ಆಲಿಕಲ್ಲು ಮಳೆಯಲ್ಲಿ ಮಿಂದು ತಂಪಾದ ಬೆಂಗಳೂರು
ಬೇಸಿಗೆ ಬಿಸಿಲಿನ ತಾಪಕ್ಕೆ ಬೆಂದಿದ್ದ ಬೆಂಗಳೂರಿಗೆ ಶನಿವಾರ ಸಂಜೆ ಸುರಿದ ಆಲಿಕಲ್ಲು ಸಹಿತ ಮಳೆ ತಂಪೆರೆದಿದೆ. ಗುಡುಗು ಸಹಿತ ಭಾರಿ ಮಳೆ ಇನ್ನೂ ಹಲವೆಡೆ ಮುಂದುವರೆದಿದೆ.
ಬೆಂಗಳೂರು, ಏಪ್ರಿಲ್ 29: ಬೇಸಿಗೆ ಬಿಸಿಲಿನ ತಾಪಕ್ಕೆ ಬೆಂದಿದ್ದ ಬೆಂಗಳೂರಿಗೆ ಶನಿವಾರ ಸಂಜೆ ಸುರಿದ ಆಲಿಕಲ್ಲು ಸಹಿತ ಮಳೆ ತಂಪೆರೆದಿದೆ. ಗುಡುಗು ಸಹಿತ ಜೋರು ಮಳೆ ಇನ್ನೂ ಹಲವೆಡೆ ಮುಂದುವರೆದಿದೆ.
ಬೆಂಗಳೂರಿನ ರಾಜರಾಜೇಶ್ವರಿನಗರ, ಕೆಂಗೇರಿ, ನಾಯಂಡಹಳ್ಳಿ, ಬಸವನಗುಡಿ, ಜಯನಗರ, ಶಿವಾಜಿನಗರ, ಆಡುಗೋಡಿ ಮುಂತಾದೆಡೆ ಆಲಿಕಲ್ಲು ಮಳೆಯನ್ನು ಕಂಡ ಜನರು ಆನಂದದಿಂದ ಕೆಲ ಹೊತ್ತು ಮಳೆಯಲ್ಲಿ ನೆಂದು ನಂತರ ಮನೆ ಸೇರಿದ್ದಾರೆ.

ಕೆಂಗೇರಿಯಲ್ಲಿ ಮರದ ಕೊಂಬೆ ಬಿದ್ದ ಕಾರಣ ಕಾರೊಂದು ಜಖಂಗೊಂಡಿದೆ. ಕೋರಮಂಗಲ, ಸಿಲ್ಕ್ ಬೋರ್ಡ್, ಬನಶಂಕರಿ ಹೊರ ವರ್ತುಲ ರಸ್ತೆ, ಕೆ.ಆರ್ ಮಾರುಕಟ್ಟೆ, ಜೆಸಿ ರಸ್ತೆ, ಜಯದೇವ ಮೇಲ್ಸೇತುವೆ, ಹಡ್ಸನ್ ಸರ್ಕಲ್, ಲಾಲ್ ಬಾಗ್, ಗೂಡ್ಸ್ ಶೆಡ್ ರಸ್ತೆ, ಮೈಸೂರು ರಸ್ತೆ, ಮೇಖ್ರಿ ವೃತ್ತ, ಹೆಬ್ಬಾಳ ಸೇರಿದಂತೆ ಅನೇಕ ಕಡೆ ಟ್ರಾಫಿಕ್ ಜಾಮ್ ಸಮಸ್ಯೆ ಸಂಜೆ ಹೊತ್ತು ಹೆಚ್ಚಾಗಿತ್ತು.
Hail! Bangalore. #bangalorerain #hailstorm pic.twitter.com/Qu8GoYO4DH
— Subhashini (@NeelaVanam) April 29, 2017
ಹವಾಮಾನ ಮುನ್ಸೂಚನೆ: ಕರ್ನಾಟಕದ ಒಳನಾಡು, ಬೆಂಗಳೂರು ಗ್ರಾಮಾಂತರ ಹಾಗೂ ಇನ್ನಿತರ ಭಾಗಗಳಲ್ಲಿ ಪೂರ್ವ ಮುಂಗಾರು ಮಾರುತಗಳು ಇನ್ನೆರಡು ದಿನಗಳ ಕಾಲ ಗುಡುಗು ಸಹಿತ ಮಳೆ ಸುರಿಸಲಿವೆ. ಕೆಲ ಪ್ರದೇಶದಲ್ಲಿ ಆಲಿಕಲ್ಲು ಸಹಿತ ಭಾರಿ ಮಳೆ ಸುರಿಯುವ ಸಾಧ್ಯತೆಯೂ ಇದೆ ಎಂದು ಸ್ಕೈಮೆಟ್ ವೆದರ್ ವರದಿ ಮಾಡಿದೆ.












Click it and Unblock the Notifications