ಬೆಂಗಳೂರಿನಲ್ಲಿ 6 ಖಾಲಿ ಹುದ್ದೆಗಳಿಗೆ 48 ಗಂಟೆಗಳಲ್ಲಿ ಬಂದ ರೆಸ್ಯೂಮ್‌ಗಳೆಷ್ಟು ಗೊತ್ತಾ?
ದೇಶದಲ್ಲಿ ನಿರುದ್ಯೋಗ ಸಮಸ್ಯೆ ಕೂಡ ರಾಜಕೀಯ ವಸ್ತುವಾಗಿದೆ. ಸಮಸ್ಯೆ ಹೇಳಿಕೊಂಡು ವೋಟು ಪಡೆದುಕೊಳ್ಳುವ ನಾಯಕರು ನಂತರ ಈ ಸಮಸ್ಯೆ ಬಗ್ಗೆ ಗಂಭೀರವಾದ ಯೋಚನೆ ಕೂಡ ಮಾಡುವುದಿಲ್ಲ. ಬೆಂಗಳೂರಿನ ಕಂಪನಿಯೊಂದು ಉದ್ಯೋಗಕ್ಕೆ ಅರ್ಜಿ ಆಹ್ವಾನಿಸಿದ ಕೇವಲ 48 ಗಂಟೆಗಳ ಅವಧಿಯಲ್ಲಿ 3000 ಕ್ಕೂ ಹೆಚ್ಚು ರೆಸ್ಯೂಮ್‌ಗಳನ್ನು ಸ್ವೀಕರಿಸಿದೆ.
6 ಉದ್ಯೋಗಿಗಳ ನೇಮಕ ಮಾಡಿಕೊಳ್ಳಲು ಕಂಪನಿಯ ವೆಬ್‌ಸೈಟ್‌ನಲ್ಲಿ ಮಾಹಿತಿ ನೀಡಲಾಗಿತ್ತು. 48 ಗಂಟೆಗಳಲ್ಲಿ 3000ಕ್ಕೂ ಅಧಿಕ ಆಕಾಂಕ್ಷಿಗಳು ತಮ್ಮ ರೆಸ್ಯೂಮ್ ಅನ್ನು ಕಳುಹಿಸಿದ್ದಾರೆ. ಕೆಲಸಕ್ಕೆ ಬಂದ ರೆಸ್ಯೂಮ್ ಸಂಖ್ಯೆಯನ್ನು ಕಂಡು ಸ್ಟಾರ್ಟಪ್ ಸಂಸ್ಥಾಪಕ ಮತ್ತು ಸಿಇಒ ಆಘಾತಗೊಂಡಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಅವರು ಕಳವಳವನ್ನು ಹಂಚಿಕೊಂಡಿದ್ದಾರೆ. ಉದ್ಯೋಗ ಮಾರುಕಟ್ಟೆಯ ಸ್ಥಿತಿಯ ಬಗ್ಗೆ ಅಚ್ಚರಿ ವ್ಯಕ್ತಪಡಿಸಿದ್ದಾರೆ. "ನಮ್ಮ ವೆಬ್‌ಸೈಟ್‌ನಲ್ಲಿ ಕಳೆದ 48 ಗಂಟೆಗಳಲ್ಲಿ 3000ಕ್ಕಿಂತ ರೆಸ್ಯೂಮ್‌ಗಳನ್ನು ಸ್ವೀಕರಿಸಲಾಗಿದೆ, ಉದ್ಯೋಗ ಮಾರುಕಟ್ಟೆ ಎಷ್ಟು ಕೆಟ್ಟದಾಗಿದೆ?" ಎಂದು ಸ್ಪ್ರಿಂಗ್‌ವರ್ಕ್ಸ್ ಸಿಇಒ ಕಾರ್ತಿಕ್ ಮಾಂಡವಿಲ್ಲೆ ಟ್ವೀಟ್ ಮಾಡಿದ್ದಾರೆ. ಕಳೆದ ಒಂದು ತಿಂಗಳಿನಿಂದ ಪರಿಸ್ಥಿತಿ ಹೀಗೆ ಇದೆ, 13,000 ಅರ್ಜಿಗಳನ್ನು ಸ್ವೀಕರಿಸಿದ್ದಾರೆ.
ಕಂಪನಿ ವೆಬ್‌ಸೈಟ್‌ನಲ್ಲಿ ಮಾತ್ರ ಮಾಹಿತಿ
ತಮ್ಮ ಕಂಪನಿಯಲ್ಲಿ ಉದ್ಯೋಗ ಇರುವ ಬಗ್ಗೆ ಅವರು ಯಾವುದೇ ಸಾಮಾಜಿಕ ಮಾಧ್ಯಮ, ಜಾಬ್ ಸಂಬಂಧಿನ ವೆಬ್‌ಸೇಟ್, ಅಪ್ಲಿಕೇಷನ್‌ಗಳಲ್ಲಿ ಮಾಹಿತಿ ನೀಡಿಲ್ಲ. ಕೇವಲ ತಮ್ಮ ಕಂಪನಿಯ ವೆಬ್‌ಸೈಟ್‌ನಲ್ಲಿ ಮಾತ್ರ ಪ್ರಕಟಣೆ ನೀಡಿದ್ದರೂ ಈ ಪ್ರಮಾಣದಲ್ಲಿ ಅರ್ಜಿಗಳನ್ನು ಸ್ವೀಕರಿಸಿದ್ದಾರೆ. ಇದು ಮಾಂಡವಿಲ್ಲೆ ಅವರಿಗೆ ಇನ್ನಷ್ಟು ಅಚ್ಚರಿಯನ್ನು ಉಂಟು ಮಾಡಿದೆ.
Received over 3K resumes in the last 48 hours just on our website - how bad is the job market?
— Kartik Mandaville (@kar2905) July 16, 2023
ನೇಮಕಾತಿ ಎಚ್ಚರಿಕೆಗಳನ್ನು ಎಲ್ಲಿ ಪ್ರಚಾರ ಮಾಡುತ್ತಿದ್ದೀರಿ ಎಂದು ಅನುಯಾಯಿಯೊಬ್ಬರು ಕೇಳಿದಾಗ, ಸಿಇಒ ಹೇಳಿದರು, "ಈಗ ಎಲ್ಲಿಯೂ ಇಲ್ಲ. ಅದಕ್ಕಾಗಿಯೇ ನನಗೆ ಆಶ್ಚರ್ಯವಾಗಿದೆ." ಎಂದು ಪ್ರತ್ಯುತ್ತರ ನೀಡಿದ್ದಾರೆ.
ಈ ಬಗ್ಗೆ ಪರಿಶೀಲನೆ ಮಾಡಲುಕಂಪನಿಯ ವೆಬ್‌ಸೈಟ್‌ಗೆ ಭೇಟಿ ನೀಡಿದಾಗ ಉತ್ಪನ್ನ, ಸ್ಥಾಪಕರ ಕಛೇರಿ ಮತ್ತು ಸಾಫ್ಟ್‌ವೇರ್ ಡೆವಲಪ್‌ಮೆಂಟ್ ಇಂಜಿನಿಯರ್‌ಗಳಲ್ಲಿ "ರಿಮೋಟ್ ಸ್ಥಳಗಳಿಂದ" ಕೆಲಸ ಮಾಡಲು ಆಕಾಂಕ್ಷಿಗಳಿಂದ ಅರ್ಜಿಯನ್ನು ಆಹ್ವಾನ ಮಾಡಲಾಗಿದೆ.
ನಿರುದ್ಯೋಗ ಪ್ರಮಾಣ ಹೆಚ್ಚಳ
ಟ್ವೀಟ್‌ಗೆ ಹಲವು ಟ್ವಿಟರ್ ಬಳಕೆದಾರರು ಪ್ರತಿಕ್ರಿಯೆ ನೀಡಿದ್ದು ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಹಲವು ಕಂಪನಿಗಳಲ್ಲಿ ನೌಕರರನ್ನು ಕೆಲಸದಿಂದ ವಜಾ ಮಾಡುತ್ತಿರುವುದರಿಂದ ಇಷ್ಟು ಅರ್ಜಿಗಳು ಬಂದಿರಬಹುದು ಎಂದು ಹೇಳಿದ್ದರೆ. ಇನ್ನೊಬ್ಬರು ಈ ಕೆಲಸ ಸಂಪೂರ್ಣವಾಗಿ ವರ್ಕ್ ಫ್ರಂ ಹೋಮ್ ಇರುವುದರಿಂದ ಹೆಚ್ಚಿನ ಅರ್ಜಿಗಳನ್ನು ಸ್ವೀಕರಿಸಿದೆ ಎಂದು ಹೇಳಿದ್ದಾರೆ.
"ನಿಮ್ಮ ಪಟ್ಟಿಯಲ್ಲಿನ ಪ್ರತಿಯೊಂದು ಅವಕಾಶದ ಪಕ್ಕದಲ್ಲಿರುವ 'ರಿಮೋಟ್' ಪದದ ಕಾರಣದಿಂದಾಗಿ ಸಂಖ್ಯೆಗಳು ಪ್ರಾಥಮಿಕವಾಗಿ ಹೆಚ್ಚಾಗುತ್ತವೆ. ಇದು ಆನ್-ಸೈಟ್ ಪಾತ್ರವಾಗಿದ್ದರೆ ಎಷ್ಟು ಅರ್ಜಿಗಳು ಬರಬಹುದು ಎಂದು ನಾನು ಆಶ್ಚರ್ಯ ಪಡುತ್ತೇನೆ" ಎಂದು ಮಹೇಶ್ ಎನ್ನುವವರು ಪ್ರತಿಕ್ರಿಯೆ ನೀಡಿದ್ದಾರೆ.
ಉದ್ಯೋಗ ಮಾರುಕಟ್ಟೆಯ ಕುರಿತು ಪ್ರತಿಕ್ರಿಯಿಸುತ್ತಾ, ಬಳಕೆದಾರ ಕಬೀರ್ ಸಿಂಗ್ ಪ್ರತಿಕ್ರಿಯೆ ನೀಡಿದ್ದು, "ನಾನು ದೆಹಲಿಯ ಐಟಿ ಕಂಪನಿಯೊಂದಕ್ಕೆ ವಾಕ್-ಇನ್ ಸಂದರ್ಶನಕ್ಕೆ ಹೋಗಿದ್ದೆ. ಕಂಪನಿಯದ್ದು ದೊಡ್ಡ ಹೆಸರು ಅಲ್ಲ, ನನ್ನ ಸಂಬಂಧಿಕರೊಬ್ಬರು ಸಂದರ್ಶನಗಳನ್ನು ನಡೆಸುವ ತಂಡವನ್ನು ಮುನ್ನಡೆಸುತ್ತಿದ್ದರು. ನಾನು ಕೇವಲ ಸಂದರ್ಶಕನಾಗಿದ್ದೆ. ಸರಿಸುಮಾರು 20 ಸ್ಥಾನಗಳಿಗೆ 700 ಜನರು ಬಂದಿದ್ದಾರೆ! ಮತ್ತು ಅದು ಕೂಡ ವಾರ್ಷಿಕ 2.5 ಲಕ್ಷ ರೂಪಾಯಿ ಸಂಬಳಕ್ಕಾಗಿ" ಎಂದು ಹೇಳಿದರು.
-
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Gold Rate Today: ಸತತ ನಾಲ್ಕನೇ ದಿನವು ಚಿನ್ನ-ಬೆಳ್ಳಿ ದರ ಭರ್ಜರಿ ಇಳಿಕೆ, ಇಂದಿನ ದರವೆಷ್ಟು? -
ಆರ್ಸಿಬಿಗೆ ಚಾರ್ಟರ್ಡ್ ಫ್ಲೈಟ್ ಸೌಲಭ್ಯದ ಬೇಡಿಕೆ ಆರೋಪ: ಒಂದೇ ಎಮೋಜಿ ಹಾಕಿ ಕಿಂಗ್ ಕೊಹ್ಲಿ ಸಷ್ಟನೆ -
Devanahalli accident: ದೇವನಹಳ್ಳಿ ಬಳಿ ಭೀಕರ ಅಪಘಾತ: ಕಾಶಿಯಾತ್ರೆಗೆ ಹೊರಟಿದ್ದ ತಿಪಟೂರಿನ ಮೂವರು ಮಹಿಳೆಯರು ಸಾವು -
March 22 Horoscope: ಇಂದು ನಿಮ್ಮ ಧನ, ಆರೋಗ್ಯ, ಉದ್ಯೋಗದ ಭವಿಷ್ಯ ಹೇಗಿದೆ?












Click it and Unblock the Notifications