Bengaluru Second Airport: ಏರ್‌ಪೋರ್ಟ್ ಪ್ರಾಜೆಕ್ಟ್ ಹೈಜಾಕ್ ಆಗಿಲ್ಲ: ಜಿ.ಪರಮೇಶ್ವರ
ಬೆಂಗಳೂರು, ಏಪ್ರಿಲ್ 10: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (Bengaluru Second International Airprot Project) ನಿರ್ಮಾಣ ಯೋಜನೆ ಪ್ರಾಥಮಿಕ ಪ್ರಕ್ರಿಯೆ ಆರಂಭವಾಗಿದೆ. ಎರಡು ಕಡೆಗಳಲ್ಲಿ ಎಎಐ ತಂಡದ ಸದಸ್ಯರು ಪರಿಶೀಲಿಸುತ್ತಿದ್ದಾರೆ. ಯಾರು ಸಹ ಈ ಏರ್‌ಪೋರ್ಟ್ ಪ್ರಾಜೆಕ್ಟ್ ಅನ್ನು ಹೈಜಾಕ್ ಮಾಡಿಲ್ಲ ಎಂದು ಶಿರಾ ಭಾಗದಲ್ಲಿ ಏರ್‌ಪೋರ್ಟ್ ಬರಬೇಕೆಂದು ಒತ್ತಾಯಿಸಿದ್ದ ಗೃಹ ಸಚಿವ ಡಾ.ಜಿ.ಪರಮೇಶ್ವರ ಅವರು ತಿಳಿಸಿದರು.
ಜಿಲ್ಲೆಯ ಶ್ರೀ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿ ಸಿದ್ದಲಿಂಗ ಸ್ವಾಮಿಗಳ ದರ್ಶನ ಪಡೆದ ಬಳಿಕ ಅವರು ಸುದ್ದಿಗಾರರ ಹಲವು ಪ್ರಶ್ನೆಗಳಿಗೆ ಉತ್ತರಿಸಿದರು. ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದ (ಎಎಐ) ತಜ್ಞರ ತಂಡ ಬೆಂಗಳೂರಿನಲ್ಲಿದೆ. ಕನಕಪುರ ಹಾಗೂ ನೆಲಮಂಗಲದ ಕುಣಿಗಲ್ ಭಾಗದಲ್ಲಿ ಎರಡು ಕಡೆ ಸರ್ವೆ ಮಾಡಿದ್ದಾರೆ. ಅವರು ಅವರದ್ದೆ ಆದ ಪ್ಯಾರಾಮೀಟರ್ಸ್ ಇದೆ. ಅದರ ಅಡಿಯಲ್ಲೇ ಅವರು ಸರ್ವೇ ಮಾಡಿ, ಯಾವ ಜಾಗ ಉತ್ತಮ ಎಂದು ಶಿಫಾರಸು ಮಾಡುತ್ತಾರೆ.

ಏರ್‌ಪೋರ್ಟ್ ಯೋಜನೆ ಹೈಜಾಕ್ ಆಗಿಲ್ಲ
ಬೆಂಗಳೂರಿಗೆ ಬಂದಿರುವ ತಂಡ ತಾಂತ್ರಿಕವಾಗಿ ಹೆಚ್ಚಿನ ಅಂಶಗಳನ್ನು ಗಮನಿಸಿ ಸರ್ವೇ ಮಾಡುತ್ತಾರೆ. ಈ ಸರ್ವೇ ಟೆಕ್ನಿಕಲ್ ಆಗಿಯೇ ನಡೆಯುತ್ತದೆ. ಎಲ್ಲಿ ಸೂಕ್ತವೆನಿಸುತ್ತದೋ ಅಲ್ಲಿ ಹೊಸ ಏರ್‌ಪೋರ್ಟ್ ನಿರ್ಮಾಣಕ್ಕೆ ಅವರು ಶಿಫಾರಸು ಮಾಡುತ್ತಾರೆ. ಹೀಗಾಗಿ ಬೆಂಗಳೂರು ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಯೋಜನೆಯನ್ನು ಯಾರು ಹೈಜಾಕ್ ಆಗಿಲ್ಲ ಎಂದು ಅವರು ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದರು.
ಶಿರಾದಲ್ಲಿ ನಿರ್ಮಾಣವಾದರೆ 20 ಜಿಲ್ಲೆಗಳಿಗೆ ಅನುಕೂಲ
ಈ ಎಎಐ ತಂಡ ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ವ್ಯಾಪ್ತಿಯಲ್ಲಿ ಸರ್ವೆಗೆ ಬಂದಿಲ್ಲ. ಅವರು ಈ ಸ್ಥಳ ಪರಿಗಣಿಸಿ ಸರ್ವೇಗೆ ಬಂದಲ್ಲಿ ಹೆಚ್ಚಿನ ಸಂತೋಷವಾಗುತ್ತದೆ. ಒಂದು ವೇಳೆ ಶಿರಾದಲ್ಲಿ ಹೊಸ ಅಂತಾರಾಷ್ಟ್ರೀಯ ಏರ್‌ಪೋರ್ಟ್ ನಿರ್ಮಾಣವಾದರೆ ಈ ಭಾಗದ ಸೇರಿದಂತೆ ರಾಜ್ಯದ 20 ಜಿಲ್ಲೆಗಳಿಗೆ ಅನುಕೂಲವಾಗಲಿದೆ ಎಂದು ಅವರು ಹೇಳಿದ್ದರು. ಇದಕ್ಕು ಮೊದಲು ಸಹ ತುಮಕೂರು ವ್ಯಾಪ್ತಿಯಲ್ಲಿ (ಶಿರಾ) ಏರ್‌ಪೋರ್ಟ್ ನಿರ್ಮಾಣಕ್ಕೆ ಅವರು ಆಗ್ರಹಿಸಿದ್ದರು. ತದ ನಂತರ ಬೆಂಗಳೂರಿನ ಸಮೀಪವೇ ನಿರ್ಮಿಸಲಾಗುತ್ತದೆ, ಶಿರಾ, ಬಿಡದಿಯಲ್ಲೂ ನಿರ್ಮಾಣವಾಗಲ್ಲ ಎಂದು ಸಚಿವ ಎಂಬಿ ಪಾಟೀಲ್ ಅವರು ಹೇಳುವ ಮೂಲಕ ಎಲ್ಲರ ಮನವಿಯನ್ನು ಸ್ಪಷ್ಟ ಸಂದೇಶ ರವಾನಿಸಿದರು.

ಕೇಂದ್ರ ಸರ್ಕಾರ ಪರಿಗಣಿಸಬೇಕು
ತುಮಕೂರು ಜಿಲ್ಲೆಯ ಶಿರಾ ತಾಲೂಕು ವ್ಯಾಪ್ತಿಯಲ್ಲಿ ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾನ ನಿರ್ಮಿಸುವಂತೆ ಶಾಸಕ ಟಿಬಿ ಜಯಚಂದ್ರ ನೇತೃತ್ವದಲ್ಲಿ ಸುಮಾರು 30ಕ್ಕೂ ಹೆಚ್ಚು ಶಾಸಕರು ಆಗ್ರಹಿಸಿದ್ದರು. ಜೊತೆಗೆ ಪತ್ರ ಬರೆದಿದ್ದಾರೆ. ಈ ಪ್ರಶ್ನೆಗೆ, ಅವರು ಶಾಸಕರ ಮನವಿಯನ್ನು ಕೇಂದ್ರ ಸರ್ಕಾರ ಪರಿಗಣಿಸಬೇಕು. ಈ ಭಾಗದಲ್ಲಿ ಏರ್‌ಪೋರ್ಟ್ ಬಂದರೆ ನಮಗೂ ಖುಷಿಯೆ ಎಂದು ತಿಳಿಸಿದರು.
ಸರ್ವೇಗೆ ಶಿರಾ ಪರಿಗಣಿಸಿದರೆ ಸಂತೋಷ
ಇದಾದ ಬಳಿಕ ಸಚಿವರ ಜಿ.ಪಮರೇಶ್ವರ ಅವರು ಮತ್ತೆ ಪ್ರತಿಕ್ರಿಯಿಸಿದ್ದು, ಶಿರಾ ಭಾಗ ಸರ್ವೇ ಪರಿಗಣಿಸಿದರೆ ಅನುಕೂಲ ಎಂದಿದ್ದಾರೆ. ಈ ಯೋಜನೆಯು ಟೆಕ್ನಿಲ್ ಆಗಿ ಎಲ್ಲಿ ಸೂಕ್ತವೆನಿಸುತ್ತದೋ ಆ ಜಾಗ ಹೊಸ ಏರ್‌ಪೋರ್ಟ್ ನಿರ್ಮಾಣಕ್ಕೆ ಶಿಫಾರಸು ಮಾಡಲಾಗುತ್ತದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಏರ್‌ಪೋರ್ಟ್ ಯೋಜನೆ ಪ್ರಸ್ತಾಪವಾದ ದಿನದಿಂದಲೂ ಡಿಸಿಎಂ ಡಿಕೆ ಶಿವಕುಮಾರ್ ಅವರು ಕನಕಪುರ ಕಡೆಗೆ ಏರ್‌ಪೋರ್ಟ್ ಆಗಬೇಕು ಎಂದಿದ್ದರು. ಮುಂದೆ ಏನಾಗುತ್ತದೋ ನೊಡೋನ ಎನ್ನುವ ಮೂಲಕ ತಮ್ಮ ಒಲವು ವ್ಯಕ್ತಪಡಿಸಿದ್ದರು. ಇದೀಗ ಹತ್ತಾರು ಶಾಸಕರು ಶಿರಾ ಬಳಿ ಏರ್‌ಪೋರ್ಟ್ ನಿರ್ಮಿಸುವಂತೆ ಒತ್ತಡ ಹೇರುತ್ತಿದ್ದಾರೆ. ಸದ್ಯ ಯೋಜನೆ ಸರ್ವೆ ಹಂತದಲ್ಲಿದೆ. ಯಾವ ತೀರ್ಮಾಣವಾಗುತ್ತದೋ ಕಾದು ನೋಡಬೇಕು.












Click it and Unblock the Notifications