆಯ ತಪಾಸಣೆಗೆ ಆದ್ಯತೆ

ಬೀದಿ ದೀಪಗಳ ನೈಜ ಸ್ಥಿತಿಗತಿಗಳನ್ನು ಪರಿಶೀಲಿಸಲು ರಾತ್ರಿ ವೇಳೆಯಲ್ಲಿಯೂ ತಪಾಸಣೆ ನಡೆಸಬೇಕು. ಮುಖ್ಯ ರಸ್ತೆಗಳು, ಉಪ ಮುಖ್ಯ ರಸ್ತೆಗಳು ಹಾಗೂ ವಾರ್ಡ್‌ಗಳ ರಸ್ತೆಗಳಲ್ಲಿನ ಬೀದಿ ದೀಪಗಳ ಕಾರ್ಯನಿರ್ವಹಣೆಯನ್ನು ಪರಿಶೀಲಿಸಿ, ದೋಷ ಕಂಡುಬಂದಲ್ಲಿ ಸ್ಥಳದಲ್ಲೇ ಕ್ರಮ ಕೈಗೊಳ್ಳಬೇಕು.

ಇನ್ನೂ ಸಾರ್ವಜನಿಕರಿಂದ ಬೀದಿ ದೀಪಗಳ ಕುರಿತು ಸ್ವೀಕರಿಸಲಾಗುವ ದೂರುಗಳಿಗೆ ತ್ವರಿತವಾಗಿ ಸ್ಪಂದಿಸಬೇಕು. ಬೀದಿ ದೀಪಗಳ ದುರಸ್ಥಿ ಕಾರ್ಯ ಪೂರ್ಣಗೊಳಿಸುವವರೆಗೆ ಅದರ ಮೇಲ್ವಿಚಾರಣೆ ನಡೆಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಆಯುಕ್ತರು ತಿಳಿಸಿದರು.

ನಿರ್ಲಕ್ಷ್ಯ ಮುಂದುವರಿದರೆ ಕಠಿಣ ಕ್ರಮ

ಬೀದಿ ದೀಪಗಳ ಸಮರ್ಪಕ ನಿರ್ವಹಣೆ, ಸಾರ್ವಜನಿಕರ ಸುರಕ್ಷತೆ ಮತ್ತು ನಗರದ ಮೂಲಸೌಕರ್ಯ ನಿರ್ವಹಣೆಯ ಪ್ರಮುಖ ಭಾಗವಾಗಿದೆ. ಆದ್ದರಿಂದ ಬೀದಿ ದೀಪ ನಿರ್ವಹಣೆ ಗುತ್ತಿಗೆ ಪಡೆದ ಸಂಸ್ಥೆಗಳು ತಮ್ಮ ಜವಾಬ್ದಾರಿಯನ್ನು ಸಮರ್ಪಕವಾಗಿ ನಿರ್ವಹಿಸಬೇಕು. ಮುಂದಿನ ದಿನಗಳಲ್ಲಿಯೂ ನಿರ್ವಹಣೆಯಲ್ಲಿ ಲೋಪ, ದುರಸ್ತಿಯಲ್ಲಿ ವಿಳಂಬ ಅಥವಾ ಕರ್ತವ್ಯದಲ್ಲಿ ನಿರ್ಲಕ್ಷ್ಯ ಕಂಡುಬಂದಲ್ಲಿ ಒಪ್ಪಂದದ ನಿಯಮಗಳನ್ವಯ ದಂಡ ಸೇರಿದಂತೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಕೇಂದ್ರ ನಗರ ಪಾಲಿಕೆಯ ಆಯುಕ್ತರಾದ ಶ್ರೀ ಜಗದೀಶ್.ಜಿ ರವರು ಸಂಬಂಧಪಟ್ಟ ಅಧಿಕಾರಿಗಳಿಗೆ ಹಾಗೂ ಗುತ್ತಿಗೆದಾರರಿಗೆ ಎಚ್ಚರಿಕೆ ನೀಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+